ಆ್ಯಪ್ನಗರ

ಅಕ್ಕಿಆಲೂರಿನಲ್ಲಿ ವಿದ್ಯಾರ್ಥಿಗಳ ಜಾಥಾ

ಅಕ್ಕಿಆಲೂರು :ಕಾರ್ಗಿಲ್‌ ವಿಜಯ್‌ ದಿವಸ್‌ ಅಂಗವಾಗಿ ಇಲ್ಲಿನ ಗಂಗಪ್ಪ ಧಾರವಾಡ ಗ್ರಾಮೀಣ ಗುರುಕುಲ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಗುರುವಾರ ಪ್ರಮುಖ ಬೀದಿಗಳಲ್ಲಿ ಜಾಥಾ ಕೈಗೊಂಡರು. ಕೈಗಳಲ್ಲಿ ರಾಷ್ಟ್ರಧ್ವಜ ಹಿಡಿದು ಜಾಥಾದಲ್ಲಿ ಸಾಗಿ ಬಂದ ವಿದ್ಯಾರ್ಥಿಗಳು ದೇಶಭಕ್ತಿಯ ಘೋಷಣೆ ಮೊಳಗಿಸಿದರು. ಸೈನಿಕರ ತ್ಯಾಗ, ಬಲಿದಾನ ಸ್ಮರಿಸಿದರು. ಭಾರತ ಮಾತೆಯ ಸ್ತಬ್ಧಚಿತ್ರ ಮೆರವಣಿಗೆ ಕಣ್ಮನ ಸೆಳೆಯಿತು. ಕೆಲ ವಿದ್ಯಾರ್ಥಿಗಳು ಸೈನಿಕರ ವೇಷಭೂಷಣದಲ್ಲಿ ಕಂಗೊಳಿಸಿದರು.

Vijaya Karnataka 28 Jul 2018, 5:00 am

Vijaya Karnataka Web students day atakkialur
ಅಕ್ಕಿಆಲೂರಿನಲ್ಲಿ ವಿದ್ಯಾರ್ಥಿಗಳ ಜಾಥಾ

ಗುರುಕುಲದ ಆಡಳಿತಾಧಿಕಾರಿ ಸುರೇಂದ್ರ ಕೆರೆಮ್ಮನವರ ಮಾತನಾಡಿ, ಸೈನಿಕರ ಸ್ಮರಣೆ ಒಂದು ದಿನಕ್ಕೆ ಸೀಮಿತವಾಗಬಾರದು. ಮನೆ, ಮಠ ಬಿಟ್ಟು ಹಗಲಿರುಳೆನ್ನದೇ ದೇಶದ ಗಡಿ ಕಾಯುವ ಸೈನಿಕರಿಂದಾಗಿ ನಾವೆಲ್ಲರೂ ದೇಶದೊಳಗೆ ನೆಮ್ಮದಿಯ ಜೀವನ ಸಾಗಿಸುತ್ತಿದ್ದೇವೆ. ಸೈನಿಕರ ತ್ಯಾಗ ದೊಡ್ಡದು. ಅದನ್ನು ನಾವೆಲ್ಲರೂ ನೆನಪಿಟ್ಟುಕೊಳ್ಳಬೇಕಿದೆ ಎಂದರು.

ಮುಖ್ಯೋಪಾಧ್ಯಾಯ ವಿಜಯ ಪರಶೀಕ್ಯಾತಣ್ಣನವರ, ಸಹ ಶಿಕ್ಷ ಕಿಯರಾದ ಜ್ಯೋತಿ ಬಿ.ಎಂ., ಫೌಜಿಯಾ ದೊಡ್ಡಮನಿ, ಪಲ್ಲವಿ ನಾಯ್ಕ, ದೀಪಾ ನಾಯ್ಕ, ಜ್ಯೋತಿ ಯಳ್ಳೂರ, ಅಫ್ರೀನ್‌ಬಾನು ಅವಲಕ್ಕಿ, ಗದಿಗೆಮ್ಮ ಜಿ.ಎನ್‌., ಮಮತಾ ಬಸಾಪೂರ, ಸುಶ್ಮಿತಾ ಶೆಟ್ಟಿ, ಲತಾ ಹಂದ್ರಾಳ, ಕೆಂಚಮ್ಮ ಹುಲ್ಮನಿ, ಪ್ರವೀಣ ಕಟಗಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ