ಆ್ಯಪ್ನಗರ

ಖರೀದಿಗೆ ಮುಗಿಬಿದ್ದ ಜನತೆ

ರಾಣೇಬೆನ್ನೂರ: ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುವ ಹಿನ್ನೆಲೆ ಶನಿವಾರ ನಗರದ ಮಾರುಕಟ್ಟೆಯಲ್ಲಿಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂದಿತು. ಈಗಾಗಲೇ ಎಪಿಎಂಸಿ ಲಾಕ್‌ಡೌನ್‌ ಹಿನ್ನೆಲೆ ಭಾನುವಾರ ಈರುಳ್ಳಿ, ಬಳ್ಳೊಳ್ಳಿ ಮಾರುಕಟ್ಟೆ ಬಂದ್‌ ಮಾಡಿ ಆದೇಶ ನೀಡಿದೆ. ಹೀಗಾಗಿ ಭಾನುವಾರ

Vijaya Karnataka 24 May 2020, 5:00 am
ರಾಣೇಬೆನ್ನೂರ: ಭಾನುವಾರ ಸಂಪೂರ್ಣ ಲಾಕ್‌ಡೌನ್‌ ಇರುವ ಹಿನ್ನೆಲೆ ಶನಿವಾರ ನಗರದ ಮಾರುಕಟ್ಟೆಯಲ್ಲಿಜನರು ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿರುವುದು ಕಂಡು ಬಂದಿತು. ಈಗಾಗಲೇ ಎಪಿಎಂಸಿ ಲಾಕ್‌ಡೌನ್‌ ಹಿನ್ನೆಲೆ ಭಾನುವಾರ ಈರುಳ್ಳಿ, ಬಳ್ಳೊಳ್ಳಿ ಮಾರುಕಟ್ಟೆ ಬಂದ್‌ ಮಾಡಿ ಆದೇಶ ನೀಡಿದೆ. ಹೀಗಾಗಿ ಭಾನುವಾರ ಜನತಾ ಕಪ್ರ್ಯೂ ರೀತಿಯಲ್ಲಿಸಂಪೂರ್ಣ ಬಂದ್‌ ಆಗುತ್ತಿದ್ದು, ಜನರು ವಸ್ತುಗಳ ಖರೀದಿಗಾಗಿ ಆಗಮಿಸಿದ್ದರು. ಬಟ್ಟೆ ಅಂಗಡಿ, ಮೆಗಾಮಾರ್ಟ್‌, ಕಿರಾಣಿ ಅಂಗಡಿ, ದಿನಸಿ ವಸ್ತುಗಳು ಸೇರಿದಂತೆ ಇತರ ಅಂಗಡಿಗಳಲ್ಲಿಶನಿವಾರ ಹೆಚ್ಚಾಗಿ ಜನಸಂದಣಿ ಕಂಡುಬಂದಿತು. ಮಾಲ್‌ ಸೇರಿದಂತೆ ಇತರ ಕಡೆಗಳಲ್ಲಿಸರದಿಯಲ್ಲಿನಿಂತು ಜನರು ಅಗತ್ಯ ವಸ್ತುಗಳನ್ನು ಖರೀದಿಸಿದರು. ಸೋಮವಾರ ರಂಜಾನ್‌ ಹಬ್ಬ ಆಚರಣೆ ಮಾಡುತ್ತಿರುವ ಪರಿಣಾಮ ಜನರು ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲು ಮಾರುಕಟ್ಟೆಗೆ ಆಗಮಿಸಿರುವುದು ಕಂಡುಬಂದಿತು. ಇದರಿಂದ ಮಾರುಕಟ್ಟೆಯ ಕೆಲ ಭಾಗದಲ್ಲಿಜನ ಹಾಗೂ ವಾಹನ ಸಂಚಾರ ಹೆಚ್ಚಾಗಿತ್ತು.
Vijaya Karnataka Web people who are over buying
ಖರೀದಿಗೆ ಮುಗಿಬಿದ್ದ ಜನತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ