ಆ್ಯಪ್ನಗರ

ಪಾರ್ಥೇನಿಯಂ ನಿರ್ಮೂಲನಾ ತಿಳಿವಳಿಕೆ ಸಪ್ತಾಹ

ಕಾಕೋಳ: ಪಾರ್ಥೇನಿಯಂ ಸಸ್ಯ ಒಂದು ವಿನಾಶಕಾರಿ ಕಳೆಯಾಗಿದೆ. ಇದರಲ್ಲಿನ ಪಾರ್ಥಿನ್‌ ಎಂಬ ಲ್ಯಾಕ್ಟೋನ್‌ ಎಂಬ ಅಂಶ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿದ್ದು, ಚರ್ಮದ ಅಲರ್ಜಿ ಉಂಟುಮಾಡುತ್ತದೆ ಎಂದು ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಹೇಳಿದರು.

Vijaya Karnataka 23 Aug 2019, 5:00 am
ಕಾಕೋಳ: ಪಾರ್ಥೇನಿಯಂ ಸಸ್ಯ ಒಂದು ವಿನಾಶಕಾರಿ ಕಳೆಯಾಗಿದೆ. ಇದರಲ್ಲಿನ ಪಾರ್ಥಿನ್‌ ಎಂಬ ಲ್ಯಾಕ್ಟೋನ್‌ ಎಂಬ ಅಂಶ ಮನುಷ್ಯರಿಗೆ ಹಾಗೂ ಪ್ರಾಣಿಗಳಿಗೆ ಅಪಾಯಕಾರಿಯಾಗಿದ್ದು, ಚರ್ಮದ ಅಲರ್ಜಿ ಉಂಟುಮಾಡುತ್ತದೆ ಎಂದು ಹಿರಿಯ ವಿಜ್ಞಾನಿ ಡಾ.ಅಶೋಕ ಪಿ. ಹೇಳಿದರು.
Vijaya Karnataka Web HVR-21 KLK 01A


ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರ ಆಯೋಜಿಸಿರುವ ಪಾರ್ಥೇನಿಯಂ ಜಾಗೃತಿ ಸಪ್ತಾಹದಂಗವಾಗಿ ಹನುಮನಮಟ್ಟಿ ಕೆ.ಎಲ್‌.ಇ. ಫ್ರೌಢ ಶಾಲೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಪಾರ್ಥೇನಿಯಂ ಕಸ ಕೀಳುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ಕಳೆ ಹೆಚ್ಚು ಪ್ರಮಾಣದಲ್ಲಿ ಪರಾಗ ಉತ್ಪಾದಿಸುವುದರಿಂದ ವಾತಾವರಣದಲ್ಲಿ ಸೇರಿ ಉಸಿರಾಟದ ತೊಂದರೆ ಉಂಟಾಗುತ್ತದೆ. ರೈತರಿಗೆ ಕಡಿಮೆ ಬೆಳೆ ಉತ್ಪಾದನೆ, ಬೆಳೆಯ ಗುಣಮಟ್ಟ, ಮಣ್ಣಿನ ಗುಣಮಟ್ಟಕ್ಕೆ ಹಾನಿ ಮಾಡುವುದರಿಂದ ಕಳೆಯು ಸಮಗ್ರ ನಿರ್ವಹಣೆ ಮತ್ತು ಅದರ ಸಂಪೂರ್ಣ ವಿನಾಶ ಮಾಡುವುದು ಅಗತ್ಯವಾಗಿದೆ ಎಂದರು.

ಪಾರ್ಥೇನಿಯಂ ಕಳೆಯ ಪ್ರಸಾರ ತಡೆಯಬೇಕು. ಕಳೆ ಚಿಕ್ಕದಿದ್ದಾಗಲೇ ಕಿತ್ತುಹಾಕಿ ಬೀಜೋತ್ಪಾದನೆ ತಡೆಯಬೇಕು. ಉದ್ದು ಕೈತೋಳುಳ್ಳ ತುಂಬು ಬಟ್ಟೆ ಹಾಗೂ ಗ್ಲೌಸ್‌ ಹಾಕಿಕೊಂಡು ಕಳೆ ಕಿತ್ತು ಹಾಕಬೇಕು ಕೃಷಿ ಜಮೀನಿನಲ್ಲಿ ಕಳೆ ಕಂಡಾಗ ಕಳೆನಾಶಕ ಸಿಂಪಡಿಸಬೇಕು ಎಂದರು.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಸಂತೋಷ ಎಚ್‌.ಎಮ್‌, ಮುಖ್ಯೋಪಾಧ್ಯಾಯ ಎಲ್‌. ಬಿ. ಅಜ್ಜೇರ್‌, ದೈಹಿಕ ಶಿಕ್ಷ ಕ ರಾಮಣ್ಣ ಲಮಾಣಿ, ಸಿಬ್ಬಂದಿ ಇದ್ದರು. 65 ಹೆಚ್ಚು ಶಾಲೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಡಾ.ಶಿವಮೂರ್ತಿ ಡಿ ನಿರೂಪಿಸಿದರು. ಡಾ.ಮಹೇಶ ಕಡಗಿಯವರು ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ