ಆ್ಯಪ್ನಗರ

ಮಂಗಳವಾರ ಹಾವೇರಿಯಲ್ಲಿ ಪ್ರತಿಭಟನೆ

ಹಾನಗಲ್ಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಜ.28 ರಂದು ಮಂಗಳವಾರ ಹಾವೇರಿಯಲ್ಲಿ ನಡೆಯುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಮತ್ತು ರಸ್ತೆ ತಡೆ ಚಳುವಳಿಗೆ ಹಾನಗಲ್ಲ ತಾಲೂಕಿನಿಂದ ಹೆಚ್ಚು ಸಂಖ್ಯೆಯಲ್ಲಿ ರೈತರು ಭಾಗವಹಿಸಬೇಕು ಎಂದು ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.

Vijaya Karnataka 26 Jan 2020, 5:00 am
ಹಾನಗಲ್ಲ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತ ಸಂಘದಿಂದ ಜ.28 ರಂದು ಮಂಗಳವಾರ ಹಾವೇರಿಯಲ್ಲಿನಡೆಯುವ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಮತ್ತು ರಸ್ತೆ ತಡೆ ಚಳುವಳಿಗೆ ಹಾನಗಲ್ಲತಾಲೂಕಿನಿಂದ ಹೆಚ್ಚು ಸಂಖ್ಯೆಯಲ್ಲಿರೈತರು ಭಾಗವಹಿಸಬೇಕು ಎಂದು ರೈತ ಸಂಘದ ತಾಲೂಕು ಘಟಕದ ಅಧ್ಯಕ್ಷ ಮರಿಗೌಡ ಪಾಟೀಲ ಹೇಳಿದರು.
Vijaya Karnataka Web protest in haveri on tuesday
ಮಂಗಳವಾರ ಹಾವೇರಿಯಲ್ಲಿ ಪ್ರತಿಭಟನೆ


ಶನಿವಾರ ಇಲ್ಲಿನ ಕೃಷಿ ಇಲಾಖೆಯ ಸಂಭಾಗಣದಲ್ಲಿನಡೆದ ರೈತ ಸಂಘದ ಪದಾಧಿಕಾರಿಗಳ ಸಭೆಯಲ್ಲಿಮಾತನಾಡಿದ ಅವರು, ತಾಲೂಕಿನ ಬಹುತೇಕ ಗ್ರಾಮಗಳಲ್ಲಿರೈತ ಸಂಘದ ಘಟಕಗಳಿವೆ. ಸ್ಥಳೀಯ ಪದಾಧಿಕಾರಿಗಳು ಹೆಚ್ಚಿನ ಆಸಕ್ತಿ ವಹಿಸುವ ಮೂಲಕ ತಮ್ಮ ಭಾಗದ ರೈತರನ್ನು ಚಳುವಳಿಯಲ್ಲಿಭಾಗವಹಿಸಲು ಮನವಿ ಮಾಡಬೇಕು ಎಂದರು.

ಕೇಂದ್ರ ಮತ್ತು ರಾಜ್ಯ ಸರಕಾರ ರೈತ ವಿರೋಧಿ ಧೋರಣೆಯಲ್ಲಿತೊಡಗಿವೆ. ರೈತರ ಸಾಲಮನ್ನಾ ಸಮರ್ಪಕವಾಗಿಲ್ಲ. ರೈತರ ಆತ್ಮಹತ್ಯೆ ಘಟನೆಗಳಿಗೆ ಸರಕಾರ ಸಂಬಂಧವಿಲ್ಲದಂತೆ ನಡೆದುಕೊಳ್ಳುತ್ತಿದೆ. ಅತಿವೃಷ್ಟಿಯಿಂದ ಉತ್ತರ ಕರ್ನಾಟಕ ನಲುಗಿದೆ. ಸರಕಾರದ ಸ್ಪಂದನೆ ಇಲ್ಲಎಂದು ಹರಿಹಾಯ್ದರು.

ಜಿಲ್ಲಾ ಘಟಕದ ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ ಮಾತನಾಡಿ, ಮಂಗಳವಾರ ಹಾವೇರಿಯ ಹೊಸಮನಿ ಸಿದ್ಧಪ್ಪ ಸರ್ಕಲ್‌ ಬಂದ್‌ ಮಾಡಿ ಮುಖ್ಯರಸ್ತೆಯ ಮೂಲಕ ಡಿ.ಸಿ ಕಚೇರಿ ತನಕ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಸರಕಾರದ ರೈತ ವಿರೋಧಿ ನೀತಿ ವಿರುದ್ಧ ಸಿಡಿದೇಳಬೇಕಿದೆ ಎಂದರು.

ಪದಾಧಿಕಾರಿಗಳಾದ ಮಲ್ಲೇಶಪ್ಪ ಪರಪ್ಪನವರ, ರುದ್ರಪ್ಪ ಹಣ್ಣಿ, ಸೋಮಣ್ಣ ಜಡೆಗೊಂಡರ, ರಾಜು ದಾನಪ್ಪನವರ, ಉಮೇಶ ಮೂಡಿ, ಪುಟ್ಟಪ್ಪ ಗಂಗೋಜಿ, ಕರಬಸಪ್ಪ ಮಾಕೊಪ್ಪದ, ಅಜ್ಜನಗೌಡ ಪಾಟೀಲ, ಕರಬಸಪ್ಪ ಆಲದಕಟ್ಟಿ, ಮಹಲಿಂಗಪ್ಪ ಅಕ್ಕಿವಳ್ಳಿ, ಮರ್ಧಾನಸಾಬ ಬಡಗಿ, ಎಸ್‌.ಎಸ್‌.ಇನಾಂದಾರ್‌, ಜಗದೀಶ ಬಂಗಿ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ