ಆ್ಯಪ್ನಗರ

ಡಿಕೆಶಿ ಬಂಧನ ಖಂಡಿಸಿ ಪ್ರತಿಭಟನೆ

ಹಾವೇರಿ​: ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ಕಾಂಗ್ರೆಸ್‌ ಜಿಲ್ಲಾಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹೊಸಮನಿ ಸಿದ್ಧಪ್ಪ ಸರ್ಕಲ್‌ನಲ್ಲಿಬುಧವಾರ ಟಯರ್‌ ಬೆಂಕಿ ಹಚ್ಚಿ ರಸ್ತೆ ಸಂಚಾರ ತಡೆ ನಡೆಸಿ ಬೃಹತ್‌ ಪ್ರತಿಭಟನೆ ನಡೆಸಿದರು.

Vijaya Karnataka 5 Sep 2019, 5:00 am
ಹಾವೇರಿ: ಮಾಜಿ ಸಚಿವ ಡಿ.ಕೆ. ಶಿವಕುಮಾರ ಬಂಧನ ಖಂಡಿಸಿ ಕಾಂಗ್ರೆಸ್‌ ಜಿಲ್ಲಾಸಮಿತಿ ಮುಖಂಡರು ಮತ್ತು ಕಾರ್ಯಕರ್ತರು ನಗರದ ಹೊಸಮನಿ ಸಿದ್ಧಪ್ಪ ಸರ್ಕಲ್‌ನಲ್ಲಿಬುಧವಾರ ಟಯರ್‌ ಬೆಂಕಿ ಹಚ್ಚಿ ರಸ್ತೆ ಸಂಚಾರ ತಡೆ ನಡೆಸಿ ಬೃಹತ್‌ ಪ್ರತಿಭಟನೆ ನಡೆಸಿದರು.
Vijaya Karnataka Web 4 HAVERI 2_23


ಇದಕ್ಕೂ ಮುನ್ನ ಮೈಲಾರ ಮಹಾದೇವಪ್ಪ ಸರ್ಕಲ್‌ನಿಂದ ಪ್ರತಿಭಟನೆ ಮೆರವಣಿಗೆ ಪ್ರಾರಂಭಿಸಿ ಮಹಾತ್ಮ ಗಾಂಧಿ ಸರ್ಕಲ್‌, ಜೆ.ಪಿ. ಸರ್ಕಲ್‌, ಪಿ.ಬಿ. ರಸ್ತೆ ಮೂಲಕ ಹೊಸಮನಿ ಸಿದ್ಧಪ್ಪ ವೃತ್ತಕ್ಕೆ ಬಂದು ತಲುಪಿತು. ಪ್ರತಿಭಟನಾಕಾರರು ಬಿಜೆಪಿ ಸರಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಐಟಿ, ಇ.ಡಿ ಮತ್ತು ಸಿಬಿಐ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ಮಾಜಿ ಸಚಿವ ರುದ್ರಪ್ಪ ಲಮಾಣಿ ಮಾತನಾಡಿ, ಬಿಜೆಪಿ ಸರಕಾರ ಉದ್ದೇಶ ಪೂರಕವಾಗಿ ಡಿಕೆಶಿ ಮೇಲೆ ಕೇಸ್‌ ದಾಖಲಿಸಿ ಬಂಧನಕ್ಕೆ ಸಿಲುಕಿಸಿದ್ದಾರೆ. ಇದೊಂದು ರಾಜಕೀಯ ಕುತಂತ್ರವಾಗಿದೆ ಎಂದು ಆರೋಪಿಸಿದರು.

ಮನೆಯಲ್ಲಿತಂದೆಯವರ ಪೂಜೆಗೂ ಕಳಿಸದೆ ಡಿ.ಕೆ.ಶಿವಕುಮಾರ ಅವರನ್ನು ಇ.ಡಿ. ಕಚೇರಿ ಅಧಿಕಾರಿಗಳು ಚಿತ್ರ ಹಿಂಸೆ ನೀಡಿ ಬಂಧಿಸಿದ್ದಾರೆ. ಇದಕ್ಕೆ ಕಾರಣ ಪ್ರಧಾನಿ ಮೋದಿ ಹಾಗೂ ಕೇಂದ್ರದ ಗೃಹ ಸಚಿವ ಅಮೀತ್‌ ಶಾ ದ್ವೇಷದ ರಾಜಕಾರಣ ಎಂದು ಆರೋಪ ಮಾಡಿದರು.

ಮಳೆಯಲ್ಲಿಯೇ ಪ್ರತಿಭಟನೆ:
ನಗರದಲ್ಲಿಬೆಳಗ್ಗೆಯಿಂದ ಜಿಟಿ ಜಿಟಿ ಮಳೆಯಾಗುತ್ತಿದ್ದು, ಮಳೆಯಲ್ಲಿಯೇ ಕಾಂಗ್ರೆಸ್‌ ಕಾರ್ಯಕರ್ತರು ಪ್ರತಿಭಟನೆ ಮೆರವಣಿಗೆ ನಡೆಸಿ, ಹೊಸಮನಿ ಸಿದ್ಧಪ್ಪ ಸರ್ಕಲ್‌ನಲ್ಲಿಟಯರ್‌ಗೆ ಬೆಂಕಿ ಹಚ್ಚಿ ಅರ್ಧ ಗಂಟೆಗಳ ಕಾಲ ರಸ್ತೆ ತಡೆದು ಆಕ್ರೋಶ ವ್ಯಪಡಿಸಿದರು.

ಈ ಸಂದರ್ಭದಲ್ಲಿಜಿಲ್ಲಾಧ್ಯಕ್ಷ ಎಂ.ಎಂ.ಹಿರೇಮಠ, ಮುಖಂಡರಾದ ಎಂ.ಎಂ.ಮೈದೂರ, ಪ್ರಕಾಶ ಪಾಟೀಲ, ಕೊಟ್ರೇಶಪ್ಪ ಬಸೇಗಣ್ಣಿ, ಬಸವರಾಜ ಮಾಳಗಿ, ಶಿವಬಸಪ್ಪ ಹಲಗಣ್ಣನವರ, ಚನ್ನಬಸವ ಲಕ್ಷ್ಮೇಶ್ವರಮಠ, ರವಿ ದೊಡ್ಡಮನಿ, ಮಹಿಳಾ ಜಿಲ್ಲಾಧ್ಯಕ್ಷೆ ಪ್ರೇಮಾ ಪಾಟೀಲ, ಲಲಿತವ್ವ ಹುಗ್ಗಿ, ಶಾಂತಾಬಾಯಿ ಶಿರೂರ, ಜಯಶ್ರೀ ಶಿವಪೂರ, ಸಂಜಯಗಾಂಧಿ ಸಂಜೀವಣ್ಣನವರ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ