ಆ್ಯಪ್ನಗರ

ಹೊಲದ ದಾರಿ ತೆರವಿಗೆ ಆಗ್ರಹ

ಶಿಗ್ಗಾವಿ: ಜಮೀನುಗಳಿಗೆ ಹೋಗುವ ದಾರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ರೈತರು ತಹಸೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿದ ಘಟನೆ ಸೋಮವಾರ ನಡೆದಿದೆ.

Vijaya Karnataka 3 Nov 2020, 5:00 am
ಶಿಗ್ಗಾವಿ: ಜಮೀನುಗಳಿಗೆ ಹೋಗುವ ದಾರಿಯನ್ನು ತೆರವುಗೊಳಿಸುವಂತೆ ಆಗ್ರಹಿಸಿ ತಾಲೂಕಿನ ರೈತರು ತಹಸೀಲ್ದಾರ್‌ ಕಚೇರಿ ಮುಂದೆ ಧರಣಿ ನಡೆಸಿದ ಘಟನೆ ಸೋಮವಾರ ನಡೆದಿದೆ.
Vijaya Karnataka Web 2SGN-1_23
ಜಮೀನುಗಳಿಗೆ ಹೋಗುವ ದಾರಿ ತೆರವುಗೊಳಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ ಕಚೇರಿ ಮುಂದೆ ಶಿಗ್ಗಾವಿ ತಾಲೂಕಿನ ಕಲ್ಯಾಣ ಗ್ರಾಮದ ರೈತರು ಧರಣಿ ನಡೆಸಿದರು.


ತಾಲೂಕಿನ ಕಲ್ಯಾಣ ಗ್ರಾಮದ ಸುಮಾರು ಎಂಟಕ್ಕೂ ಅಧಿಕ ರೈತರು ತಮ್ಮ ಜಮೀನುಗಳಿಗೆ ಹೋಗಲು ಬಳಸುತ್ತಿದ್ದ ದಾರಿಯನ್ನು ಅದೇ ಗ್ರಾಮದ ರೈತರೊಬ್ಬರು ಬಂದ್‌ ಮಾಡಿದ್ದಾನೆ. ಇದರಿಂದ ರೈತರ ಕೃಷಿ ಚಟುವಟಿಕೆಗಳಿಗೆ ತೊಂದರೆ ಉಂಟಾಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ತಿಂಗಳ ಹಿಂದೆ ತಹಸೀಲ್ದಾರರಿಗೆ ಮನವಿ ಸಲ್ಲಿಸಿದ್ದರು.

ಮನವಿ ಸ್ವೀಕರಿಸಿದ್ದ ತಹಸೀಲ್ದಾರ್‌ ಪ್ರಕಾಶ ಕುದರಿ ಈ ಬಗ್ಗೆ ಕಾರ್ಯನಿರ್ವಹಿಸಲು ಐದು ದಿನಗಳ ಕಾಲಾವಕಾಶ ಪಡೆದುಕೊಂಡಿದ್ದರು. ಆದರೆ, ಎಂಟು ದಿನ ಕಳೆದರೂ ಭೂಮಾಪನ ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಬಾರದ ಕಾರಣ ಧರಣಿ ಕೈಗೊಂಡಿರುವುದಾಗಿ ರೈತರಾದ ದ್ಯಾಮವ್ಣ ಕೋರಿ, ಬಸಪ್ಪ ಕೋರಿ, ಚನ್ನಪ್ಪ ಕೋರಿ, ರಾಮಣ್ಣ ಹೊಸಕಟ್ಟಿ, ಯಲ್ಲಪ್ಪ ಹೊಸಕಟ್ಟಿ, ಬಸವಣ್ಣೆಪ್ಪ ರಾಮಾಪೂರ, ಬಸವಣ್ಣೆಪ್ಪ ಬರದೂರ ಮತ್ತಿತರರು ಮಾಹಿತಿ ನೀಡಿದ್ದಾರೆ.

ಧರಣಿನಿರತ ರೈತರ ಮನವೊಲಿಸಿದ ತಹಸೀಲ್ದಾರ್‌ ಪ್ರಕಾಶ ಕುದರಿ ಭೂಮಾಪನ ಅಧಿಕಾರಿಗಳೊಂದಿಗೆ ಗ್ರಾಮದ ಸ್ಥಳ ಪರಿಶೀಲನೆ ನಡೆಸಿದ ಬೆಳೆ ಕಟಾವು ಮುಗಿದ ನಂತರ ರೈತರ ಹೋಲಗಳಿಗೆ ತೆರಳಲು ರಸ್ತೆ ನಿರ್ಮಾಣ ಮಾಡುವ ಭರವಸೆ ನೀಡಿದರು. ನಂತರ ಧರಣಿ ಹಿಂಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ