ಆ್ಯಪ್ನಗರ

ಪದ್ಯ ಓದು-ಬೇರಿನ ಜೊತೆ ಚಿಗುರಿನ ಮಾತುಕತೆ ಕಾರ‍್ಯಕ್ರಮ

ರಾಣೇಬೆನ್ನೂರ: ಗಾಂಧಿಯಿಂದ ಗೋಧ್ರಾದವರೆಗೆ ವಿಭಿನ್ನ ಆಯಾಮಗಳನ್ನು ಹೊರಜಗತ್ತಿಗೆ ತಾಕಿಸುತ್ತಾ ದೇಶಕ್ಕೆ ಪರಿಚಿತವಾದ ಗುಜರಾತ್‌ ರಾಜ್ಯದ ಸಾಹಿತ್ಯ ಸಂವೇದನೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಸಾಹಿತಿ ಸಹ್ಯಾದ್ರಿ ನಾಗರಾಜ ಹೇಳಿದರು.

Vijaya Karnataka 29 Jan 2020, 5:00 am
ರಾಣೇಬೆನ್ನೂರ: ಗಾಂಧಿಯಿಂದ ಗೋಧ್ರಾದವರೆಗೆ ವಿಭಿನ್ನ ಆಯಾಮಗಳನ್ನು ಹೊರಜಗತ್ತಿಗೆ ತಾಕಿಸುತ್ತಾ ದೇಶಕ್ಕೆ ಪರಿಚಿತವಾದ ಗುಜರಾತ್‌ ರಾಜ್ಯದ ಸಾಹಿತ್ಯ ಸಂವೇದನೆಯನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಬೆಂಗಳೂರಿನ ಸಾಹಿತಿ ಸಹ್ಯಾದ್ರಿ ನಾಗರಾಜ ಹೇಳಿದರು.
Vijaya Karnataka Web shoot talk program with verse reading
ಪದ್ಯ ಓದು-ಬೇರಿನ ಜೊತೆ ಚಿಗುರಿನ ಮಾತುಕತೆ ಕಾರ‍್ಯಕ್ರಮ


ಕಾಗದ ಸಾಂಗತ್ಯ ವೇದಿಕೆ ವತಿಯಿಂದ ಇಲ್ಲಿನ ಅಶೋಕನಗರದ ರಾಮಚಂದ್ರ ಮಲ್ಲಾಡದ ಮನೆಯ ಅಂಗಳದಲ್ಲಿಏರ್ಪಡಿಸಿದ್ದ ಪದ್ಯ ಓದು-ಬೇರಿನ ಜೊತೆ ಚಿಗುರಿನ ಮಾತುಕತೆ ಎಂಬ ವಿಭಿನ್ನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಗತ್ತಿಗೆ ಅಹಿಂಸೆ, ಶಾಂತಿ ಬೋಧಿಸಿದ ನಾಡಾಗಿರುವ ಗುಜರಾತ್‌ ಗೋಧ್ರಾ ಹತ್ಯಾಕಾಂಡದಿಂದ ಬೇರೆ ಇಮೇಜ್‌ ಹೊಂದುವಂತಾಯಿತು ಎಂದರು.

ಸಾಹಿತಿ ಚಂ.ಸು.ಪಾಟೀಲ ಮಾತನಾಡಿ, ಅಕ್ಷರ ಸಂಸ್ಕೃತಿಯೇ ಮಾಯವಾಗುತ್ತಿರುವ ಸಂದರ್ಭ ಒಂದು ಕಡೆಯಾದರೆ ಯಾವುದನ್ನು ಮತ್ತು ಎಂಥದನ್ನು ನಾವು ಓದಬೇಕು ಎಂಬುದು ಮುಖ್ಯ. ನಮ್ಮ ಅರಿವಿಗೆ ಯಾವುದು ಪೂರಕ, ವರ್ತಮಾನದ ಸಂಘರ್ಷಗಳಿಗೆ ಅಕ್ಷರಗಳು ಯಾವ ರೀತಿಯ ಉತ್ತರ ಕೊಡಬಲ್ಲದು ಎಂಬುದಕ್ಕೆ ಈ ಪದ್ಯ ಓದು ಸಾಕ್ಷಿಯಾಗಿದೆ ಎಂದರು.

ಉಪ್ಪು ಮತ್ತು ಸತ್ಯ ವಿಷಯ ಕುರಿತು ಗುಜರಾತ್‌ ಕವಿಗಳ ರಚಿಸಿದ ಕವಿತೆಗಳ ಕನ್ನಡದ ಅನುವಾದದ ಮೇಲೆ ನಾಮದೇವ ಕಾಗದಗಾರ ಕಾರ್ಯಕ್ರಮ ಆಯೋಜನೆ ಮಾಡಿದ್ದರು. ಕಾಂತೇಶ ಅಬಿಗೇರ, ಹರೀಶ್‌.ಬಿ.ಜಿ, ಇಂದಿರಾ ಕೊಪ್ಪದ, ರಮೇಶ ಬಡಿಗೇರ, ಸವಿತಾ ಮಲ್ಲಾಡದ, ರೇವತಿ ಪೂಜಾರ, ದಾಕ್ಷಾಯಣಿ ಉದಗಟ್ಟಿ, ಕವಿತಾ ಸಾರಂಗಮಠ, ಲಕ್ಷಿತ್ರ್ಮೕ ಅಡಕೆ, ಲಿಂಗರಾಜ ಬಣಕಾರ, ಸಂಜನಾ, ಪಂಕಜ್‌, ಪ್ರಣವ್‌ ಪದ್ಯಗಳನ್ನು ಓದಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ