ಆ್ಯಪ್ನಗರ

ಥೈಲ್ಯಾಂಡ್‌ನಲ್ಲಿ ಮಿಂಚಿದ ಶಿಗ್ಗಾವಿ ಯೋಗಪಟು

ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಸಣ್ಣ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿಂದ ಪರಿಚಯಿಸಿಕೊಂಡಿರುವ ತಾಲೂಕಿನ ಕ್ಯಾಲಕೊಂಡ ಗ್ರಾಮದ ಗಿರಿರಾಜ ಚನ್ನವೀರಸ್ವಾಮಿ ಹಿರೇಮಠ ಸಾಧನೆ ಗಮನಾರ್ಹ.

Vijaya Karnataka 21 Jun 2019, 5:00 am
ಪಿ.ಎಂ.ಸತ್ಯಪ್ಪನವರ ಶಿಗ್ಗಾವಿ: ಸಣ್ಣ ವಯಸ್ಸಿನಲ್ಲಿಯೇ ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಗದಿಂದ ಪರಿಚಯಿಸಿಕೊಂಡಿರುವ ತಾಲೂಕಿನ ಕ್ಯಾಲಕೊಂಡ ಗ್ರಾಮದ ಗಿರಿರಾಜ ಚನ್ನವೀರಸ್ವಾಮಿ ಹಿರೇಮಠ ಸಾಧನೆ ಗಮನಾರ್ಹ.
Vijaya Karnataka Web HVR-20SGN-1


ಇತ್ತೀಚೆಗೆ ಥೈಲಾಂಡ್‌ನಲ್ಲಿ ನಡೆದ 7ನೇ ಯೋಗ ಉತ್ಸವದಲ್ಲಿ ಪಾಲ್ಗೊಂಡು ಅತ್ಯುತ್ತಮ ಪ್ರದರ್ಶನ ನೀಡಿದ ಕೀರ್ತಿಗೆ ಇವರು ಭಾಜನರಾಗಿದ್ದಾರೆ.

ತಂದೆ ಪ್ರೋತ್ಸಾಹ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷ ಣದ ಹಂತದಲ್ಲಿಯೇ ತನ್ನ ತಂದೆ ಮಾರ್ಗದರ್ಶನ ಮತ್ತು ಪ್ರೋತ್ಸಾಹದಿಂದ ಶಿಕ್ಷ ಣದ ಜತೆಗೆ ಯೋಗಾಭ್ಯಾಸ, ಸಂಗೀತದತ್ತ ಆಸಕ್ತಿ ತೊರಿದ ಗಿರಿರಾಜ ಅವರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವೀರಾಪುರ ಹಿರೇಮಠದಲ್ಲಿನ ಸಂಗೀತ ಮತ್ತು ಸಂಸ್ಕೃತ ಪಾಠ ಶಾಲೆಯಲ್ಲಿ ಓದು ಮುಗಿಸಿದ ಬಳಕ ಗೊಟಗೋಡಿ ಜಾನಪದ ವಿಶ್ವ ವಿದ್ಯಾಲಯದಲ್ಲಿ ಯೋಗ ಇನ್‌ ಡಿಪೊ್ಲೕಮಕ್ಕೆ ಪ್ರವೇಶ ಪಡೆದರು.

ಅಂತಾರಾಷ್ಟ್ರೀಯ ಮನ್ನಣೆ: ಯೋಗ ಶಿಕ್ಷ ಕಿ ಅಶ್ವಿನಿ ಅವರ ಒಂದು ತಂಡದೊಂದಿಗೆ ಥೈಲಾಂಡ್‌ನಲ್ಲಿ ಪಾಲ್ಗೊಂಡ ಗಿರಿರಾಜ ಅವರು, ತನ್ನ ಅತ್ಯುತ್ತಮ ಪ್ರದರ್ಶನ ಮೂಲಕ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡು ತಾಲೂಕಿನ ಕೀರ್ತಿಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಫಸರಿಸುವಂತೆ ಮಾಡಿದ್ದಾರೆ. ವೈಯಕ್ತಿಕ ವಿಭಾಗದಲ್ಲಿಯೂ ರಿದಮಿಕ್‌ ಯೋಗಾಸನ ಚಾಂಪಿಯನ್‌ ಶಿಪ್‌ನಲ್ಲಿ ಪ್ರಥಮ ಸ್ಥಾನ, ಸ್ವಆಸನ ಯೋಗಾಸನದಲ್ಲಿ 6ನೇ ಸ್ಥಾನ, ಅಥ್ಲೆಟಿಕ್‌ ಚಾಂಪಿಯನ್‌ ಶಿಪ್‌ನಲ್ಲಿ 5ನೇ ಸ್ಥಾನಗಳಿಸಿದ ಹಿರೇಮಠರ ಸಾಧನೆ ಈಗ ಎಲ್ಲರ ಗಮನ ಸೆಳೆದಿದೆ.

ಆರೋಗ್ಯಕ್ಕೆ ಬೇಕು ಯೋಗ: ಮಧುಮೇಹವು ಅನೇಕ ಕಾರಣಗಳಿಂದ ಬರುವ ರೋಗ. ಸರಿಯಾದ ವ್ಯಾಯಾಮದ ಅಭಾವ, ಸರಿಯಾಗಿರದ ಆಹಾರ ಪದ್ಧತಿ ಇತ್ಯಾದಿಯಿಂದ ಬರುತ್ತದೆ. ಆಧುನಿಕ ದಿನಗಳ ಒತ್ತಡ ಇನ್ನಷ್ಟು ತೀವ್ರಗೊಳಿಸುತ್ತದೆ.

ಈ ಅಂಶಗಳು ಜೀವನ ಶೈಲಿಯತ್ತ ಸೂಚಿಸುತ್ತಿದೆ. ವೈದ್ಯಕೀಯವಾಗಿ ಗಮನ ನೀಡುವದರ ಜತೆಗೆ ಜೀವನ ಶೈಲಿಯತ್ತ ಗಮನಿಸುವುದು ಬಹಳಷ್ಟು ಮುಖ್ಯವಾಗಿದೆ. ಹೀಗಾಗಿ ಪ್ರಾಣಾಯಾಮ, ಯೋಗ, ಧ್ಯಾನದ ಅಭ್ಯಾಸಗಳನ್ನು ನಿತ್ಯದ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಯೋಗ ಕುರಿತು ಜನರಲ್ಲಿ ಜಾಗೃತಿ ಮೂಡಿಸುವತ್ತ ಗಿರಿರಾಜರ ಚಿತ್ತ ನೆಟ್ಟಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ