ಆ್ಯಪ್ನಗರ

ಲಂಬಾಣಿ ಸಮುದಾಯದಿಂದ ಪ್ರತಿಭಟನೆ

ರಾಣೇಬೆನ್ನೂರ: ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನಗಳ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಅಬಕಾರಿ ಸಚಿವ ನಾಗೇಶ ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ನೇತೃತ್ವದಲ್ಲಿಶನಿವಾರ ಲಂಬಾಣಿ ಸಮಾಜದ ಜನರು ತಾಲೂಕಿನ ಮೆಡ್ಲೇರಿ ಮತ್ತು ರಾಣೇಬೆನ್ನೂರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

Vijaya Karnataka 8 Sep 2019, 5:00 am
ರಾಣೇಬೆನ್ನೂರ: ಲಂಬಾಣಿ ತಾಂಡಾಗಳಿಗೆ ಸಂಚಾರಿ ವಾಹನಗಳ ಮೂಲಕ ಮದ್ಯ ಸರಬರಾಜು ಮಾಡಲಾಗುವುದು ಎಂದು ಅಬಕಾರಿ ಸಚಿವ ನಾಗೇಶ ನೀಡಿರುವ ಹೇಳಿಕೆಯನ್ನು ಖಂಡಿಸಿ ಕರ್ನಾಟಕ ತಾಂಡಾ ರಕ್ಷಣಾ ವೇದಿಕೆ ನೇತೃತ್ವದಲ್ಲಿಶನಿವಾರ ಲಂಬಾಣಿ ಸಮಾಜದ ಜನರು ತಾಲೂಕಿನ ಮೆಡ್ಲೇರಿ ಮತ್ತು ರಾಣೇಬೆನ್ನೂರ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
Vijaya Karnataka Web protest by the lambani community
ಲಂಬಾಣಿ ಸಮುದಾಯದಿಂದ ಪ್ರತಿಭಟನೆ

ಈ ಸಮಯದಲ್ಲಿವೇದಿಕೆ ಅಧ್ಯಕ್ಷ ಬೀರಪ್ಪ ಲಮಾಣಿ ಮಾತನಾಡಿ, ಅಬಕಾರಿ ಸಚಿವರ ಹೇಳಿಕೆಯಿಂದ ಲಂಬಾಣಿ ಸಮುದಾಯಕ್ಕೆ ತೀವ್ರ ಆಘಾತವಾಗಿದೆ. ನಮ್ಮ ಸಮುದಾಯವು ಇತ್ತೀಚಿಗೆ ಸಮಾಜದಲ್ಲಿಬೆಳಕಿಗೆ ಬರುತ್ತಿದೆ. ಇಂತಹ ಸಮಯದಲ್ಲಿತಮ್ಮ ರಾಜಕೀಯ ಲಾಭಕ್ಕಾಗಿ ಸಚಿವರು ಒಂದು ಸಮುದಾಯದ ಬಗ್ಗೆ ಲಘುವಾಗಿ ಮಾತನಾಡಿರುವುದು ಸರಿಯಲ್ಲ. ಆದ್ದರಿಂದ ಸಚಿವರು ಬಹಿರಂಗವಾಗಿ ಲಂಬಾಣಿ ಸಮುದಾಯದ ಜನರ ಕ್ಷಮೆ ಯಾಚಿಸಬೇಕು. ಇಲ್ಲವಾದರೆ ಲಂಬಾಣಿ ಯುವ ವೇದಿಕೆ ವತಿಯಿಂದ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಲಾಲಪ್ಪ ಪೂಜಾರ, ಕುಮಾರ ಲಮಾಣಿ, ಬಸವರಾಜ ಲಮಾಣಿ, ಹಾಲೇಶ ಲಮಾಣಿ, ಮಾರುತಿ ರಾಠೋಡ, ಚಂದ್ರಪ್ಪ ಲಮಾಣಿ, ಮಂಜು ಲಮಾಣಿ, ಗುರು ಲಮಾಣಿ, ಸುಭಾಸ ಲಮಾಣಿ, ರವಿ ಲಮಾಣಿ ಪ್ರತಿಭಟನೆಯಲ್ಲಿಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ