ಆ್ಯಪ್ನಗರ

ಅಹಿಂದಕ್ಕೆ ಸಾಮಾಜಿಕ ಅನ್ಯಾಯ : ಅಸಮಾಧಾನ

ಶಿಗ್ಗಾವಿ: ಮೂರು ದಶಕಗಳಿಂದ ರಾಜಕೀಯ ಸ್ಥಾನಮಾನಗಳಿಂದ ವಂಚಿತಗೊಂಡ ಅಹಿಂದ ವರ್ಗದ ಜನರ ಪಾಲಿಗೆ ಶಿಗ್ಗಾವಿ ವಿಧಾನ ಸಭಾ ಮತ ಕ್ಷೇತ್ರದಲ್ಲಿಸಾಮಾಜಿಕ ನ್ಯಾಯ ಇಲ್ಲದಾಗಿದೆ ಎಂದು ಅಹಿಂದ ಮುಖಂಡರು ಪಟ್ಟಣದಲ್ಲಿಎಪಿಎಂಸಿ ಆವರಣದಲ್ಲಿಭಾನುವಾರ ನಡೆದ ತಾಲೂಕು ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ನೂತನ ಒಕ್ಕೂಟದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿಅಸಮಾಧಾನ ಹೊರ ಹಾಕಿದರು.

Vijaya Karnataka 30 Dec 2019, 5:00 am
ಶಿಗ್ಗಾವಿ: ಮೂರು ದಶಕಗಳಿಂದ ರಾಜಕೀಯ ಸ್ಥಾನಮಾನಗಳಿಂದ ವಂಚಿತಗೊಂಡ ಅಹಿಂದ ವರ್ಗದ ಜನರ ಪಾಲಿಗೆ ಶಿಗ್ಗಾವಿ ವಿಧಾನ ಸಭಾ ಮತ ಕ್ಷೇತ್ರದಲ್ಲಿಸಾಮಾಜಿಕ ನ್ಯಾಯ ಇಲ್ಲದಾಗಿದೆ ಎಂದು ಅಹಿಂದ ಮುಖಂಡರು ಪಟ್ಟಣದಲ್ಲಿಎಪಿಎಂಸಿ ಆವರಣದಲ್ಲಿಭಾನುವಾರ ನಡೆದ ತಾಲೂಕು ದಲಿತ ಹಿಂದುಳಿದ ಅಲ್ಪ ಸಂಖ್ಯಾತರ ನೂತನ ಒಕ್ಕೂಟದ ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿಅಸಮಾಧಾನ ಹೊರ ಹಾಕಿದರು.
Vijaya Karnataka Web social injustice to ahinda resentment
ಅಹಿಂದಕ್ಕೆ ಸಾಮಾಜಿಕ ಅನ್ಯಾಯ : ಅಸಮಾಧಾನ


ಮೂರು ದಶಕಗಳಿಂದ ರಾಜಕೀಯ ಸ್ಥಾನಮಾನದಿಂದ ಅಹಿಂದ ವರ್ಗದ ಜನರನ್ನು ವಂಚಿಸಲಾಗಿದೆ. ಕೆಸಿಸಿ ಬ್ಯಾಂಕ್‌, ಕೆ.ಎಂ.ಎಫ್‌., ಸ್ಥಳೀಯ ಸಂಘ, ಸಂಸ್ಥೆಗಳಲ್ಲಿಯೂ ಅಹಿಂದ ಜನರಿಗೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ಒಡೆದಾಳುವ ರಾಜಕೀಯ ವ್ಯವಸ್ಥೆಯಿಂದ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿ ಕಟ್ಟುವಂತ ಕೆಲಸ ನಡೆಯತ್ತಿದೆ ಎಂದು ಸಮಾರಂಭ ಉದ್ಘಾಟಿಸಿ ಮಾತನಾಡಿದ ದಲಿತ ಮುಖಂಡ ಡಿ.ಎಸ್‌.ಮಾಳಗಿ, ಸಾಮಾಜಿಕ ನ್ಯಾಯಕ್ಕೆ ತಿಲಾಂಜಲಿ ನೀಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

1,85 ಲಕ್ಷ ಅಹಿಂದ ಮತದಾರರಿದ್ದರೂ ಒಂದು ಬಾರಿಯೂ ಶಾಸಕರಾಗಲು ಪರಿಶಿಷ್ಟ ಜಾತಿ, ಪಂಗಡ, ಕುರಬ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಕನಿಷ್ಠ ಈ ಸಮುದಾಯ ಜನರ ಸಮಸ್ಯೆಗೆ ಸ್ಪಂದಿಸುವ ಸೌಜನ್ಯ ಸ್ಥಳೀಯ ಜನಪ್ರತಿನಿಧಿಗಳು ತೊರುತ್ತಿಲ್ಲ. ಬರವ ದಿನಗಳಲ್ಲಿಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಅಹ್ವಾನಿಸಿ, 50 ಸಾವಿರಕ್ಕೂ ಹೆಚ್ಚು ಜನರನ್ನು ಸೇರಿಸುವ ಮೂಲಕ ಅದ್ಧೂರಿ ಅಹಿಂದ ಸಮಾವೇಶ ಏರ್ಪಡಿಸಲಾಗುತ್ತದೆ ಎಂದರು.

ಜಿಲ್ಲಾಯೂನಿಯನ್‌ ಬ್ಯಾಂಕ್‌ ಅಧ್ಯಕ್ಷ, ಅಹಿಂದ ಮುಖಂಡ ಶಿವಾನಂದ ರಾಮಗೇರಿ ಮಾತನಾಡಿ, ಸಂಘಟನೆ ಮೂಲಕ ಅಹಿಂದ ವರ್ಗದ ಜನರ ಹಕ್ಕುಗಳನ್ನು ಬೇಡಿ ಪಡೆಯವುದಕ್ಕಿಂತ ಹೋರಾಡಿ ಪಡೆಯಲು ಗಟ್ಟಿತನ ಸಂಘಟನೆ ಇಂದು ಅವಶ್ಯವಿದೆ.ಹಕ್ಕು ಪಡೆದುಕೊಳ್ಳಲು ಸಂಘಟಿತಗೊಳ್ಳುವ ಅಹಿಂದ ಸಂಘಟನೆ ಮತ್ತೊಂದು ಸಮಾಜದ ಜತೆಗೆ ಸುಮಧರ ಬಾಂಧವ್ಯ ಬೆಸಯಬೇಕು ಹೊರತು ದ್ವೇಷ ಸಾಧಿಸುವ ಸಂಘಟನೆಯಾಗಬಾರದು ಎಂದು ಕರೆ ನೀಡಿದರು.

ದಲಿತ ಮುಖಂಡ ಗುರುನಗೌಡ ಪಾಟೀಲ ಮಾತನಾಡಿ, ಸಂವಿಧಾನ ಆಸೆಗಳು ಈಡೇರುತ್ತಿಲ್ಲ. ಅಹಿಂದ ವರ್ಗದ ಜನರ ಸಮಸ್ಯೆಗಳನ್ನು ಕೇಳುವ ಕಿವಿಗಳು ಇಲ್ಲದಾಗಿದೆ. ಈ ಜನಾಂಗ ವಂಚಿಸುವ ರಾಜಕಾರಣಿಗೆ ಮುಂದಿನ ದಿನದಲ್ಲಿಸೋಲಿನ ಪಾಠವಾಗಲಿದೆ. ಅತೀವೃಷ್ಟಿಯಿಂದ ಮನೆ, ಬೆಳೆ ಕಳೆದುಕೊಂಡ ದಲಿತ, ಹಿಂದುಳಿದವರಿಗೆ ಸರಕಾರದ ಸೌಲಭ್ಯ ಆಟಕ್ಕುಂಟು, ಲೆಕ್ಕಕ್ಕಿಲ್ಲವೆಂಬಂತಾಗಿದೆ. ಅಹಿಂದ ಜನರು ಸಂಘಟಿತರಾಗುವ ಮೂಲಕ ಇಲ್ಲಿನಡೆದ ಹೈಟೆಕ್‌ ರಾಜಕಾರಣಕ್ಕೆ ತೆರೆ ಎಳೆಯಬೇಕು ಎಂದರು.

ಕುರುಬ ಸಮಾಜದ ಅಧ್ಯಕ್ಷ ಫಕ್ಕೀರಪ್ಪ ಕುಂದೂರು ಮಾತನಾಡಿ, ಶಕ್ತಿಯುತ ಸಂಘಟನೆಯೊಂದಿದ್ದರೇ ಸಾಕು, ರಾಜಕಾರಣಿ, ಸರಕಾರ ಬಾಗಿಲಿಗೆ ಹೋಗುವ ಬದಲು ನಮ್ಮ ಬಳಿ ಸರಕಾರ, ರಾಜಕಾರಣಿಗಳು ಸಹ ಬರುತ್ತಾರೆ ಈ ಕಟು ಸತ್ಯದ ಅರಿವು ಅಹಿಂದ ವರ್ಗದ ಜನರಿಗೆ ಗೊತ್ತಾಗಬೇಕು ಎಂದರು. ಇದೇ ಸಂದರ್ಭದಲ್ಲಿಅಹಿಂದ ಸಂಘಟಿತ ಮುಖಂಡರಾದ ಮಹಾದೇವಪ್ಪ ವಡ್ಡರ, ಯಲ್ಲಪ್ಪ ಹರಿಜನ, ಯಲ್ಲಪ್ಪ ಅಂದಲಗಿ ಅವರನ್ನು ಸನ್ಮಾನಿಸಲಾಯಿತು.

ಕುಬೇರಪ್ಪ ರಾಮನಕೊಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಪಂ.ಸದಸ್ಯ ಬಸವರಾಜ ದೇಸಾಯಿ, ಸೋಮನಗೌಡ ಹಟ್ಟಿ, ಈಸುಸಾಬ ಬಾವಿಕಟ್ಟಿ, ಎಂ.ಎಸ್‌.ಹಳವಳ್ಳಿ, ನಾಗರಾಜ ಹಾವೇರಿ, ಅಶೋಕ ಕಾಳೆ, ಬಸಪ್ಪ ಮುಗಳಿ, ಡಿ.ಎಫ್‌. ಧಾರವಾಡ, ಫಕ್ಕಿರೇಶ, ಪಾಂಡುರಂಗ ತಿಪ್ಪಕ್ಕನವರ, ಪ್ರಲ್ಹಾದ ರಾಯ್ಕರ, ಯಲ್ಲಪ್ಪ ಚವ್ಹಾಣ, ಅಣ್ಣಪ್ಪ ಲಮಾಣಿ, ಸಿದ್ದಪ್ಪ ಮಾದರ, ಮಹಿಳಾ ಘಟಕದ ಅಧ್ಯಕ್ಷೆ ರಜೀಯಾ ಕೊಲ್ಹಾಪುರ ಮತ್ತಿತರರು ಉಪಸ್ಥಿತರಿದ್ದರು. ಯಲ್ಲಪ್ಪ ಅಂದಲಗಿ ಸ್ವಾಗತಿಸಿದರು. ಮಹಾದೇವಪ್ಪ ವಡ್ಡರ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ