ಆ್ಯಪ್ನಗರ

ಬಿರುಗಾಳಿ, ಮಳೆ: ನೆಲಕ್ಕುರುಳಿದ ಬಾಳೆ

ತುಮ್ಮಿನಕಟ್ಟಿ: ತುಮ್ಮಿನಕಟ್ಟಿ ಸಮೀಪದ ಮೆಣಸಿನಹಾಳ ಗ್ರಾಮದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಮೇತ ಮಳೆಯಾಗಿದ್ದು ರೈತರು ಬೆಳೆದ ಬಾಳೆ ಬೆಳೆ ನೆಲಕ್ಕುರುಳಿ ಅಪಾರ ಹಾನಿಯಾಗಿದೆ.

Vijaya Karnataka 14 May 2019, 5:00 am
ತುಮ್ಮಿನಕಟ್ಟಿ: ತುಮ್ಮಿನಕಟ್ಟಿ ಸಮೀಪದ ಮೆಣಸಿನಹಾಳ ಗ್ರಾಮದಲ್ಲಿ ಭಾನುವಾರ ಸಂಜೆ ಬಿರುಗಾಳಿ ಸಮೇತ ಮಳೆಯಾಗಿದ್ದು ರೈತರು ಬೆಳೆದ ಬಾಳೆ ಬೆಳೆ ನೆಲಕ್ಕುರುಳಿ ಅಪಾರ ಹಾನಿಯಾಗಿದೆ.
Vijaya Karnataka Web HVR-13 TMK 01


ಮೆಣಸಿನಹಾಳ ಗ್ರಾಮದಲ್ಲಿ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆ ಸುರಿದಿದೆ. ಕೆಲವು ಕಡೆ ಮನೆ ಛಾವಣಿಯ ತಗಡುಗಳು ಹಾರಿಹೋಗಿವೆ. ರೈತರಾದ ಕುಬೇರಪ್ಪ ಸಿದ್ದಪ್ಪ ಮುದೇನೂರು 3 ಎಕರೆ ಹಾಗೂ ರಾಘವೇಂದ್ರ ಎಮ್‌.ಜಿ. ಅವರ ಫಲಕ್ಕೆ ಬಂದ ಬಾಳೆ ಬೆಳೆಗಳು ಹಾಳಾಗಿವೆ. ಮೆಣಸಿನಹಾಳ ಗ್ರಾಮದ ಶಂತವ್ವ ಮಾಸೂರು ಹಾಗೂ ಕಳಸವ್ವ ಚನ್ನಪ್ಪ ಅಡಿವೇರ ಮನೆಗಳ ಛಾವಣಿ ತಗಡುಗಳು ಹಾರಿ ಹಾನಿಗೊಳಗಾಗಿವೆ.

ಸ್ಥಳಕ್ಕೆ ಭೇಟಿ : ಜಿಪಂ ಸದಸ್ಯರಾದ ಗಿರಿಜಮ್ಮ ಬ್ಯಾಲದಹಳ್ಳಿ, ಗ್ರಾಪಂ ಅದ್ಯಕ್ಷ ಜಗದೀಶಯ್ಯ ಗೌಡ್ರ, ಗ್ರಾಪಂ ಪಿಡಿಓ ದೇವರಾಜ ಡಿ.ಜಿ. ಹನುಂಮತಪ್ಪ ಬ್ಯಾಲದಹಳ್ಳಿ, ಸಿದ್ದಪ್ಪ ಮಾಸೂರ, ಹನುಮನಗೌಡ ಪಾಟೀಲ ಸ್ಥಳಕ್ಕೆ ಭೇಟಿ ನೀಡಿ ಹಾನಿಗೊಳಗಾದವರಿಗೆ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವದು ಎಂದು ಭರವಸೆ ನೀಡಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ