ಆ್ಯಪ್ನಗರ

ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ

ಬಸವರಾಜ ಸರೂರ ರಾಣೇಬೆನ್ನೂರ: ನಗರದಲ್ಲಿಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ರೋಸಿಹೋಗಿದ್ದಾರೆ.

Vijaya Karnataka 10 Sep 2019, 5:00 am
ಬಸವರಾಜ ಸರೂರ ರಾಣೇಬೆನ್ನೂರ: ನಗರದಲ್ಲಿಇತ್ತೀಚೆಗೆ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಜನರು ರೋಸಿಹೋಗಿದ್ದಾರೆ.ಇಲ್ಲಿನ ಭೂತೆ ಗಲ್ಲಿಮತ್ತು ಖತೀಬ ಗಲ್ಲಿನಡುವಿನ ಪ್ರದೇಶಗಳಲ್ಲಿನಾಯಿಗಳ ಹಾವಳಿ ಅಧಿಕವಾಗಿದೆ. ಇಲ್ಲಿಂದ ಸ್ವಲ್ಪ ದೂರದಲ್ಲಿಮಾಂಸದ ಅಂಗಡಿಗಳಿರುವುದು ನಾಯಿಗಳು ಹೆಚ್ಚಿನ ಪ್ರಮಾಣದಲ್ಲಿಜಮಾಯಿಸಲು ಕಾರಣವಾಗಿದೆ.
Vijaya Karnataka Web outbreak of street dogs
ಮಿತಿ ಮೀರಿದ ಬೀದಿ ನಾಯಿಗಳ ಹಾವಳಿ


ಇದಲ್ಲದೆ ತಳವಾರ ಗಲ್ಲಿ, ಪೋಸ್ಟ್‌ ಸರ್ಕಲ್‌, ಚೌಡೇಶ್ವರಿ ದೇವಸ್ಥಾನ, ಚಕ್ಕಮಕ್ಕಿ ದೇವಸ್ಥಾನ ಸುತ್ತಮುತ್ತ, ದೊಡ್ಡಪೇಟೆ, ಕೋಟೆ ಮುಂತಾದ ಪ್ರದೇಶಗಳಲ್ಲಿನಾಯಿ ಹಾವಳಿ ಅಧಿಕವಾಗಿದೆ.

ಕೈಚೆಲ್ಲಿದ ಅಧಿಕಾರಿಗಳು: ನಾಯಿಗಳ ಹಾವಳಿ ತಡೆಗಟ್ಟಲು ಸಾರ್ವಜನಿಕರು ಹಲವು ಬಾರಿ ನಗರಸಭೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಆದರೆ ಕೆಲ ಕಾನೂನುಗಳು ಹಾಗೂ ಪ್ರಾಣಿದಯಾ ಸಂಘದ ಕಾರ್ಯಕರ್ತರ ಒತ್ತಡದಿಂದ ಯಾವುದೇ ಕ್ರಮಕ್ಕೆ ಮುಂದಾಗದೆ ಕೈಕಟ್ಟಿ ಕುಳಿತಿದ್ದಾರೆ.

ನಗರಸಭೆ ಅಧಿಕಾರಿಗಳ ಪ್ರಕಾರ, ಬೀದಿ ನಾಯಿಗಳನ್ನು ಕೊಲ್ಲಲು ಹೋದರೆ ಸುಪ್ರೀಂ ಕೋರ್ಟ್‌ ತೀರ್ಪಿನ ಉಲ್ಲಂಘನೆಯಾಗುತ್ತದೆ. ಅವುಗಳನ್ನು ನಿಯಂತ್ರಿಸಲು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸುವುದೇ ಒಂದು ಉತ್ತಮ ಪರಿಹಾರವಾಗಿದೆ. ಆದರೆ ನಗರದಲ್ಲಿಶಸ್ತ್ರಚಿಕಿತ್ಸೆ ಸೌಲಭ್ಯವಿಲ್ಲ ಎನ್ನುತ್ತಾರೆ. ಒಟ್ಟಾರೆ ನಗರದಲ್ಲಿಬೀದಿ ನಾಯಿಗಳ ಹಾವಳಿಯನ್ನು ನಿಯಂತ್ರಿಸುವುದು ಅತಿ ದೊಡ್ಡ ಸವಾಲಿನ ಕೆಲಸವಾಗಿದೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ