ಆ್ಯಪ್ನಗರ

ಅಧರ್ಮದ ನಡೆಯಿಂದ ಸಮಾಜ ಕಲುಷಿತ

ತುಮ್ಮಿನಕಟ್ಟಿ: ಇಂದು ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ ಎಂದು ಹಳೇಹುಬ್ಬಳ್ಳಿಯ ಜಗದ್ಗುರು ಶ್ರೀವೀರಭಿಕ್ಷಾವರ್ತಿ ನೀಲಕಂಠಮಠದ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

Vijaya Karnataka 27 Aug 2019, 5:00 am
ತುಮ್ಮಿನಕಟ್ಟಿ: ಇಂದು ಅಧರ್ಮದ ನಡೆಯಿಂದ ಸಮಾಜ ಕಲುಷಿತವಾಗಿದೆ ಎಂದು ಹಳೇಹುಬ್ಬಳ್ಳಿಯ ಜಗದ್ಗುರು ಶ್ರೀವೀರಭಿಕ್ಷಾವರ್ತಿ ನೀಲಕಂಠಮಠದ ಶ್ರೀಶಿವಶಂಕರ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
Vijaya Karnataka Web HVR-26 TMK 01


ಗ್ರಾಮದಲ್ಲಿ ಸೋಮವಾರ ಶ್ರೀನೀಲಕಂಠೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾವಶುದ್ಧವಾಗಿದ್ದರೆ ನಮ್ಮ ಬದುಕು ಸುಂದರವಾಗುತ್ತದೆ. ಬದುಕು ಸುಂದರವಾದರೆ ಭಗವಂತನ ಒಲುಮೆಯಾಗುತ್ತದೆ. ನಮ್ಮ ಭಾವವು ನಮಗರಿಯದಂತೆ ಶುದ್ಧವಾಗಬೇಕಾದರೆ ಸಂತ ಮಹಾತ್ಮರ ಸಾನ್ನಿಧ್ಯ ಮತ್ತು ಅವರ ಜೀವನ ಸಂದೇಶದ ಶ್ರವಣದಿಂದ ಸಾಧ್ಯವಾಗುತ್ತದೆ ಎಂದರು.

ಆಧುನಿಕ ಯುಗದಲ್ಲಿ ಸರ್ವರೋಗಕ್ಕೂ ಮದ್ದು ಇದೆ. ಆದರೆ ನೆಮ್ಮದಿಯ ಬದುಕಿಗೆ ಮಾತ್ರ ಯಾವುದೇ ಮದ್ದು ಇಲ್ಲ. ನೈತಿಕ ಜೀವನ ಮತ್ತು ಧರ್ಮದ ಆಚರಣೆಯಿಂದ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಅದಕ್ಕೆ ಶ್ರಾವಣ ಮಾಸದ ಅನುಭಾವ ಉತ್ತಮ ದಾರಿ ದೀಪ ಎಂದು ಹೇಳಿದರು. ಗದಿಗೆಪ್ಪ ಬುಡಮಣ್ಣನವರ, ಶಿವಶಂಕರಪ್ಪ ಬನ್ನೂರಪ್ಪನವರ, ಗದಿಗೆಪ್ಪ ಬಾಣಾವರ, ಕುಮಾರ ಕರಿಯಜ್ಜಿ, ಪರಮೇಶಪ್ಪ ಮೂಡಬಾಗಿಲ, ಸಣ್ಣ ಹನುಮಂತಪ್ಪ ಕಾಕಿ, ನಾರಾಯಣಪ್ಪ ಗಡ್ಡದ ಮತ್ತಿತರರು ಇದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ