ಆ್ಯಪ್ನಗರ

ಬೆಳೆ ವಿಮೆ ಖಾತೆಗೆ ಜಮೆ ಮಾಡಿ

ಶಿಗ್ಗಾವಿ: ಸಂಕಷ್ಟದಲ್ಲಿರುವ ತಾಲೂಕಿನ ರೈತರಿಗೆ 2018ನೇ ಸಾಲಿನ ಬೆಳೆವಿಮೆಯ 31 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೆಸಿಸಿ ಬ್ಯಾಂಕ್‌ ನಿರ್ದೇಶಕ ಗಂಗಾಧರ ಸಾತಣ್ಣನವರ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

Vijaya Karnataka 11 Sep 2019, 5:00 am
ಶಿಗ್ಗಾವಿ: ಸಂಕಷ್ಟದಲ್ಲಿರುವ ತಾಲೂಕಿನ ರೈತರಿಗೆ 2018ನೇ ಸಾಲಿನ ಬೆಳೆವಿಮೆಯ 31 ಕೋಟಿ ರೂ.ಗಳನ್ನು ನೀಡಬೇಕು ಎಂದು ಕೆಸಿಸಿ ಬ್ಯಾಂಕ್‌ ನಿರ್ದೇಶಕ ಗಂಗಾಧರ ಸಾತಣ್ಣನವರ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
Vijaya Karnataka Web sign up for a crop insurance account
ಬೆಳೆ ವಿಮೆ ಖಾತೆಗೆ ಜಮೆ ಮಾಡಿ


ಪಟ್ಟಣದಲ್ಲಿಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿಗ್ಗಾವಿ, ದುಂಡಸಿ, ಬಂಕಾಪುರ ಹೋಬಳಿಯಲ್ಲಿನೆರೆಯಿಂದ ರೈತರು ನಿರ್ಗತಿಕರಾಗಿದ್ದಾರೆ. ಈ ಸಂದರ್ಭದಲ್ಲಿಬಿಡುಗಡೆಯಾದ ವಿಮೆ ಹಣವನ್ನು ರೈತರ ಖಾತೆಗೆ ತಕ್ಷಣ ಜಮೆ ಮಾಡಬೇಕು ಎಂದರು.

ಸಂಕಷ್ಟದಲ್ಲಿರುವ ರೈತರು ಬೀದಿಗಿಳಿದು ವಿಮೆ ಹಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಅಧಿಕಾರಿಗಳು ವಿಮೆ ಹಣ ಜಮೆ ನೀಡುವ ಭರವಸೆ ನೀಡಿದ್ದ ದಿನಾಂಕ ಮುಗಿದಿದೆ. ಇನಾದರೂ ರೈತರ ತಾಳ್ಮೆ ಪರೀಕ್ಷಿಸುವ ಗೋಜಿಗೆ ಹೋಗದೆ ತಕ್ಷಣ ಖಾತೆಗೆ ಜಮೆ ನೀಡಬೇಕು. ನೆರೆಯಿಂದ ಮನೆ ಕಳೆದುಕೊಂಡ ಬಡವರಿಗೆ ಸಿಗಬೇಕಿದ್ದ ಪರಿಹಾರ ಮೊತ್ತ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲೆಗೆ ಪ್ರತ್ಯೇಕ ಕೆಸಿಸಿ ಬ್ಯಾಂಕ್‌, ಹಾಲು ಒಕ್ಕೂಟ ರಚನೆ ಕುರಿತು ಗೃಹ ಸಚಿವರ ನೇತೃತ್ವದಲ್ಲಿನಡೆದ ಹೋರಾಟಕ್ಕೆ ಪ್ರತಿಫಲ ದೊರೆಯವ ನಿರೀಕ್ಷೆಯಿದೆ. ಕೆಲವೇ ದಿನದಲ್ಲಿಹಾವೇರಿ ಜಿಲ್ಲೆಯ ಜನರ ಬಹು ದಿನದ ಬೇಡಿಕೆ ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರೇಣುಕುಗೌಡ ಪಾಟೀಲ, ಅಶೋಕ ಬಂಕಾಪುರ, ಆನಂದ ಸುಬೇದಾರ, ಮಂಜುನಾಥ ಬ್ಯಾಹಟ್ಟಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ