ಆ್ಯಪ್ನಗರ

ಆ.15ರಿಂದ ರಾಯರ ಆರಾಧನಾ ಮಹೋತ್ಸವ

ಹಾವೇರಿ: ನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಆ.15 ರಿಂದ 19 ರವರೆಗೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ಜರುಗುವವು.

Vijaya Karnataka 13 Aug 2019, 5:00 am
ಹಾವೇರಿ: ನಗರದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ 348ನೇ ಆರಾಧನಾ ಮಹೋತ್ಸವವು ಆ.15 ರಿಂದ 19 ರವರೆಗೆ ನಡೆಯಲಿದ್ದು, ವಿವಿಧ ಕಾರ್ಯಕ್ರಮಗಳು ಜರುಗುವವು.
Vijaya Karnataka Web rais worshipful jubilee
ಆ.15ರಿಂದ ರಾಯರ ಆರಾಧನಾ ಮಹೋತ್ಸವ


ಆ.16 ರಂದು ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಪೂರ್ವಾರಾಧನೆ. ಬೆಳಗ್ಗೆ 7-30ಕ್ಕೆ ಅಷ್ಟೋತ್ತರ, 9ಧಿಧಿಧಿ ಧಿ30ಕ್ಕೆ ಪಾದಪೂಜೆ ಪಂಚಾಮೃತ ಅಲಂಕಾರ, ಮಧ್ಯಾಹ್ನ 12.30ಕ್ಕೆ ಅಷ್ಟೋದಕ ಸಂಜೆ 7 ಗಂಟೆಗೆ ರಾಯರ ಹೂವಿನ ರಥೋತ್ಸವ ನಂತರ ಅಷ್ಟಾವಧಾನ, ಮಹಾಮಂಗಳಾರುತಿ ನಡೆಯಲಿದೆ.

ಆ.17 ರಂದು ಶ್ರೀ ಗುರು ಸಾರ್ವಭೌಮರ ಮಧ್ಯಾರಾಧನೆ ಬೆಳಗ್ಗೆ 6 ಗಂಟೆಗೆ ಅಷ್ಟೋತ್ತರ, 8 ಗಂಟೆಗೆ ಪಂಚಾಮೃತ, ಅಲಂಕಾರ, 10 ಗಂಟೆಗೆ ಪಾದಪೂಜೆ ಬೆಳಗ್ಗೆ 11 ಗಂಟೆಗೆ ರಜತ ರಥೋತ್ಸವ, ಮಧ್ಯಾಹ್ನ 12.30ಗಂಟೆಗೆ ಹಸ್ತೋದಕ, ಸಂಜೆ ರಾಯರ ಹೂವಿನ ರಥೋತ್ಸವ, ರಾತ್ರಿ 8 ಗಂಟೆಗೆ ಅಷ್ಟಾವಧಾನ ಮಹಾಮಂಗಳಾರತಿ ಜರುಗಲಿದೆ.

ಆ.18 ರಂದು ಶ್ರೀ ಗುರು ಸಾರ್ವಭೌಮರ ಉತ್ತರಾರಾಧನೆ ಬೆಳಗ್ಗೆ 5 ಗಂಟೆಗೆ ಅಷ್ಟೋತ್ತರ, ಬೆಳಗ್ಗೆ 6 ಗಂಟೆಗೆ ಪಂಚಾಮೃತ ಅಲಂಕಾರ, 10 ಗಂಟೆ ಬೆಳ್ಳಿ ರಥೋತ್ಸವ ಬೆಳಗ್ಗೆ 11 ಗಂಟೆ ರಾಯರ ಮಹಾರಥೋತ್ಸವ. ಮಧ್ಯಾಹ್ನ 2 ಗಂಟೆಗೆ ತೀರ್ಥಪ್ರಸಾದ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ಶ್ರೀ ಗುರುರಾಯರ ಕೃಪೆಗೆ ಪಾತ್ರರಾಗಬೇಕೆಂದು ಡಾ.ರಾಜಣ್ಣ ಎಸ್‌.ವೈದ್ಯ, ಡಾ.ಮುರುಳಿಧರ ಎಸ್‌.ವೈದ್ಯ, ಡಾ.ವೀಣಾ ಎಸ್‌. ವೈದ್ಯ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ