ಆ್ಯಪ್ನಗರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಹಿರೇಕೆರೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಆರ್‌.ಎಚ್‌.ಭಗವಾನ, ಸಿಡಿಪಿಒ ವಿಜಯಕುಮಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 13 Aug 2020, 5:00 am
ಹಿರೇಕೆರೂರು : ತಮ್ಮ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ತಹಸೀಲ್ದಾರ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಸೀಲ್ದಾರ ಆರ್‌.ಎಚ್‌.ಭಗವಾನ, ಸಿಡಿಪಿಒ ವಿಜಯಕುಮಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.
Vijaya Karnataka Web 12HKR 3_23
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಹಿರೇಕೆರೂರು ಪಟ್ಟಣದಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಂದ ಸರಕಾರಕ್ಕೆ ಮನವಿ ಸಲ್ಲಿಸಿದರು.


ಗೌರವಧನ ಪದ್ಧತಿ ಮುಕ್ತಿಗೊಳಿಸಿ ನಮ್ಮನ್ನು ಸರಕಾರಿ ನೌಕರರೆಂದು ಪರಿಗಣಿಸಬೇಕು, ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಸಹಾಯಕಿ ಹಾಗೂ ಕಾರ್ಯಕರ್ತೆಯರಿಗೆ ಇಡಿಗಂಟು ಬಿಡುಗಡೆ ಮಾಡಬೇಕು,ನಾವು ಎಲ್ಲಸರಕಾರಿ ಇಲಾಖೆಗಳ ಜತೆಗೆ ಹಾಗೂ ಆರೋಗ್ಯ ಇಲಾಖೆ ಜತೆಗೆ ಸೇವೆ ಮಾಡಿದ್ದೇವೆ. ತಾಯಿ ಮತ್ತು ಮಕ್ಕಳಲ್ಲಿಇದ್ದ ಅಪೌಷ್ಠಿಕ ಮಟ್ಟವನ್ನು ಕಡಿಮೆ ಮಾಡಿದ್ದೇವೆ, ಕೋವಿಡ್‌-19 ಬಗ್ಗೆ ಸಾರ್ವಜನಿಕರಲ್ಲಿಜಾಗೃತಿ ಮೂಡಿಸಿದ್ದೇÊ.æ ಈ ನಮ್ಮ ಸೇವೆಯನ್ನು ಸರಕಾರ ಪರಿಗಣಿಸಿ ನಮ್ಮನ್ನು ಕಾಯಂ ನೌಕರರನ್ನಾಗಿ ಮಾಡಬೇಕು ಅನಾರೋಗ್ಯದಿಂದ ಬಳಲುತ್ತಿರುವ ಕಾರ್ಯಕರ್ತೆಯರಿಗೆ,ಸಹಾಯಕಿಯರಿಗೆ ವೇತನ ಸಹಿತ ರಜೆ ಮಂಜೂರು ಮಡಬೇಕು,45 ನೇ ಐಎಲ್‌ಸಿ ಶೀಫಾರಸ್ಸನ್ನು ಜಾರಿಗೊಳಿಸಬೇಕು, ಮಕ್ಕಳಿಗೆ ಹಿತಕರವಾದ ಆಟಿಕೆ ಸಾಮಾನು ಹಾಗೂ ವರ್ಷಕ್ಕೆ ಎರಡು ಜತೆ ಸಮವಸ್ತ್ರ ನೀಡಬೇಕು ಎಂದು ಮನವಿಯಲ್ಲಿಒತ್ತಾಯಿಸಲಾಗಿದೆ.

ನೂರಾರು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದಿಂದ ತಹಸೀಲ್ದಾರ ಕಚೇರಿವರೆಗೆ ಮೆರವಣಿಗೆ ನಡೆಸಿ, ತಹಸೀಲ್ದಾರ ಕಚೇರಿ ಎದುರು ಕೆಲ ಹೊತ್ತು ಪ್ರತಿಭಟನೆ ನಡೆಸಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಸೀಲ್ದಾರ ಆರ್‌.ಎಚ್‌.ಭಗವಾನ, ಸಿಡಿಪಿಒ ವಿಜಯಕುಮಾರ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದರು.

ಫೆಡರೇಷನ್‌ ಅಧ್ಯಕ್ಷೆ ನೀಲಮ್ಮ ವಾಲಿ, ಕಾರ್ಯದರ್ಶಿ ಪಾರ್ವತಮ್ಮ ಹಾದ್ರೀಹಳ್ಳಿ, ಸುನೀತಾ ಮರ್ಕಳ್ಳಿ, ಪ್ರೇಮಾ ಸಿದ್ದಪ್ಪ ಗೌಡ್ರ, ಕುಸುಮಾ ಪಾಟೀಲ್‌, ಕಮಲಾ ಬೂದೀಹಾಳ, ನೀಲಮ್ಮ ವೀರಾಪುರ, ರಾಜೇಶ್ವರಿ ಹರವೀಶೆಟ್ಟರ, ಉಮಾ ಇಟ್ಟೀಗುಡಿ, ಸರೋಜಾ ಚಕ್ರಸಾಲಿ, ಮಂಗಳಾ ಬಣಕಾರ, ಪ್ರೇಮಾ ಹಂಸಭಾವಿ, ರೇಖಾ ಕೊಪ್ಪದ, ಪುಟ್ಟಮ್ಮ ಬಂಡೇರ, ಫರೀದಾಬಾನು ಪಾಟೀಲ್‌,ಅನುಪಮಾ ಗಿರಣಿ, ನೇತ್ರಾವತಿ ಅಂಗಡಿ, ಶಂಕ್ರಮ್ಮ ಆಲದಗೇರಿ, ಗಂಗಮ್ಮ ಗದುಗಿನ, ವಿಜಿಯಾ ಬಣಕಾರ, ಭಾಗ್ಯ ಬಳಿಗಾರ, ಪುಷ್ಪಾ ಭಾವಾಪುರ ಹಾಗೂ ನೂರಾರು ಕಾರ್ಯಕರ್ತೆಯರು, ಸಹಾಯಕಿಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ