ಆ್ಯಪ್ನಗರ

ಅನುದಾನಿತ ಶಾಲಾ ಶಿಕ್ಷ ಕರಿಗೆ ಸೌಲಭ್ಯಕ್ಕೆ ಆಗ್ರಹ

ರಾಣೇಬೆನ್ನೂರ :ರಾಜ್ಯದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರು ಹಲವಾರು ತೊಂದರೆ ಅನುಭವಿಸುತ್ತಿದ್ದು ಕೆಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ ದೂರಿದರು.

Vijaya Karnataka 5 Dec 2018, 5:00 am
ರಾಣೇಬೆನ್ನೂರ :ರಾಜ್ಯದ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರು ಹಲವಾರು ತೊಂದರೆ ಅನುಭವಿಸುತ್ತಿದ್ದು ಕೆಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದ ರಾಜ್ಯಾಧ್ಯಕ್ಷ ಡಾ.ಕೆ.ಹನುಮಂತಪ್ಪ ದೂರಿದರು.
Vijaya Karnataka Web required for subsidized school teaching facility
ಅನುದಾನಿತ ಶಾಲಾ ಶಿಕ್ಷ ಕರಿಗೆ ಸೌಲಭ್ಯಕ್ಕೆ ಆಗ್ರಹ


ಇಲ್ಲಿನ ಶಿಕ್ಷ ಕರ ಸಮುದಾಯ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷ ಕರಿಗೆ ಕಾಲ್ಪನಿಕ ವೇತನ ಜಾರಿಗೊಳಿಸಬೇಕು. ಹೊಸ ಪಿಂಚಣಿ ವ್ಯವಸ್ಥೆ ರದ್ದುಗೊಳಿಸಿ ಹಳೆಯ ನಿಶ್ಚಿತ ಪಿಂಚಣಿ ಯೋಜನೆ ಜಾರಿಗೆ ತರಬೇಕು. ಅನುದಾನಿತ ಶಾಲೆಗಳಲ್ಲಿ ಖಾಲಿಯಿರುವ ಶಿಕ್ಷ ಕರ ಹುದ್ದೆಗಳ ಭರ್ತಿಗೆ ಅವಕಾಶ ಕಲ್ಪಿಸಬೇಕು. ನಮ್ಮ ಶಾಲಾ ಮಕ್ಕಳು ಸಮವಸ್ತ್ರ, ಷೂ, ಸಾಕ್ಸ್‌, ಪ್ರವಾಸ ಭಾಗ್ಯ ಸೇರಿದಂತೆ ಇನ್ನಿತರ ಕೆಲ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಆರೋಗ್ಯ ವಿಮಾ ಯೋಜನೆಯನ್ನೂ ಅನುದಾನಿತ ಶಾಲಾ ಶಿಕ್ಷ ಕರಿಗೆ ಜಾರಿಗೊಳಿಸಬೇಕು. ಮಾನ್ಯತೆ ನವೀಕರಣಕ್ಕಾಗಿ ಕೆಲ ಡಿಡಿಪಿಐ ಹಾಗೂ ಬಿಇಒಗಳು ಹಣ ಪಡೆಯುತ್ತಿದ್ದಾರೆ. ಪ್ರತೀ ವರ್ಷ 12 ಸಾವಿರ ರೂ. ಶಾಲಾ ಅನುದಾನ ಬರುತ್ತಿತ್ತು. ಇದೀಗ ಅದು ಸ್ಥಗಿತಗೊಂಡಿದೆ. ಸರಕಾರ ಆದಷ್ಟು ಶೀಘ್ರವೇ ನಮ್ಮ ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕು. ಇಲ್ಲವಾದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಲಕ್ಷ ಕ್ಕಿಂತ ಅಧಿಕ ಸಂಖ್ಯೆಯ ಶಿಕ್ಷ ಕರೊಂದಿಗೆ ಉಪವಾಸ ಮಾಡಲಾಗುವುದು ಎಂದರು.

ಸಿ.ಮುತ್ತಯ್ಯ, ಕೆ.ಎಂ.ಮಂಜನಾಡಿ, ಶೇಖರ್‌ ಶೆಟ್ಟಿ, ಟಿ.ಸೂರನಾಯಕ ಮತ್ತು ಇತರರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ