ಆ್ಯಪ್ನಗರ

ನಾಳೆಯಿಂದ ರಾರ‍ಯಪಿಡ್‌ ಹೆಲ್ತ್‌ ಸಮೀಕ್ಷೆ

ಹಾವೇರಿ : ಜಿಲ್ಲೆಯಾದ್ಯಂತ ಬಿಎಲ್‌ಒಗಳ ಮೂಲಕ ಮನೆ ಮನೆಗೆ ತೆರಳಿ ತುರ್ತು ಆರೋಗ್ಯ ಸಮೀಕ್ಷೆ ಕಾರ್ಯ ಏ.24ರಿಂದ ನಡೆಸಲು ತಹಸೀಲ್ದಾರ್‌ಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು.

Vijaya Karnataka 23 Apr 2020, 5:00 am
ಹಾವೇರಿ : ಜಿಲ್ಲೆಯಾದ್ಯಂತ ಬಿಎಲ್‌ಒಗಳ ಮೂಲಕ ಮನೆ ಮನೆಗೆ ತೆರಳಿ ತುರ್ತು ಆರೋಗ್ಯ ಸಮೀಕ್ಷೆ ಕಾರ್ಯ ಏ.24ರಿಂದ ನಡೆಸಲು ತಹಸೀಲ್ದಾರ್‌ಗಳಿಗೆ ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಸೂಚನೆ ನೀಡಿದರು.
Vijaya Karnataka Web rarapid health survey tomorrow
ನಾಳೆಯಿಂದ ರಾರ‍ಯಪಿಡ್‌ ಹೆಲ್ತ್‌ ಸಮೀಕ್ಷೆ


ಜಿಲ್ಲಾಡಳಿತದ ಸಭಾಂಗಣದಲ್ಲಿಜಿಲ್ಲೆಯ ವಿವಿಧ ತಾಲೂಕುಗಳ ತಹಸೀಲ್ದಾರ್‌, ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಶಿಶು ಅಭಿವೃದ್ಧಿ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ಮೂಲಕ ಬುಧವಾರ ಸಭೆ ನಡೆಸಿದ ಅವರು, ತುರ್ತು ಆರೋಗ್ಯ ಸಮೀಕ್ಷೆ ಕುರಿತಂತೆ ಎಲ್ಲಬಿಎಲ್‌ಒಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಏ.23ರಂದು ಆಯಾ ತಾಲೂಕುಗಳಲ್ಲಿತರಬೇತಿ ಆಯೋಜಿಸಬೇಕು. ಏ.24 ರಿಂದ ಮನೆ ಮನೆ ಸಮೀಕ್ಷೆ ಕೈಗೊಂಡು ಜನರ ಆರೋಗ್ಯ ಮಾಹಿತಿ ಸಂಗ್ರಹಿಸಿ ಮೂರು ದಿನಗಳೊಳಗೆ ಸಮೀಕ್ಷೆ ಪೂರ್ಣಗೊಳಿಸುವಂತೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿಈವರೆಗೆ ಕೋವಿಡ್‌ ಸೋಂಕು ಪತ್ತೆಯಾಗಿಲ್ಲ. ಆದಾಗ್ಯೂ ಸರಕಾರದ ಸೂಚನೆಯಂತೆ ರಾರ‍ಯಪಿಡ್‌ ಹೆಲ್ತ್‌ ಸಮೀಕ್ಷೆ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿಬಿಎಲ್‌ಒ (ಮತಗಟ್ಟೆ ಅಧಿಕಾರಿಗಳು) ಗಳ ಮೂಲಕ ಆರೋಗ್ಯ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ. ಈ ಉದ್ದೇಶಕ್ಕಾಗಿ ಮಾಹಿತಿ ಸಂಗ್ರಹಕ್ಕಾಗಿ ಆರೋಗ್ಯ ಇಲಾಖೆಯಿಂದ ಮಾದರಿ ತಯಾರಿಸಲಾಗಿದೆ. ಈ ಮಾದರಿಯಲ್ಲಿಮನೆ ಮನೆಗೆ ತೆರಳಿ 60 ವರ್ಷ ಮೇಲ್ಪಟ್ಟವರ ವಿವರ, ಸಕ್ಕರೆ ಕಾಯಿಲೆ ಇರುವವರು, ರಕ್ತದೊತ್ತಡ ಇರುವವರು, ಕ್ಯಾನ್ಸರ್‌ನಿಂದ ಬಳಲುತ್ತಿರುವವರು, ಜ್ವರ, ಶೀತ, ಕೆಮ್ಮು, ಉಸಿರಾಟದ ತೊಂದರೆ ಇರುವವರ ಹೆಸರು, ವಯಸ್ಸು, ಮೊಬೈಲ್‌ ಸಂಖ್ಯೆ, ಕಾಯಿಲೆ ವಿವರ ಮಾಹಿತಿ ಸಂಗ್ರಹಿಸಿ ಆಯಾ ಮೇಲುಸ್ತುವಾರಿ ಅಧಿಕಾರಿಗಳ ಮೂಲಕ ತಹಸೀಲ್ದಾರ್‌ ಕಚೇರಿಗೆ ತಲುಪಿಸಬೇಕು. ಆರೋಗ್ಯ ಇಲಾಖೆ ಮೂಲಕ ಜಿಲ್ಲಾಡಳಿತಕ್ಕೆ ಮಾಹಿತಿ ಕ್ರೋಢೀಕರಿಸಿ ಸರಕಾರಕ್ಕೆ ಸಲ್ಲಿಸಲಾಗುತ್ತದೆ. ತೀವ್ರ ರೋಗ ಲಕ್ಷಣಗಳು ಕಂಡುಬಂದರೆ ಆರೋಗ್ಯ ಇಲಾಖೆ ಮೂಲಕ ಸೂಕ್ತ ಚಿಕಿತ್ಸೆ ನೀಡುವ ಉದ್ದೇಶ ಹೊಂದಲಾಗಿದೆ ಎಂದು ವಿವರಿಸಿದರು.

ಜಿಪಂ ಸಿಇಒ ರಮೇಶ ದೇಸಾಯಿ ಮಾತನಾಡಿ, ಸಾಮಾಜಿಕ ಅಂತರ ಕಾಯ್ದುಕೊಂಡು ಸಭೆ ನಡೆಸಬೇಕು. ಮನೆ ಮನೆ ಸಮೀಕ್ಷೆಗೆ ತೆರಳುವ ಬಿಎಲ್‌ಒಗಳಿಗೆ ಮಾಸ್ಕ್‌, ಸ್ಯಾನಿಟೈಸರ್‌ ನೀಡಬೇಕು. ಕೇಂದ್ರ ಸ್ಥಾನದಲ್ಲಿಬಿಎಲ್‌ಒಗಳು ಇಲ್ಲದಿದ್ದರೆ ಪರ್ಯಾಯ ಶಿಕ್ಷಕರ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ಉಪ ವಿಭಾಗಾಧಿಕಾರಿ ಡಾ.ದೀಲಿಪ್‌ ಸಸಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಅಂದಾನೆಪ್ಪ ವಡಗೇರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಪಿ.ವೈ.ಶೆಟ್ಟೆಪನವರ, ಚುನಾವಣೆ ತಹಸೀಲ್ದಾರ ಪ್ರಶಾಂತ ನಾಲವಾರ, ಹಾವೇರಿ ತಹಸೀಲ್ದಾರ ಶಂಕರ್‌, ಬಿಇಒ ಎಂ.ಎಚ್‌.ಪಾಟೀಲ ಇತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ