ಆ್ಯಪ್ನಗರ

ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ

ಹಾವೇರಿ: ಭಾರತದ ಸಂವಿಧಾನಕ್ಕೆ ಮತ್ತು ಐಕ್ಯತೆಗೆ ಹೊರೆಯಾಗಿದ್ದ ಕಲಂ 370, 35ಎ ರದ್ದು ಪಡಿಸುವ ಮೂಲಕ ದೇಶದ ಬೆಳವಣಿಗೆಗೆ ಹೊಸ ತಿರುವು ಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಹೇಳಿದರು.

Vijaya Karnataka 15 Sep 2019, 5:00 am
ಹಾವೇರಿ: ಭಾರತದ ಸಂವಿಧಾನಕ್ಕೆ ಮತ್ತು ಐಕ್ಯತೆಗೆ ಹೊರೆಯಾಗಿದ್ದ ಕಲಂ 370, 35ಎ ರದ್ದು ಪಡಿಸುವ ಮೂಲಕ ದೇಶದ ಬೆಳವಣಿಗೆಗೆ ಹೊಸ ತಿರುವು ಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾಕಾರ್ಯದರ್ಶಿ ಡಾ. ಸಂತೋಷ ಆಲದಕಟ್ಟಿ ಹೇಳಿದರು.
Vijaya Karnataka Web student speech competition
ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ


ನಗರದ ಸಿ.ಬಿ. ಕೊಳ್ಳಿ ಪಾಲಿಟೆಕ್ನಿಕ್‌ ಕಾಲೇಜಿನಲ್ಲಿಬಿಜೆಪಿ ಜಿಲ್ಲಾಸಮಿತಿಯಿಂದ ನಡೆದ ಜಮ್ಮುಧಿಧಿ-ಕಾಶ್ಮಿರದ 370 ಕಲಂ ಮತ್ತು 35ಎ ರದ್ದತಿ ಕುರಿತು ವಿದ್ಯಾಗಳ ಭಾಷಣ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು.

ಜನಸಂಘದ ಸಂಸ್ಥಾಪಕರು ಮತ್ತು ಜಮ್ಮು -ಕಾಶ್ಮಿರದಲ್ಲಿತ್ರೀವಣ ದ್ವಜವನ್ನು ಹಾರಿಸಬೇಕೆಂಬ ಸದುದ್ದೇಶದಿಂದ ಕಾಶ್ಮಿರ ಚಲೋ ಕೈಗೊಂಡು ಕಾಶ್ಮಿರಕ್ಕೆ ತೆರಳಿದ್ದ ಡಾ. ಶ್ಯಾಮ್‌ ಪ್ರಸಾದ ಮುಖರ್ಜಿಯವರನ್ನು ಬಂಧಿಸಿ ಜೈಲಿಗೆ ಹಾಕಿದಾಗ ಅವರು ಅನುಮಾನಾಸ್ಪದವಾಗಿ ಸಾವನ್ನು ಅಪ್ಪಿದರು. ಅವರ ಸಾವಿಗೆ ಇಂದು ಪಕ್ಷ ನ್ಯಾಯ ಒದಗಿಸಿದೆ ಎಂದು ಹೇಳಿದರು. ಕಲಂನ್ನು ರದ್ದುಗೊಳಿಸಿದ ನಂತರ ಕಾಶ್ಮಿರ ಯಾವ ರೀತಿ ಅಭಿವೃದ್ದಿಯ ಪತದಲ್ಲಿಸಾಗುತ್ತದೆ ಎಂಬುದನ್ನು ಇಂದಿನ ಯುವ ಜನತೆ ಅರಿತುಕೊಂಡು ಇತರರಿಗೂ ಸಹ ಅದನ್ನು ಮನವರಿಕೆ ಮಾಡಿಕೊಡಬೇಕು ಎಂದು ತಿಳಿಸಿದರು.

ನಗರ ಪ್ರಧಾನಕಾರ್ಯದರ್ಶಿ ಪ್ರಕಾಶ ಉಜನಿಕೊಪ್ಪ ಮಾತನಾಡಿ, ಪಕ್ಷ ಜಾತಿ ಹಾಗೂ ಹಣದ ರಾಜಕಾರಣಕ್ಕೆ ಒತ್ತುಕೊಡದೆ ರಾಷ್ಟ್ರದ ಐಕ್ಯತೆ ಹಾಗೂ ಸಮಗ್ರತೆ ದೃಷ್ಟಿಯಿಂದ ರಾಜಕಾರಣ ಮಾಡುತ್ತಿದೆ ಎಂದು ಹೇಳಿದರು. ಭಾಷಣ ಸ್ಪರ್ಧೆಯಲ್ಲಿ65 ವಿದ್ಯಾರ್ಥಿಗಳು ಭಾಗವಹಿಸಿದ್ದು, ಅದರಲ್ಲಿವಿದ್ಯಾ ಹಂಚಿನಮನಿ (ಪ್ರಥಮ), ಕಾವೇರಿ ಹೊಸಪೇಟಿ (ದ್ವಿತೀಯ), ಅರ್ಚನಾ ಜೆ.ಎಂ (ತೃತಿಯ) ಸ್ಥಾನ ಪಡೆದುಕೊಂಡಿದ್ದಾರೆ.

ಈರಣ್ಣ ಅಂಗಡಿ, ವಿವೇಕಾನಂದ ಇಂಗಳಗಿ, ಸತೀಶ ತಿಮ್ಮಣ್ಣವನರ, ಶಿವಬಸವ ವನಳ್ಳಿ, ಮಂಜುನಾಥ ಪುಥಳೆಕರ, ವಿಜಕುಮಾರ ಚಿನ್ನಿಕಟ್ಟಿ, ರುದ್ರೇಶ ಚಿನ್ನಣ್ಣವನರ ಸೇರಿದಂತೆ ಉಪಸ್ಥಿತರಿದ್ದರು. ವೆಂಕಟೇಶ ದೈವಜ್ಞ ಸ್ವಾಗತಿಸಿದರು. ಶಶಿಧರ ಹೊಸಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ