ಆ್ಯಪ್ನಗರ

ರಂಗಭೂಮಿಯಿಂದ ಸಮಾಜ ಸ್ವಾಸ್ಥ್ಯ

ಅಕ್ಕಿಆಲೂರು: ಹೃದಯ, ಮನಸ್ಸುಗಳನ್ನು ತಿಳಿಗೊಳಿಸಿ ಜನ ಸಮುದಾಯ ಮತ್ತು ಸಮಾಜವನ್ನು ಸ್ವಾಸ್ಥ್ಯದಿಂದಿಡಲು ರಂಗಭೂಮಿಗೆ ಮಾತ್ರ ಸಾಧ್ಯ ಎಂದು ಹಿರಿಯ ರಂಗಕರ್ಮಿ ಶಂಕರ ಹಲಗತ್ತಿ ಹೇಳಿದರು.

Vijaya Karnataka 29 Mar 2019, 5:00 am
ಅಕ್ಕಿಆಲೂರು: ಹೃದಯ, ಮನಸ್ಸುಗಳನ್ನು ತಿಳಿಗೊಳಿಸಿ ಜನ ಸಮುದಾಯ ಮತ್ತು ಸಮಾಜವನ್ನು ಸ್ವಾಸ್ಥ್ಯದಿಂದಿಡಲು ರಂಗಭೂಮಿಗೆ ಮಾತ್ರ ಸಾಧ್ಯ ಎಂದು ಹಿರಿಯ ರಂಗಕರ್ಮಿ ಶಂಕರ ಹಲಗತ್ತಿ ಹೇಳಿದರು.
Vijaya Karnataka Web social welfare from theater
ರಂಗಭೂಮಿಯಿಂದ ಸಮಾಜ ಸ್ವಾಸ್ಥ್ಯ


ರಂಗಗ್ರಾಮ ಖ್ಯಾತಿಯ ಹಾನಗಲ್‌ ತಾಲೂಕಿನ ಶೇಷಗಿರಿಯ ಸಿ.ಎಂ.ಉದಾಸಿ ಕಲಾಕ್ಷೇತ್ರದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಹಾಗೂ ಶೇಷಗಿರಿಯ ಗಜಾನನ ಯುವಕ ಮಂಡಳದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ರಂಗಭೂಮಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಸಮಕಾಲೀನ ಅನೇಕ ಸಮಸ್ಯೆಗಳಿಗೆ ನಿರ್ಭೀತವಾಗಿ ಉತ್ತರ ನೀಡುವ ಶಕ್ತಿ ರಂಗಭೂಮಿಗಿದೆ. ಮಕ್ಕಳ ಮೇಲಿನ ಮಾನಸಿಕ ಒತ್ತಡ ಕಡಿಮೆ ಮಾಡಿ ಉಲ್ಲಾಸ ಮತ್ತು ಉತ್ಸಾಹದಿಂದ ನೆಮ್ಮದಿಯ ಶಿಕ್ಷ ಣ ಪಡೆಯುವುದು ಮಕ್ಕಳ ರಂಗಭೂಮಿಯಿಂದ ಸಾಧ್ಯವಿದೆ ಎಂದು ಹೇಳಿದ ಅವರು, ಮಕ್ಕಳ ಮೇಲೆ ನಮ್ಮ ಕನಸು ಹೇರಬಾರದು. ಮಗು ಸ್ವತಂತ್ರವಾಗಿ ಕನಸು ಕಾಣುವಂತೆ, ಕಂಡ ಕನಸು ನನಸು ಮಾಡಿಕೊಳ್ಳಲು ಸಹೃದಯಿ ವಾತಾವರಣ ಕಲ್ಪಿಸಿಕೊಡುವ ಕಾರ್ಯವನ್ನು ಪೋಷಕರು ನೆರವೇರಿಸುವತ್ತ ಚಿತ್ತ ಹರಿಸಬೇಕಿದೆ ಎಂದು ಹೇಳಿದರು.

ನಾಟಕಕಾರ ನಾಟಕ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃ ಎಂ.ಎಸ್‌.ಮಾಳವಾಡ ಮಾತನಾಡಿ, ಕರ್ನಾಟಕದಲ್ಲಿ ರಂಗಭೂಮಿ ಜೀವಂತ ಇರುವುದೇ ಹಳ್ಳಿಗಳಲ್ಲಿ. ಶೇಷಗಿರಿ ಇದಕ್ಕೊಂದು ಜೀವಂತ ಉದಾಹರಣೆ ಎಂದು ಹೇಳಿ ಕಳೆದ ನಾಲ್ಕು ದಶಕಗಳಲ್ಲಿ ಪವಾಡ ಸದೃಶ್ಯವಾಗಿ ಬೆಳೆದ ರಂಗಗ್ರಾಮ ಶೇಷಗಿರಿ ಎಂದರು.

ಈ ಸಂದರ್ಭದಲ್ಲಿ ರಂಗಕರ್ಮಿಗಳಾದ ಸತೀಶ ಕುಲಕರ್ಣಿ, ಎಂ.ಎಸ್‌.ಮಾಳವಾಡ, ಮಧುಕರ ಹರಿಜನ ಹಾಗೂ ದಾವಣಗೇರಿಯ ಸಿದ್ಧರಾಜು ಅವರಿಗೆ ರಂಗ ಸನ್ಮಾನ ನೀಡಲಾಯಿತು. ಶಂಕ್ರಣ್ಣ ಗುರಪ್ಪನವರ ಅಧ್ಯಕ್ಷ ತೆ ವಹಿಸಿದ್ದರು. ಸಂಗೀತ ಕಲಾವಿದ ಎಸ್‌.ಎಸ್‌.ಮೂರಮಟ್ಟಿ, ಹೆಜ್ಜೆ ಗೆಜ್ಜೆ ಕಲಾತಂಡ ಖ್ಯಾತಿಯ ಕೃಷ್ಣ ಲಿಂಗೇರಿ, ಸಿದ್ಧಣ್ಣ ಕರಡಿ ಇದ್ದರು. ಸಿದ್ಧಪ್ಪ ರೊಟ್ಟಿ ಸ್ವಾಗತಿಸಿದರು. ಜಮೀರಖಾನ ಪಠಾಣ ನಿರೂಪಿಸಿದರು. ಸೋಮು ಗುರಪ್ಪನವರ ವಿಶ್ವ ರಂಗಭೂಮಿ ಸಂದೇಶ ಓದಿದರು. ಪ್ರಭು ಗುರಪ್ಪನವರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ