ಆ್ಯಪ್ನಗರ

ನೆರೆ ಸಂತ್ರಸ್ತರಿಗೆ ನೆರವಾಗಿ: ಸದಾಶಿವ ಶ್ರೀ

ಹಾವೇರಿ : ನೆರೆ ಸಂತ್ರಸ್ತರಿಗೆ ನೆರವು ನೀಡಲು ಹುಕ್ಕೇರಿಮಠದ ಮುಂದಾಗಿದೆ. ಶ್ರೀ ಮಠದ ಭಕ್ತಾದಿಗಳು, ಸಹೃದಯಿಗಳು, ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಸಹಾಯ ಮಾಡುವವರು ಆ.11ರೊಳಗೆ ಹುಕ್ಕೇರಿಮಠಕ್ಕೆ ಬಂತು ವಸ್ತುಗಳ ರೂಪದಲ್ಲಿ ಧನಸಹಾಯ ಮಾಡಬೇಕೆಂದು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮನವಿ ಮಾಡಿದ್ದಾರೆ.

Vijaya Karnataka 10 Aug 2019, 5:00 am
ಹಾವೇರಿ : ನೆರೆ ಸಂತ್ರಸ್ತರಿಗೆ ನೆರವು ನೀಡಲು ಹುಕ್ಕೇರಿಮಠದ ಮುಂದಾಗಿದೆ. ಶ್ರೀ ಮಠದ ಭಕ್ತಾದಿಗಳು, ಸಹೃದಯಿಗಳು, ಸಂಘ, ಸಂಸ್ಥೆಗಳು ಹಾಗೂ ದಾನಿಗಳು ಸಹಾಯ ಮಾಡುವವರು ಆ.11ರೊಳಗೆ ಹುಕ್ಕೇರಿಮಠಕ್ಕೆ ಬಂತು ವಸ್ತುಗಳ ರೂಪದಲ್ಲಿ ಧನಸಹಾಯ ಮಾಡಬೇಕೆಂದು ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮನವಿ ಮಾಡಿದ್ದಾರೆ.
Vijaya Karnataka Web neighboring victims sadashiva sri
ನೆರೆ ಸಂತ್ರಸ್ತರಿಗೆ ನೆರವಾಗಿ: ಸದಾಶಿವ ಶ್ರೀ


ಉತ್ತರ ಕರ್ನಾಟಕದಲ್ಲಿ ಜಲ ಪ್ರಳಯ ಮುಂದುವರೆದಿದ್ದು, ಜನ ಸಾಮಾನ್ಯರಿಗೆ ಅತ್ಯಂತ ತೊಂದರೆಯಾಗಿದೆ. ಬಹುಮುಖ್ಯವಾಗಿ ನದಿ ಪಾತ್ರದಲ್ಲಿ ಬರುವ ಹಳ್ಳಿಗಳು, ಪಟ್ಟಣಗಳು ಜಲಾವೃತಗೊಂಡಿದ್ದು ಅವರಿಗೆ ಸಹಾಯ ಮಾಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಸೂರು ಕಳೆದುಕೊಂಡವರಿಗೆ ಸಹಾಯದ ಮೂಲಕ ನಾವೆಲ್ಲರೂ ಸಹಕರಿಸಬೇಕಾಗಿದೆ. ಈ ಕಾರಣದಿಂದ ನಮ್ಮ ನಾಡಿನ ಮಠಗಳು ಅನ್ನ, ಅರಿವು, ಆಶ್ರಯಗಳ ಪವಿತ್ರ ತಾಣಗಳು. ಮನೆ ಕಳೆದುಕೊಂಡವರಿಗೆ ಮಠಗಳೇ ಆಶ್ರಯ ಈ ಹಿನ್ನೆಲೆಯಲ್ಲಿ ಶ್ರೀ ಹುಕ್ಕೇರಿಮಠ ಸಹಾಯ ಮಾಡಲು ಮುಂದಾಗಿದ್ದು ಮಠದ ಜೋಳಿಗೆ ಕೇವಲ ಮಠಕ್ಕೆ ಮಾತ್ರ ಸೀಮಿತವಲ್ಲ, ಸಮಾಜಕ್ಕೂ ಕೂಡ ಸ್ಪಂದಿಸಬೇಕಾಗಿದೆ ಎಂದು ಶ್ರೀಗಳು ತಿಳಿಸಿದ್ದಾರೆ. ಮಾಹಿತಿಗಾಗಿ ಮೊ.ನಂ.93803 13217, 97392 24446 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಇವನ್ನು ನೀಡಿ
ಬಟ್ಟೆಗಳು, ಹೊದಿಕೆ, ರಗ್‌, ಚಾಪಿ, ಸ್ವೆಟರ್‌, ಆಹಾರ ಧಾನ್ಯಗಳು, ಬಿಸ್ಕಿಟ್‌, ಡ್ರೈ ಪ್ರುಟ್ಸ್‌, ಬ್ರಶ್‌, ಪೇಸ್ಟ್‌, ಸೋಪು, ಚಪ್ಪಲಿಗಳು, ಸೊಳ್ಳೆ ಬತ್ತಿ, ಚಿಕ್ಕಮಕ್ಕಳ ಬಟ್ಟೆಗಳು, ಬ್ಯಾಟರಿ (ಟಾರ್ಚ್‌), ಹಾಗೂ ಇನ್ನಿತರ ದಿನನಿತ್ಯದ ಬಳಕೆ ವಸ್ತುಗಳು, ಔಷಧಿಗಳು ಹಾಗೂ ಹಣದ ರೂಪದಲ್ಲಿಯಾದರೂ ದೇಣಿಗೆ ರೂಪದಲ್ಲಿ ನೀಡಬಹುದೆಂದು ಶ್ರೀಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ