ಆ್ಯಪ್ನಗರ

ಶ್ರೀ ಮಧ್ವ ನವಮಿ ಉತ್ಸವ

ಸವಣೂರು: ಪಟ್ಟಣದ ಶ್ರೀ ಸತ್ಯಬೊಧ ಸ್ವಾಮಿಗಳ ಮೂಲವೃಂದಾವನ ಮಠದಲ್ಲಿಶ್ರೀ ಮಧ್ವ ನವಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

Vijaya Karnataka 4 Feb 2020, 5:00 am
ಸವಣೂರು: ಪಟ್ಟಣದ ಶ್ರೀ ಸತ್ಯಬೊಧ ಸ್ವಾಮಿಗಳ ಮೂಲವೃಂದಾವನ ಮಠದಲ್ಲಿಶ್ರೀ ಮಧ್ವ ನವಮಿ ಉತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
Vijaya Karnataka Web shri madhva navami festival
ಶ್ರೀ ಮಧ್ವ ನವಮಿ ಉತ್ಸವ


ಕಾರ್ಯಕ್ರಮದ ಅನ್ವಯ ಶ್ರೀ ಹರಿವಾಯುಸ್ತುತಿ ಪುನರುಶ್ಛರಣ. ರಜತ ರಥೋತ್ಸವ, ಪಂಚಾಮೃತ, ಕನಕಾಭಿಷೇಕ, ಹಸ್ಥೋದಕ, ಅಲಂಕಾರ ಮೊದಲಾದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ತತ್ವವಾದದ ಪ್ರತಿಪಾದಕರಾದ ಶ್ರೀ ಮಧ್ವಾಚಾರ್ಯರ ಜೀವನ ಚರಿತ್ರೆಯ ಕುರಿತು ಶ್ರೀಶಾಚಾರ್ಯ ನಾಮಾವಳಿ ಪ್ರವಚನ ಸೇವೆ ನೀಡಿದರು.

ಶ್ರೀ ಮಧ್ವಾಚಾರ್ಯರ ಸರ್ವಮೂಲ ಗ್ರಂಥ ಸೇರಿದಂತೆ ಹರಿವಾಯು ಗುರುಗಳ ಪ್ರತಿಮೆ-ಪಾದುಕೆಗಳನ್ನು ಪಲ್ಲಕ್ಕಿ ಸಮೇತವಾಗಿ ನಗರ ಸಂಕೀರ್ತನೆ ಕೈಗೊಳ್ಳಲಾಯಿತು. ದಾಸರ ಪದಗಳ ಗಾಯನದೊಂದಿಗೆ ನಗರದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಲಾಯಿತು. ಮಧ್ಯಾಹ್ನ ನೆರೆದ ಭಕ್ತವೃಂದಕ್ಕೆ ತೀರ್ಥ ಪ್ರಸಾದ ವಿರತಣೆ ಕೈಗೊಳ್ಳಲಾಯಿತು. ಸಂಜೆ ಪಲ್ಲಕ್ಕಿ ಉತ್ಸವ, ಅಷ್ಟಾವಧಾನ ಸೇವಾ, ತೊಟ್ಟಿಲೊತ್ಸವ, ಫಲಮಂತ್ರಾಕ್ಷತೆ ವಿತರಣೆಯೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಶ್ರೀ ಮಠದ ಪರ್ಯಾತಸ್ಥರ ನೇತೃತ್ವದಲ್ಲಿಪವಮಾಮಾಚಾರ್ಯ ನಾಮಾವಳಿ ಹಾಗೂ ಸಹೋದರರು ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ