ಆ್ಯಪ್ನಗರ

ರಟ್ಟೀಹಳ್ಳಿ: ಆಧಾರ್‌ ಕೇಂದ್ರ ಸ್ಥಗಿತ: ಜನರ ಪರದಾಟ

ರಟ್ಟೀಹಳ್ಳಿ: ಪ್ರಸ್ತುತ ದಿನಮಾನದಲ್ಲಿ ಆಧಾರ್‌ ಕಾರ್ಡ್‌ ಇಲ್ಲದೇ ಯಾವುದೇ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ. ಶಾಲಾ ಕಾಲೇಜ್‌ ಬ್ಯಾಂಕ್‌ ಸೇರಿದಂತೆ ಎಲ್ಲ ವ್ಯವಹಾರಕ್ಕೂ ಆಧಾರ್‌ ಕಾರ್ಡ್‌ ಅವಶ್ಯವಾಗಿ ಬೇಕು.

Vijaya Karnataka 3 Jun 2019, 5:00 am
ರಟ್ಟೀಹಳ್ಳಿ: ಪ್ರಸ್ತುತ ದಿನಮಾನದಲ್ಲಿ ಆಧಾರ್‌ ಕಾರ್ಡ್‌ ಇಲ್ಲದೇ ಯಾವುದೇ ಯೋಜನೆಯ ಸೌಲಭ್ಯಗಳು ಸಿಗುವುದಿಲ್ಲ. ಶಾಲಾ ಕಾಲೇಜ್‌ ಬ್ಯಾಂಕ್‌ ಸೇರಿದಂತೆ ಎಲ್ಲ ವ್ಯವಹಾರಕ್ಕೂ ಆಧಾರ್‌ ಕಾರ್ಡ್‌ ಅವಶ್ಯವಾಗಿ ಬೇಕು.
Vijaya Karnataka Web HVR-1 RATTIHALLI 6


ಈಗ ಶಾಲೆ ಪ್ರಾರಂಭವಾಗಿದೆ. ಕೆಲವೊಂದು ಮಕ್ಕಳು ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸುವುದಕ್ಕೆ ಮತ್ತು ಹೊಸ ಆಧಾರ್‌ ಕಾರ್ಡ್‌ ಮಾಡಿಸುವುದಕ್ಕೆ ರಟ್ಟೀಹಳ್ಳಿ ತಾಲೂಕಾ ಕಚೇರಿಯ ನಮ್ಮದಿ ಕೇಂದ್ರಕ್ಕೆ ಪ್ರತಿದಿನ ಅಲೆದಾಡುತ್ತಿದ್ದಾರೆ. ಕಳೆದ 8-10 ದಿನದಿಂದ ಆಧಾರ್‌ ಕೇಂದ್ರ ಸ್ಥಗಿತಗೊಂಡಿದೆ.

ನೆಮ್ಮದಿ ಕೇಂದ್ರದಲ್ಲಿನ ಆಧಾರ್‌ ಕೇಂದ್ರ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದೆ. 1-2 ದಿನದಲ್ಲಿ ಸರಿಯಾಗುತ್ತದೆ ಎಂದು ಜನರಿಗೆ ಸಬೂಬು ನೀಡಲಾಗುತ್ತಿದೆ. ತಾಲೂಕು ಆಡಳಿತ ಕಚೇರಿ ಪಟ್ಟಣದಿಂದ ಸುಮಾರು 2 ಕಿ.ಮೀ ದೂರದಲ್ಲಿದೆ. ಜನರು ಕಚೇರಿಗೆ ಅಲೆದಾಡುತ್ತಿದ್ದಾರೆ. ಆದರೆ ಆಧಾರ್‌ ಕಾರ್ಡ ಕೇಂದ್ರ ಪ್ರಾರಂಭವಾಗುವ ಲಕ್ಷ ಣ ಕಾಣುತ್ತಿಲ್ಲ.

ಸರಕಾರ ಅಂಚೆ ಕಚೇರಿಯಲ್ಲಿ ಆಧಾರ್‌ ಕಾರ್ಡ್‌ ಮಾಡಿಸುವುದಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಅಲ್ಲಿಯೂ ಸರಿಯಾಗಿ ಆಧಾರ್‌ ಕಾರ್ಡ ಮಾಡುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದೆ. ಪೋಸ್ಟ್‌ ಆಫೀಸಿನಲ್ಲಿ ಸಿಬ್ಬಂದಿ ಕೊರತೆ ಇದೆ ಎಂದು ಹೇಳಲಾಗುತ್ತಿದೆ.

ನೆಮ್ಮದಿ ಕೇಂದ್ರದಲ್ಲಿನ ಸಮಸ್ಯೆಯನ್ನು ಸರಿಪಡಿಸಿ ಕೂಡಲೇ ಆಧಾರ್‌ ಕಾರ್ಡ್‌ ಮಾಡುವುದಕ್ಕೆ ಪ್ರಾರಂಭಿಸಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸುತ್ತಾರೊ ಇಲ್ಲವೋ ಕಾದುನೋಡಬೇಕು.



ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ