ಆ್ಯಪ್ನಗರ

ಹಿರಿಯ ಅಧಿಕಾರಿಗಳ ಗೈರು: ಸಭೆ ಮೊಟಕು

ರಾಣೇಬೆನ್ನೂರ : ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆ ಹಾಗೂ ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು ಅದರ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತಾಲೂಕ ಮಟ್ಟದ ಅಧಿಕಾರಿಗಳಿರಬೇಕು. ಅವರು ಗೈರು ಹಾಜರಾಗಿರುವುದರಿಂದ ಸಭೆ ಮುಂದೂಡಿ ಮತ್ತೊಂದು ದಿನ ಸಭೆ

Vijaya Karnataka 17 Aug 2019, 5:00 am
ರಾಣೇಬೆನ್ನೂರ : ತಾಲೂಕಿನಲ್ಲಿ ಇತ್ತೀಚಿಗೆ ಸುರಿದ ಮಳೆ ಹಾಗೂ ನೆರೆಯಿಂದ ಸಾಕಷ್ಟು ಹಾನಿಯಾಗಿದ್ದು ಅದರ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ತಾಲೂಕ ಮಟ್ಟದ ಅಧಿಕಾರಿಗಳಿರಬೇಕು. ಅವರು ಗೈರು ಹಾಜರಾಗಿರುವುದರಿಂದ ಸಭೆ ಮುಂದೂಡಿ ಮತ್ತೊಂದು ದಿನ ಸಭೆ ನಡೆಸೋಣ ಎಂದು ಪಕ್ಷ ಬೇಧ ಮರೆತು ಸದಸ್ಯರು ಆಗ್ರಹಿಸಿದ ಪ್ರಸಂಗ ಇಲ್ಲಿನ ತಾಲೂಕ ಪಂಚಾಯತಿ ಅಧ್ಯಕ್ಷೆ ಗೀತಾ ಲಮಾಣಿ ಅಧ್ಯಕ್ಷ ತೆಯಲ್ಲಿ ಶುಕ್ರವಾರ ಜರುಗಿದ ಸಾಮಾನ್ಯ ಸಭೆಯಲ್ಲಿ ಕಂಡುಬಂದಿತು.
Vijaya Karnataka Web HVR-16RNR1


ಬೆಳಗ್ಗೆ 10.30ಕ್ಕೆ ಸಭೆ ನಿಗದಿಯಾಗಿದ್ದರೂ ಅಧಿಕಾರಿಗಳು ಆಗಮಿಸುವರು ಎಂಬ ನಿರೀಕ್ಷೆಯಲ್ಲಿ ಮಧ್ಯಾಹ್ನ 12ಕ್ಕೆ ಸಭೆ ಪ್ರಾರಂಭಿಸಲಾಯಿತು. ಸಭೆ ಪ್ರಾರಂಭವಾಗುತ್ತಿದ್ದಂತೆಯೇ ಕಾಂಗ್ರೆಸ್‌ ಸದಸ್ಯ ನೀಲಕಂಠಪ್ಪ ಎದ್ದು ನಿಂತು ನಿಗದಿತ ಸಮಯಕ್ಕೆ ಆಗಮಿಸದ ತಾಪಂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ ವಿರುದ್ಧ ಹರಿಹಾಯ್ದರು. ಇದು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕಾದ ಗಂಭೀರ ಸಭೆಯಾಗಿದ್ದು ನಿಮಗಾಗಿ ಕಾಯುತ್ತಾ ಕೂರಲು ನಮ್ಮನ್ನೆನು ಶಾಲಾ ಮಕ್ಕಳಂದೆ ಮಾಡಿರುವಿರೋ ಎಂದರು. ಇದಕ್ಕೆ ಡಾ.ಪುಟ್ಟಪ್ಪ ಭಿಕ್ಷಾವರ್ತಿಮಠ, ಭರಮಪ್ಪ ಉರ್ಮಿ ಧÜನಿಗೂಡಿಸಿ ಬೆಂಬಲ ವ್ಯಕ್ತಪಡಿಸಿದರು.

ಇದಕ್ಕೆ ಉತ್ತರಿಸಿದ ತಾಪಂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ, ತಾವು ಬೆಳಗ್ಗೆ 9ಕ್ಕೆ ಕಚೇರಿಗೆ ಆಗಮಿಸಿದ್ದೇನು. ವಿವಿಧ ಇಲಾಖೆಗಳ ಅಧಿಕಾರಿಗಳು ಆಗಮನಕ್ಕಾಗಿ ಕಾಯುತ್ತಾ ಕುಳಿತಿದ್ದೇನು. ಆದ್ದರಿಂದ ಸಭೆಗೆ ಆಗಮಿಸುವುದು ತಡವಾಗಿದೆ. ಇದಲ್ಲದೆ ಪ್ರಮುಖ ಇಲಾಖೆಗಳಿಗೆ ಸೇರಿದ ತಾಲೂಕ ಮಟ್ಟದ ಅಧಿಕಾರಿಗಳು ದಿಢೀರ್‌ ವಿಡೀಯೋ ಕಾನ್ಫರೆನ್ಸ್‌ ಏರ್ಪಡಿಸಿರುವ ಕುರಿತು ಬೆಳಗ್ಗೆ 7.30ಕ್ಕೆ ತಮಗೆ ಸಂದೇಶ ಬಂದಿತು. ಕೆಲವರು ನಗರದ ಮಿನಿ ವಿಧಾನಸೌಧ ಹಾಗೂ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿದ್ದರಿಂದ ಸಭೆಗೆ ಆಗಮಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಿಕರಣ ನೀಡಿದರು.

ಅಧಿಕಾರಿಗಳ ಉತ್ತರದಿಂದ ಬೇಸತ್ತ ಸದಸ್ಯ ನೀಲಕಂಠಪ್ಪ ಕುಸಗೂರ, ಹಿರಿಯ ಅಧಿಕಾರಿಗಳು ಬಾರದಿದ್ದರೂ ಅವರ ಪ್ರತಿನಿಧಿಗಳು ಕೂಡ ಸಭೆಗೆ ಆಗಮಿಸಿಲ್ಲ. ಆದ್ದರಿಂದ ಸಭೆ ಮುಂದೂಡಬೇಕು ಎನ್ನುತ್ತಾ ಸಭಾತ್ಯಾಗ ಮಾಡಿದರು. ಇವರನ್ನು ಹಿಂಬಾಲಿಸಿ ಚೈತ್ರಾ ಮಾಗನೂರ, ಭರಮಪ್ಪ ಉರ್ಮಿ, ಭಿಕ್ಷಾವರ್ತಿಮಠ, ರಾಮಪ್ಪ ಬೆನ್ನೂರ ಕೂಡ ಸಭೆಯಿಂದ ಹೊರ ನಡೆದರು. ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಅಧ್ಯಕ್ಷೆ ಗೀತಾ ಲಮಾಣಿ ಸದಸ್ಯರನ್ನು ಸಮಾಧಾನಪಡಿಸಲು ಪ್ರಯತ್ನಿಸದರೂ ಯಾವುದೇ ಪ್ರಯೋಜನವಾಗಲಿಲ್ಲ.

ಆಗ ಸಭೆಯಲ್ಲಿದ್ದ ಕರೆಯಪ್ಪ ತೋಟಗೇರ ಮಾತನಾಡಿ, ಕ್ಷೇತ್ರದಲ್ಲಿ ನೆರೆ ಸಂತ್ರಸ್ತರಿಗೆ ಯಾವ ರೀತಿ ಸಹಾಯ ಮಾಡಬೇಕು ಎಂಬುದರ ಬಗ್ಗೆ ಅಧಿಕಾರಿಗಳಿಂದ ತಾವು ಮಾಹಿತಿ ಪಡೆದುಕೊಳ್ಳಬೇಕಾಗಿತ್ತು. ಆದರೆ ಅಧಿಕಾರಿಗಳಾಗಲಿ, ಅವರ ಪ್ರತಿನಿಧಿಗಳಾಗಲಿ ಗೈರಾಗಿರುವುದು ಸದಸ್ಯರ ಅಸಹನೆಗೆ ಕಾರಣವಾಗಿದೆ ಎಂದರು.

ನಂತರ ಅಧ್ಯಕ್ಷ ರ ಕೊಠಡಿಯಲ್ಲಿ ಸಭಾತ್ಯಾಗ ಮಾಡಿದ ಸದಸ್ಯರ ಮನವೊಲಿಸಲು ಅಧ್ಯಕ್ಷೆ ಗೀತಾ ಲಮಾಣಿ ಸಮ್ಮುಖದಲ್ಲಿ ತಾಪಂ ಕಾನಿ ಅಧಿಕಾರಿ ಎಸ್‌.ಎಂ.ಕಾಂಬಳೆ, ವ್ಯವಸ್ಥಾಪಕ ಬಿ.ಎಸ್‌.ಶಿಡೇನೂರ ಮುಂದಾದರು. ಆಗ ಇತರ ಸದಸ್ಯರು ಸಮ್ಮತಿಸಿದರೂ ನೀಲಕಂಠಪ್ಪ ಕುಸಗೂರ ಮಾತ್ರ ಒಪ್ಪಲಿಲ್ಲ. ಹೀಗಾಗಿ ಇತರೆ ಸದಸ್ಯರು ಕೂಡ ಸಭೆಯನ್ನು ಶನಿವಾರ ಬೆಳಗ್ಗೆ 10 ಗಂಟೆಗೆ ನಡೆಸಿ ಎಂದು ಸಲಹೆ ನೀಡಿದರು. ಇದಕ್ಕೆ ತಾಪಂ ಕಾನಿ ಅಧಿಕಾರಿ ಒಪ್ಪಿಕೊಂಡು ಸಭಾಂಗಣಕ್ಕೆ ಆಗಮಿಸಿ ಎಲ್ಲ ಅಧಿಕಾರಿಗಳಿಗೂ ಶನಿವಾರ ತಪ್ಪದೆ ಕಡ್ಡಾಯವಾಗಿ ಸಭೆಗೆ ಆಗಮಿಸಬೇಕು. ತಪ್ಪಿದಲ್ಲಿ ನೋಟಿಸು ಜಾರಿ ಮಾಡುವುದಾಗಿ ತಿಳಿಸಿದ ನಂತರ ಸಭೆ ಮುಂದೂಡಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ