ಆ್ಯಪ್ನಗರ

ಉಪ ಚುನಾವಣೆ ಮುಂದೂಡಿಕೆ, ಅಭೀ ಪಿಕ್ಚರ್‌ ಬಾಕಿ ಹೈ..

ಹಾವೇರಿ: ಜಿಲ್ಲೆಯ ಎರಡು ಕ್ಷೇತ್ರ ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದ ಉಪ ಚುನಾವಣೆ ಮುಂದೂಡಲ್ಪಟ್ಟಿದ್ದು, ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

Vijaya Karnataka 27 Sep 2019, 5:00 am
ಹಾವೇರಿ: ಜಿಲ್ಲೆಯ ಎರಡು ಕ್ಷೇತ್ರ ಸೇರಿದಂತೆ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿಕೇಂದ್ರ ಚುನಾವಣಾ ಆಯೋಗ ಘೋಷಿಸಿದ್ದ ಉಪ ಚುನಾವಣೆ ಮುಂದೂಡಲ್ಪಟ್ಟಿದ್ದು, ಜಿಲ್ಲಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
Vijaya Karnataka Web post election abhi picture pending hai
ಉಪ ಚುನಾವಣೆ ಮುಂದೂಡಿಕೆ, ಅಭೀ ಪಿಕ್ಚರ್‌ ಬಾಕಿ ಹೈ..


ಜಿಲ್ಲೆಯ ರಾಣೇಬೆನ್ನೂರ ಮತ್ತು ಹಿರೇಕೇರೂರ ಶಾಸಕರೂ ಸೇರಿದಂತೆ ಒಟ್ಟು 17 ಶಾಸಕರ ಅನರ್ಹ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳದಲ್ಲಿಸೆ.26 ರಂದು ವಿಚಾರಣೆ ನಡೆದಿತ್ತು. ವಾದ-ಪ್ರತಿವಾದ ಮುಗಿದು ಅಂತಿಮವಾಗಿ ಉಪ ಚುನಾವಣೆ ಮುಂದೂಡಲ್ಪಟ್ಟಿದೆ. ಇದರ ಬೆನ್ನಲ್ಲೇ ರಾಣೇಬೆನ್ನೂರ ಕಾಂಗ್ರೆಸ್‌ ಸಂಭಾವ್ಯ ಅಭ್ಯರ್ಥಿಯಾಗಿದ್ದ ಮಾಜಿ ಸ್ಪೀಕರ್‌ ಕೆ.ಬಿ. ಕೋಳಿವಾಡ ಅವರು, ಅಭೀ ಪಿಕ್ಚರ್‌ ಬಾಕಿ ಹೈ ಎನ್ನುವ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ಗೆ ಬೇಸರ: ಈ ಕುರಿತು ಕಾಂಗ್ರೆಸ್‌ ಪಕ್ಷದ ಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ ವಿಕ ಜತೆ ಮಾತನಾಡಿ, ಬೈ ಇಲೆಕ್ಷನ್‌ ಮುಂದೂಡಿಕೆ ನಿರ್ಧಾರ ನಿಜಕ್ಕೂ ದುರದೃಷ್ಟಕರ. ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದ ವೇಳೆಯಲ್ಲಿಏಕಾಏಕಿ ಮುಂದೂಡಿಕೆ ಸಂವಿಧಾನಕ್ಕೆ ಮಾಡಿದ ಅಪಚಾರ. ಅನರ್ಹ ಶಾಸಕರ ಬಗ್ಗೆ ನಿರ್ಣಯ ಕೈಗೊಳ್ಳುವ ಮುನ್ನವೇ ಇಲೆಕ್ಷನ್‌ ಮುಂದೂಡಿಕೆ ಸರಿಯಾದ ಕ್ರಮ ಅಲ್ಲ. ಈ ವಿಚಾರದಲ್ಲಿನ್ಯಾಯಾಲಯ ಕೈಗೊಳ್ಳುವ ನಿರ್ಧಾರ ಗೌರವಿಸುವುದು ಅನಿವಾರ್ಯವಾಗಿದೆ ಎಂದಿದ್ದಾರೆ.

ಬಿಜೆಪಿ ಖುಷಿ: ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಅವರು ಬೈ ಇಲೆಕ್ಷನ್‌ ಮುಂದೂಡಿಕೆ ಸ್ವಾಗತಾರ್ಹ. ಶಾಸಕರ ಅನರ್ಹತೆ ವಿಷಯದಲ್ಲಿನಿರ್ಣಯ ಕೈಗೊಳ್ಳಲು ಸಮಯಾವಕಾಶ ಬೇಕಿತ್ತು. ಬೈ ಇಲೆಕ್ಷನ್‌ ಇರಬಹುದು ಅಥವಾ ಸಾರ್ವತ್ರಿಕ ಚುನಾವಣೆಯೇ ಇರಬಹುದು ಅಭ್ಯರ್ಥಿಗಳು ಮಾನಸಿಕ ವಾಗಿ ಸಿದ್ಧರಾಗಲು ಕಾಲಾವಕಾಶ ಸಿಕ್ಕಿದೆ. ಎರಡೂ ಕ್ಷೇತ್ರದಲ್ಲಿನಮ್ಮ ಅಭ್ಯರ್ಥಿಗಳ ಗೆಲುವು ಖಚಿತ ಎಂದಿದ್ದಾರೆ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ