ಆ್ಯಪ್ನಗರ

ಸಂಡೇ ಕರ್ಫ್ಯೂ ಉಲ್ಲಂಘಿಸಿ ಟಗರು ಕಾಳಗ: 8 ಜನರ ಬಂಧನ, ಠಾಣೆ ಎದುರು ಪ್ರತಿಭಟನೆ

ಭಾನುವಾರ ರಾಜ್ಯಾದ್ಯಂತ ಲಾಕ್ ಡೌನ್ ಇದ್ದರೂ, ನಿಯಮ ಉಲ್ಲಂಘಿಸಿದ ಯುವಕರ ಗುಂಪೊಂದು ಟಗರು ಕಾಳಗನಡೆಸಿ ಪೊಲೀಸರ ಅತಿಥಿಯಾದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.

Vijaya Karnataka Web 27 Jul 2020, 12:06 pm
ರಾಣೇಬೆನ್ನೂರು: ಸಂಡೇ ಕರ್ಫ್ಯೂ ಸಮಯದಲ್ಲಿ ಟಗರು ಕಾಳಗ ಆಡಿಸುತ್ತಿದ್ದವರ ಬಂಧನ ವಿಚಾರಕ್ಕೆ ಸಂಬಂಧಿಸಿದಂತೆ ನಗರದ ಗ್ರಾಮೀಣ ಪೊಲೀಸ್‌ ಠಾಣೆ ಬಳಿ ಭಾನುವಾರ ಪೊಲೀಸರು ಹಾಗೂ ನಗರಸಭೆ ಸದಸ್ಯರ ನಡುವೆ ವಾಗ್ವಾದ, ಪ್ರತಿಭಟನೆ ನಡೆದಿದೆ.
Vijaya Karnataka Web ಸಾಂದರ್ಭಿಕ ಚಿತ್ರ


ತಾಲೂಕಿನ ಹುಣಸಿಕಟ್ಟಿ ಗ್ರಾಮದ ಬಳಿ ಕೆಲವರು ಟಗರು ಕಾಳಗ ನಡೆಸುತ್ತಿದ್ದರು. ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ತೆರಳಿ ಕಾಳಗಕ್ಕೆ ಬಳಸಿದ್ದ ಎರಡು ಟಗರು ಹಾಗೂ ಎಂಟು ಜನರನ್ನು ಬಂಧಿಸಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭಾ ಸದಸ್ಯರೊಬ್ಬರು ಗ್ರಾಮೀಣ ಠಾಣೆಗೆ ತೆರಳಿ ಪಿಎಸ್‌ಐ ಅವರನ್ನು ವಿಚಾರಿಸಿದ್ದಾರೆ.

ಆಗ ನಗರಸಭಾ ಸದಸ್ಯನ ಬೆಂಬಲಿಗರು ಹಾಗೂ ಅಧಿಕಾರಿಯ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಇದರಿಂದ ರೊಚ್ಚಿಗೆದ್ದ ನಗರಸಭಾ ಸದಸ್ಯನ ಬೆಂಬಲಿಗರು ರಸ್ತೆಗೆ ತೆರಳಿ ಪ್ರತಿಭಟನೆ ನಡೆಸಿದರು. ಟಗರಿನ ಕಾಳಗ ನಡೆಸಿದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ