ಆ್ಯಪ್ನಗರ

ಶೇ.68.40 ಫಲಿತಾಂಶ

ಹಾವೇರಿ: ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಫಲಿತಾಂಶ ಶೇ.68.40 ಆಗಿದ್ದು, 16ನೇ ಸ್ಥಾನ ಪಡೆದುಕೊಂಡಿದೆ.

Vijaya Karnataka 16 Apr 2019, 5:00 am
ಹಾವೇರಿ: ಜಿಲ್ಲೆಯ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ಫಲಿತಾಂಶ ಶೇ.68.40 ಆಗಿದ್ದು, 16ನೇ ಸ್ಥಾನ ಪಡೆದುಕೊಂಡಿದೆ.
Vijaya Karnataka Web results 68 40
ಶೇ.68.40 ಫಲಿತಾಂಶ


ಜಿಲ್ಲೆಯಲ್ಲಿ ಕಳೆದ ಬಾರಿಗಿಂತ ಶೇ 1.10 ಹೆಚ್ಚಿನ ಫಲಿತಾಂಶ ಬಂದಿದೆ. ಆದರೆ, 1 ಸ್ಥಾನ ಕುಸಿತ ಕಂಡಿದೆ. ಕಳೆದ ಬಾರಿ ಶೇ. 67.3 ಫಲಿತಾಂಶ ಪಡೆದು, 15ನೇ ಸ್ಥಾನ ಪಡೆದಿದ್ದರೆ, ಈ ಬಾರಿ ಶೇ 68.4 ಸ್ಥಾನ ಪಡೆದು 16ನೇ ಸ್ಥಾನ ಪಡೆದಿದೆ.

ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆ ಮಾ.1ರಿಂದ 18ರ ತನಕ ನಡೆದಿದ್ದು, ಜಿಲ್ಲೆಯ 23 ಕೇಂದ್ರಗಳಲ್ಲಿ 12,724 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ ಎಂದು ಡಿಡಿಪಿಯು ತಿಳಿಸಿದರು.

ಫಲಿತಾಂಶ ನೋಡಲು ಸರದಿ: ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು, ಪಾಲಕರು ಬೆಳಗ್ಗೆ ಆಗಮಿಸಿ ಇಂಟರ್‌ನೆಟ್‌ ಸೆಂಟರ್‌ಗಳಲ್ಲಿ ಕಾಯ್ದು ಕುಳಿತಿದ್ದರು.

ಫಲಿತಾಂಶ ಮಧ್ಯಾಹ್ನ 12 ಗಂಟೆಗೆ ಹೊರಬಿದ್ದಿದ್ದರಿಂದ ಇಂಟರ್‌ನೆಟ್‌ ಸೆಂಟರ್‌ಗಳು ತುಂಬಿ ತುಳುಕುತ್ತಿದ್ದವು. ವಿದ್ಯಾರ್ಥಿಗಳು ಮತ್ತು ಪಾಲಕರು ಸರದಿ ಸಾಲಿನಲ್ಲಿ ನಿಂತು ಫಲಿತಾಂಶ ನೋಡಿಕೊಂಡು ಹೋಗುತ್ತಿರುವುದು ಕಂಡು ಬಂತು.

ಇನ್ನೂ ಕೆಲವು ವಿದ್ಯಾರ್ಥಿಗಳು ತಮ್ಮ ಮೊಬೈಲ್‌ಗಳಲ್ಲಿ ಫಲಿತಾಂಶ ನೋಡಿಕೊಳ್ಳುತ್ತಿದ್ದರು. ಜೊತೆಗೆ ತಮ್ಮ ಗೆಳೆಯರ ಮತ್ತು ಗೆಳತಿಯರ ಫಲಿತಾಂಶವನ್ನು ನೋಡಿ ಪೋನ್‌ ಕಾಲ ಮಾಡಿ ಮಾಹಿತಿ ನೀಡುತ್ತಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ