ಆ್ಯಪ್ನಗರ

ಹೊಸ ಕಲಾ ಯೋಜನೆಗಳಿಂದ ಕೀರ್ತಿ

ಹಾವೇರಿ: ಕಲಾವಿದರು ಹೊಸ ರೀತಿಯ ಕಲಾ ಯೋಜನೆಗಳನ್ನು ರೂಪಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಕಲಾವಿದ ಜೂನಿಯರ್‌ ರಾಜಕುಮಾರ ಅಶೋಕ ಬಸ್ತಿ ಹೇಳಿದರು.

Vijaya Karnataka 29 Jun 2020, 5:00 am
ಹಾವೇರಿ: ಕಲಾವಿದರು ಹೊಸ ರೀತಿಯ ಕಲಾ ಯೋಜನೆಗಳನ್ನು ರೂಪಿಸಿ ಜಿಲ್ಲೆಯ ಕೀರ್ತಿಯನ್ನು ಹೆಚ್ಚಿಸಬೇಕು ಎಂದು ಕಲಾವಿದ ಜೂನಿಯರ್‌ ರಾಜಕುಮಾರ ಅಶೋಕ ಬಸ್ತಿ ಹೇಳಿದರು.
Vijaya Karnataka Web new art projects
ಹೊಸ ಕಲಾ ಯೋಜನೆಗಳಿಂದ ಕೀರ್ತಿ


ನಗರದ ಗೆಳೆಯರ ಬಳಗದ ಶಾಲೆಯಲ್ಲಿಶನಿವಾರ ಸಂಜೆ ಬೀದಿ ನಾಟಕ ಪರಂಪರೆಯನ್ನು ಸæೖದ್ಧಾಂತಿಕವಾಗಿ ಕಟ್ಟಿ ಬೆಳೆಸಿದ ರಂಗ ನಿರ್ದೇಶಕ ಸಿ.ಜಿ.ಕೆ ಅವರ ಜನ್ಮ ದಿನದ ಸ್ಮರಣೆಯ ರಂಗ ಪುರಸ್ಕಾರ ಸಮಾರಂಭದಲ್ಲಿಇಬ್ಬರು ರಂಗ ಸಾಧಕರಾದ ಜಿ.ಎಂ.ಓಕಾರಣ್ಣನವರ ಮತ್ತು ಆರ್‌.ಸಿ.ನಂದಿಹಳ್ಳಿ ಅವರಿಗೆ ಪ್ರಶಸ್ತಿ ಪುರಸ್ಕಾರ ನೀಡಿ ಮಾತನಾಡಿದರು.

ಹಾವೇರಿಯಲ್ಲಿಹೌದು ಎನಿಸಿಕೊಂಡವ ಎಲ್ಲಾಕಡೆ ಸೈ ಎನಿಸಿಕೊಳ್ಳುತ್ತಾನೆ. ನಾವು ಕಲಾವಿದರು ಹೊಸ ರೀತಿಯ ಕಲೆಗಳನ್ನು ಮೈಗೂಡಿಸಿಕೊಂಡು ಹಾವೇರಿ ಜಿಲ್ಲೆಯ ಕೀರ್ತಿ ಹೆಚ್ಚಿಸಬೇಕು ಎಂದರು. ಸಮಾಜದ ರೋಗಗಳ ವಿರುದ್ಧ ಬೀದಿ ನಾಟಕಗಳ ಮೂಲಕ ಜನರಲ್ಲಿಜಾಗೃತಿ, ಕೊರೊನಾ ಎಂಬ ಕೆಟ್ಟ ಕಾಲದಲ್ಲಿಜನರಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಈ ದಿಸೆಯಲ್ಲಿನಿರಂತರವಾಗಿ ಶ್ರಮಿಸಿದ ಓಂಕಾರಣ್ಣನವರ ಮತ್ತು ನಂದಿಹಳ್ಳಿ್ಳ ಅವರಿಗೆ ಗೌರವಿಸುವ ಭಾಗ್ಯ ನನ್ನದಾಗಿದೆ ಎಂದು ನುಡಿದರು.

ಜಿ.ಎಚ್‌. ಕಾಲೇಜಿನ ಹಿಂದಿ ವಿಭಾಗದ ಮುಖ್ಯಸ್ಥೆ ಡಾ.ಮಹಾದೇವಿ ಕಣವಿ ಬೀದಿ ನಾಟಕ ಮತ್ತು ಸಿ.ಜಿ.ಕೆ ಕುರಿತು ಉಪನ್ಯಾಸ ನೀಡಿದ ಅವರು, ಯಾವ ಫಲಾಪೇಕ್ಷೆ ಇಲ್ಲದೆ ಜನ ಜಾಗೃತಿ ಮೂಡಿಸುವ ಬೀದಿ ನಾಟಕ ಜನತೆಯ ರಂಗ ಭೂಮಿ. ನಮ್ಮಲ್ಲಯೂ ಹಗಲು ವೇಷಗಾರರು, ದರುಗ ಮುರಗಿಯವರೂ ಇಂತಹ ಬೀದಿ ನಾಟಕ ಪರಂಪರೆಯಲ್ಲಿಸೇರಿದವರು. ಹೊಸ ಕಾಲದಲ್ಲಿಸಿ.ಜಿ.ಕೆ. ಇದಕ್ಕೆ ತಾತ್ವಿಕ ಶಿಸ್ತು ಮತ್ತು ವೈಚಾರಿಕ ಪ್ರಜ್ಞೆಯನ್ನು ಕೊಟ್ಟಿದ್ದಾರೆ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿದ ಆರ್‌.ಸಿ.ನಂದಿಹಳ್ಳಿ ಮಾತನಾಡಿ, ನಾಟಕಗಳು ನಮ್ಮ ಜ್ಞಾನವನ್ನು ಚುರುಕುಗೊಳಿಸಿವೆ. ಜೊತೆಗೆ ವೃತ್ತಿ ಕೌಶಲ ಹೆಚ್ಚಿಸುವಲ್ಲಿಸಹಾಯ ಮಾಡಿವೆ. ರಂಗಭೂಮಿಯ ನಾನಾ ಅನುಭವಗಳು ವಾಸ್ತವ ಎದುರಿಸುವ ಶಕ್ತಿ ಕೊಟ್ಟಿವೆ ಎಂದರು.

ಇನ್ನೊಬ್ಬ ಪುರಸ್ಕೃತ ಜಿ.ಎಂ. ಓಂಕಾರಣ್ಣನವರ ಮಾತನಾಡಿ, ಮಕ್ಕಳ ಮೂಲಕವೇ ರಂಗಭೂಮಿಯನ್ನು ನೋಡಿ ಕಲಿತವನು. ಹೀಗಾಗಿ ಈ ಪ್ರಶಸ್ತಿಯನ್ನು ಮಕ್ಕಳಿಗೇ ಅರ್ಪಿಸುವೆನು ಎಂದು ಹೇಳಿ ನನ್ನೆಲ್ಲನಾಟಕಗಳು ಹತ್ತಾರು ಪ್ರಯೋಗಗಳನ್ನು ಕಂಡ ಮೇಲೆಯೇ ಮುದ್ರಣವಾದಂತವುಗಳು. ಹಾವೇರಿ ನೆಲ ನನ್ನ ರಂಗಶಕ್ತಿಗೆ ಬಲ ಕೊಟ್ಟದ್ದನ್ನು ಮರೆಯಲಾರೆ ಎಂದರು.

ಗೆಳೆಯರ ಬಳಗದ ಅಧ್ಯಕ್ಷ ವ್ಹಿ.ಎಂ. ಪತ್ರಿ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಕೆ.ಆರ್‌. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಶಸ್ತಿ ಪುರಸ್ಕೃತರ ಪರಿಚಯವನ್ನು ಸುರೇಖಾ ನೇರಳಿಕರ ಮತ್ತು ರಾಜಾ ಭಕ್ಷು ಮಾಡಿಕೊಟ್ಟರು. ಶಿಕ್ಷಕ ಜಗದೀಶ ಚೌಟಗಿ ಸ್ವಾಗತಿಸಿದರು. ಶಿಕ್ಷಕ ನಾಗರಾಜ ನಡುವಿನಮಠ ನಿರ್ವಹಿಸಿದರು. ಕಲಾವಿದ ಕರಿಯಪ್ಪ ಹಂಚಿನಮನಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ