ಆ್ಯಪ್ನಗರ

ಕೋರ್ಟ್‌ ತೀರ್ಪುಗಳಿಂದ ಜನ ಎಚ್ಚೆತ್ತುಕೊಳ್ಳಬೇಕು

ಬ್ಯಾಡಗಿ : ಫೋಕ್ಸೋ ಕಾಯಿದೆ ಜಾರಿಗೊಂಡ ಬಳಿಕವೂ ಭಾರತದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿವೆ ಎಂಬುದನ್ನು ನಾವೇ ತೋರಿಸಿಕೊಟ್ಟಂತಾಗಿದ್ದು, ಕೆಲವರು ಮಾಡುವ ತಪ್ಪಿನಿಂದ ಖಂಡಿತವಾಗಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಖೇದ ವ್ಯಕ್ತಪಡಿಸಿದರು.

Vijaya Karnataka 29 Jul 2019, 5:00 am
ಬ್ಯಾಡಗಿ : ಫೋಕ್ಸೋ ಕಾಯಿದೆ ಜಾರಿಗೊಂಡ ಬಳಿಕವೂ ಭಾರತದಲ್ಲಿ ಬಾಲಕಿಯರ ಮೇಲೆ ಅತ್ಯಾಚಾರ ಪ್ರಕರಣ ನಡೆಯುತ್ತಿವೆ ಎಂಬುದನ್ನು ನಾವೇ ತೋರಿಸಿಕೊಟ್ಟಂತಾಗಿದ್ದು, ಕೆಲವರು ಮಾಡುವ ತಪ್ಪಿನಿಂದ ಖಂಡಿತವಾಗಿಯೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಹಿರಿಯಶ್ರೇಣಿ ದಿವಾಣಿ ನ್ಯಾಯಾಧೀಶ ಇಬ್ರಾಹಿಂ ಮುಜಾವರ ಖೇದ ವ್ಯಕ್ತಪಡಿಸಿದರು.
Vijaya Karnataka Web people should be alarmed by court rulings
ಕೋರ್ಟ್‌ ತೀರ್ಪುಗಳಿಂದ ಜನ ಎಚ್ಚೆತ್ತುಕೊಳ್ಳಬೇಕು


ಮೋಟೆಬೆನ್ನೂರಿನ ಮೈಲಾರ ಮಹದೇವ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಕಾನೂನು ಅರಿವು-ನೆರವು ಕಾರ‍್ಯಕ್ರಮಕ್ಕೆ ಚಾಲನೆ ನೀಡಿ ಬಳಿಕ ಮಾತನಾಡಿದರು.

ಒಂದು ಕಾನೂನು ಜಾರಿಗೊಳ್ಳುವುದರಿಂದ ಆ ದೇಶ ಎದುರಿಸುತ್ತಿರುವ ಜ್ವಲಂತ ಸಮಸ್ಯೆಯನ್ನು ಎತ್ತಿ ತೋರಿಸಿದಂತಾಗುತ್ತದೆ. ಅಷ್ಟೇ ಏಕೆ ಸಮಾಜ ವಿರೋಧಿ ಚಟುವಟಿಕೆಗಳನ್ನು ನಿಗ್ರಹಿಸಲು ಜಾರಿಯಾಗುವ ಕಾನೂನುಗಳಿಂದ ಅಪ್ರತ್ಯಕ್ಷ ವಾಗಿ ನಮ್ಮ ದೇಶದ ಗೌರವ ಘನತೆಗೆ ಧಕ್ಕೆಯಾಗುವುದು ನಿಶ್ಚಿತ. ಹೀಗಾಗಿ ಕಾನೂನಿನ ಸೂಕ್ಷ ್ಮತೆ ಹಾಗೂ ಅದರ ಉದ್ದೇಶಗಳನ್ನು ಪ್ರತಿಯೊಬ್ಬರು ಅಥೈರ್‍ಸಿಕೊಳ್ಳುವ ಮೂಲಕ ಫೋಕ್ಸೋ ಕಾಯಿದೆ ಜಾರಿಯಾಗುವಂತಹ ತಪ್ಪುಗಳನ್ನು ಮಾಡದಿದ್ದರೇ ಸಾಕು ದೇಶಕ್ಕೆ ಕೊಟ್ಟ ಅತೀ ದೊಡ್ಡ ಗೌರವ ಇನ್ನೊಂದಿಲ್ಲ ಎಂದರು.

ಕಿರಿಯ ಶ್ರೇಣಿ ದಿವಾಣಿ ನ್ಯಾಯಾಧೀಶ ರಾಜೇಶ್‌ ಹೊಸ್ಮನಿ ಮಾತನಾಡಿ, ಕಳೆದ 2012 ರಲ್ಲಿ ಜಾರಿಗೆ ಬಂದಂತಹ ಫೋಕ್ಸೋ ಕಾಯಿದೆಯಿಂದ ಬಾಲಕಿಯರ ಮೇಲೆ ಅತ್ಯಾಚಾರವೆಸಗಿದ ಆರೋಪಿಗಳಿಗೆ ಶಿಕ್ಷೆ ಕೊಡಿಸಬಹುದಾಗಿದ್ದರೂ ಕಳೆದುಕೊಂಡ ಮಾನ ಮರ್ಯಾದೆಗಳನ್ನು ಬಾಲಕಿಗೆ ತಂದುಕೊಡಲು ಸಾಧ್ಯವಿಲ್ಲ, ಬಹಳಷ್ಟು ಜನರು ಇದರ ಮೇಲೆ ಬಂದಂತಹ ತೀರ್ಪುಗಳನ್ನು ಓದಿ ಬದಲಾವಣೆ ಕಂಡಂತಹ ಸಾಕಷ್ಟು ಉದಾಹರಣೆಗಳಿದ್ದು, ಪ್ರತಿಯೊಂದು ನ್ಯಾಯಾಲಯಗಳು ಪ್ರಜ್ಞಾವಂತ ಸಮಾಜವನ್ನು ನಿರ್ಮಿಸಬೇಕೆಂಬ ಹೊಣೆಗಾರಿಕೆಯಡಿ ಕೆಲಸ ಮಾಡುತ್ತಿವೆ, ಪ್ರತಿ ತೀರ್ಪಿನ ಹಿಂದೆಯೂ ಇಂತಹ ಸಾಕಷ್ಟು ವಿಚಾರಗಳ ಅಡಕವಾಗಿರುತ್ತವೆ ಎಂದರು.

ನ್ಯಾಯವಾದಿಗಳ ಸಂಘದ ಅಧ್ಯಕ್ಷ ಪ್ರಕಾಶ ಬನ್ನಿಹಟ್ಟಿ ಮಾತನಾಡಿ, ನ್ಯಾಯಾಲಯ ಎಂದಾಕ್ಷ ಣ ಹತ್ತು ಹದಿನೈದು ವರ್ಷಗಳ ಕಾಲ ಅಲೆದಾಡಬೇಕು ಎನ್ನುವ ವಾಡಿಕೆ ಮಾತುಗಳು ಕೇಳಿ ಬರುತ್ತವೆ. ಅಲ್ಲಿಗೆ ಹೋಗುವವರು ಎಲ್ಲರೂ ತಪ್ಪಿತಸ್ಥರು ಎಂಬುದಾಗಿ ಬಹಳಷ್ಟು ಯುವಕರಿಗೆ ತಪ್ಪು ಗ್ರಹಿಕೆಗಳಿವೆ, ಆದರೆ ಅಲ್ಲಿಂದ ಹೊರಬರುವ ತೀರ್ಪುಗಳು ಕೇವಲ ತಪ್ಪಿತಸ್ಥರಿಗೆ ಶಿಕ್ಷೆ ಕೊಡುವುದಷ್ಟೇ ಅಲ್ಲ ದೇಶದ ನಾಗರಿಕರನ್ನು ಸರಿದಾರಿಯಲ್ಲಿ ಎಚ್ಚರಿಕೆಯಿಂದ ಮನ್ನಡೆಯುವಂತೆ ಮಾಡುವ ಸ್ಪಷ್ಟ ಸಂದೇಶವೊಂದಿರುತ್ತದೆ ಎಂದರು.

ಸರ್ಕಾರಿ ಅಭಿಯೋಜಕಿ ಸಿಂಧೂ ಪೋತದಾರ 'ಫೋಕ್ಸೋ' ಕಾಯಿದೆ ಕುರಿತು ಮಾತನಾಡಿದರು, ವೇದಿಕೆಯಲ್ಲಿ ಸಿಡಿಪಿಓ ರಾಮಲಿಂಗಪ್ಪ ಅರಳಗುಪ್ಪಿ, ಮುಖ್ಯಶಿಕ್ಷ ಕ ರಾಜಶೇಖರ ಹಿರೇಮಠ, ನಾಗರಾಜ ಆನವೇರಿ, ನ್ಯಾಯ ವಾದಿಗಳಾದ ಸಿ.ಪಿ.ದೊಣ್ಣೇರ, ಭಾರತಿ ಕುಲಕರ್ಣಿ, ಎಚ್‌.ಬಿ.ಮಡಿವಾಳರ, ಲಕ್ಷ್ಮೀ ಗುಗ್ಗರಿ, ಹೆಚ್‌.ಎಸ್‌.ಜಾಧವ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ