ಆ್ಯಪ್ನಗರ

ಶಾಲಾ ಕೊಠಡಿಗಳ ಉದ್ಘಾಟನೆ

ರಾಣೇಬೆನ್ನೂರ : ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಖಾಸಗಿ ಕಂಪನಿಗಳು ಮುಂದಾಗಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌. ಶ್ರೀಧರ ಹೇಳಿದರು.

Vijaya Karnataka 17 Jul 2019, 5:00 am
ರಾಣೇಬೆನ್ನೂರ : ಸರಕಾರಿ ಶಾಲೆಗಳಿಗೆ ಮೂಲ ಸೌಲಭ್ಯ ಒದಗಿಸಲು ಖಾಸಗಿ ಕಂಪನಿಗಳು ಮುಂದಾಗಿರುವುದು ಶ್ಲಾಘನೀಯ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌. ಶ್ರೀಧರ ಹೇಳಿದರು.
Vijaya Karnataka Web opening of school rooms
ಶಾಲಾ ಕೊಠಡಿಗಳ ಉದ್ಘಾಟನೆ


ತಾಲೂಕಿನ ಸುಣಕಲ್ಲಬಿದರಿ ಗ್ರಾಮದ ಸರಕಾರಿ ಮಾದರಿ ಶಾಲೆಯಲ್ಲಿ ಈಸ್ಟ್‌ವೆಸ್ಟ್‌ ಸೀಡ್ಸ್‌ ಕಂಪನಿ ಸಹಯೋಗದಲ್ಲಿ ನವೀಕರಿಸಲಾದ ಕೊಠಡಿಗಳನ್ನು ಉದ್ಘಾಟಿಸಿ ಮಾತನಾಡಿದರು. ಶಾಲೆಗೆ ದಾನಿಗಳ ನೆರವಿನಿಂದ ಈಗಾಗಲೇ ಲಕ್ಷಾಂತರ ಮೌಲ್ಯದ ಪೀಠೋಪಕರಣ, ಸ್ಮಾರ್ಟ್‌ ಕ್ಲಾಸ್‌, ಕೊಠಡಿಗಳ ನವೀಕರಣ, ಗ್ರಂಥಾಲಯಕ್ಕೆ ಅಗತ್ಯವಾದ ಪುಸ್ತಕಗಳು, ಅಲ್ಮೇರಾ ಹಾಗೂ ಕ್ರೀಡಾ ಸಾಮಗ್ರಿಗಳನ್ನು ಸಂಗ್ರಹಿಸಲಾಗಿದೆ. ಮಕ್ಕಳು ಇವುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಶೈಕ್ಷ ಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು.

ಈಸ್ಟ್‌ವೆಸ್ಟ್‌ ಸೀಡ್ಸ್‌ ಕಂಪನಿ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ, ತಾಲೂಕು ದೈಹಿಕ ಶಿಕ್ಷ ಣಾಧಿಕಾರಿ ಎ.ಬಿ.ಚಂದ್ರಶೇಖರ, ಗ್ರಾಪಂ ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷ ರು, ಸದಸ್ಯರು, ಗ್ರಾಮಸ್ಥರು, ಶಿಕ್ಷ ಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ