ಆ್ಯಪ್ನಗರ

ಅರ್ಚಕರಿಗೆ ಪ್ಯಾಕೇಜ್‌, ಸಿಎಂ ಜತೆ ಚರ್ಚೆ

ಬ್ಯಾಡಗಿ: ಕೊರೊನಾದ ಸಂಕಷ್ಟದ ಸಮಯದಲ್ಲಿಎಲ್ಲಾದೇವಾಲಯಗಳ ಅರ್ಚಕರಿಗೆ ಪ್ಯಾಕೇಜ್‌ ಘೋಷಣೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.

Vijaya Karnataka 14 May 2020, 5:00 am
ಬ್ಯಾಡಗಿ: ಕೊರೊನಾದ ಸಂಕಷ್ಟದ ಸಮಯದಲ್ಲಿಎಲ್ಲಾದೇವಾಲಯಗಳ ಅರ್ಚಕರಿಗೆ ಪ್ಯಾಕೇಜ್‌ ಘೋಷಣೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
Vijaya Karnataka Web package for priests discussion with cm
ಅರ್ಚಕರಿಗೆ ಪ್ಯಾಕೇಜ್‌, ಸಿಎಂ ಜತೆ ಚರ್ಚೆ


ಪಟ್ಟಣದ ಸಂಗಮೇಶ್ವರ ದೇವಸ್ಥಾನದಲ್ಲಿರೇಣಕಾಚಾರ್ಯ ಫೌಂಡೇಶನ್‌ ಅರ್ಚಕರಿಗಾಗಿ ವಿವಿಧ ದಾನಿಗಳಿಂದ ಸಂಗ್ರಹಿಸಿದ ಆಹಾರ ಕಿಟ್‌ಗಳನ್ನು ವಿತರಿಸಿ ಮಾತನಾಡಿದ ಅವರು, ಕೊರೊನಾದಿಂದ ಬೃಹತ್‌ ದೇವಾಲಯಗಳೂ ಆರ್ಥಿಕವಾಗಿ ಹಿನ್ನೆಡೆ ಸಾಧಿಸಿದ್ದು, ಕೆಲ ದೇವಾಲಯಗಳಲ್ಲಿಅರ್ಚಕರಿಗೆ ಹಾಗೂ ಪರಿಚಾರಕರಿಗೆ ವೇತನ ನೀಡಲು ಸಾಧ್ಯವಾಗದೇ ಹೆಣಗಾಡುತ್ತಿವೆ ಎಂದರು.

ರಾಣೇಬೆನ್ನೂರು ಶನೀಶ್ವರ ಮಠದ ಶಿವಯೋಗಿ ಶಿವಾಚಾರ‍್ಯಶ್ರೀಗಳು ಮಾತನಾಡಿ, ಕೊರೊನಾ ವಿರುದ್ಧ ಅರ್ಚಕರು ಹೋರಾಟಕ್ಕಿಳಿದಿದ್ದು ವಿದೇಶಗಳಲ್ಲಿಯೂ ಮೃತ್ಯುಂಜಯ ಜಪ (ಮಂತ್ರ ಪಠಣ)ನಡೆಯುತ್ತಿದ್ದು ಭಾರತದ ಅಧ್ಯಾತ್ಮಿಕ ಶಕ್ತಿ ಏನೆಂಬುದನ್ನು ವಿಶ್ವಕ್ಕೆ ಪರಿಚಯಿಸಲಾಗುತ್ತಿದೆ ಎಂದರು.

ಅಧ್ಯಕ್ಷ ಗಿರೀಶ್‌ ಇಂಡಿಮಠ ಅಧ್ಯಕ್ಷತೆ ವಹಿಸಿದ್ದರು, ಮುಖಂಡರಾದ ಎಸ್‌.ಆರ್‌.ಪಾಟೀಲ, ಲಿಂಗಯ್ಯ ಹಿರೇಮಠ, ಬಿ.ಎಂ.ಛತ್ರದ, ಬಾಲಚಂದ್ರ ಪಾಟೀಲ, ರವೀಂದ್ರ ಹೊನ್ನಾಳಿ, ಬಸವರಾಜಯ್ಯ ಹಿರೇಮಠ, ವಿ.ವಿ.ಹಿರೇಮಠ, ಜೆ.ಸಿ.ಚಿಲ್ಲೂರಮಠ, ಮೃತ್ಯುಂಜಯ್ಯ ಹಿರೇಮಠ, ಶ್ರೀಧರ ಗೋಸಾವಿ, ಮಹೇಶ ಹಿರೇಮಠ, ರುದ್ರಯ್ಯ ಹಿರೇಮಠ, ಅರುಣಕುಮಾರ ಹಿರೇಮಠ, ಕರಬಸಯ್ಯ ಹಿರೇಮಠ, ವಾಮದೇವಪ್ಪ ಎಸ್‌.ಮಂಜಯ್ಯಸ್ವಾಮಿ ಹಿರೇಮಠ, ಚನ್ನವೀರಯ್ಯ ಹಿರೇಮಠ, ಕುಮಾರಸ್ವಾಮಿ ಹಿರೇಮಠ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ