ಆ್ಯಪ್ನಗರ

ಹಾವೇರಿಯಲ್ಲಿ ಕರವೇ ಪ್ರತಿಭಟನೆ

ಹಾವೇರಿ :ತೈಲ ಬೆಲೆ ಏರಿಕೆ ಖಂಡಿಸಿ ಭಾರತ ಬಂದ್‌ಗೆ ಕರೆ ನೀಡಿದ್ದರ ಬೆಂಬಲಾರ್ಥವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಟಿ.ಎ.ರಾಯಣಗೌಡ ಬಣ) ಜಿಲ್ಲಾ ಘಟಕ ಸದಸ್ಯರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ಮೆರವಣಿಗೆ ನಡೆಸಿ ಹೊಸಮನಿ ಸಿದ್ಧಪ್ಪ ವೃತ್ತಕ್ಕೆ ಬಂದು ಮುಕ್ತಾಯಗೊಳಿಸಿದರು. ಮೆರವಣಿಗೆ ಉದ್ದಕ್ಕೂ ಕೇಂದ್ರ ಸರಕಾರ, ನರೇಂದ್ರ ಮೋದಿ ವಿರುದ್ಧ ದಿಕ್ಕಾರ ಹೋಗಿ ಅಕ್ರೋಶ ವ್ಯಕ್ತಪಡಿಸಿ, ನಂತರ ತಹಸೀಲ್ದಾರ್‌ ಮೂಲಕ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿದರು.

Vijaya Karnataka 11 Sep 2018, 5:00 am

Vijaya Karnataka Web protest in harwe
ಹಾವೇರಿಯಲ್ಲಿ ಕರವೇ ಪ್ರತಿಭಟನೆ

ಕರವೇ ಸದಸ್ಯರು ನಗರದ ಎಂ.ಜಿ.ರಸ್ತೆ, ಮಹಾತ್ಮ ಗಾಂಧಿ, ಹೊಸಮನಿ ಸಿದ್ಧಪ್ಪ ವೃತ್ತ, ತರಕಾರಿ ಮಾರುಕಟ್ಟೆ, ಪಿ.ಬಿ. ರಸ್ತೆ ಉದ್ದಕ್ಕೂ ತೆರೆದಿದ್ದ ಅಂಗಡಿಗಳಿಗೆ ನುಗ್ಗಿ ಒತ್ತಾಯ ಪೂರಕವಾಗಿ ಮಧ್ಯಾಹ್ನ 12 ಗಂಟೆಯವರೆಗೂ ಮುಚ್ಚುವಂತೆ ಆಗ್ರಹಿಸಿದರು. ಜತೆಗೆ ತೆರೆದ ಅಂಗಡಿ ಮುಂದೆ ಹೋಗಿ ಮುಚ್ಚುವವರೆಗೂ ಪ್ರತಿಭಟನೆ ನಡೆಸಿದರು.

ಸತೀಶಗೌಡ ಮುದಿಗೌಡ್ರ, ಯಶವಂತಗೌಡ ದೊಡ್ಡಗೌಡ್ರ, ಎಚ್‌.ಎನ್‌.ಹಲಗೇರಿ, ಶಿವಯೋಗಿ ಹೂಗಾರ, ಬಸವರಾಜ ಹೊಂಬರಡಿ, ಗಿರೀಶ ಬಾರ್ಕಿ, ಬಿ.ಹೆಚ್‌. ಬಣಕಾರ, ಹಸನಸಾಬ ಹತ್ತಿಮತ್ತೂರ, ಕೊಟ್ರೇಶ ಜಿ.ಎಸ್‌., ನಾಗಯ್ಯ ಹಿರೇಮಠ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ