ಆ್ಯಪ್ನಗರ

ಕಬ್ಬಿಗೆ ಬೆಂಕಿ: ಸಚಿವ ಬಿಸಿಪಿ ಭೇಟಿ

ಕುಮಾರಪಟ್ಟಣ : ಕಬ್ಬಿನ ಬೆಳೆಗೆ ತಾವಾಗಿಯೇ ಬೆಂಕಿ ಇಟ್ಟ ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ರೈತ ಹೊನ್ನಪ್ಪ ಪುಟ್ಟಕ್ಕನವರ ಹೊಲಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಶನಿವಾರ ಭೇಟಿ ನೀಡಿ ಚರ್ಚಿಸಿದರು.

Vijaya Karnataka 15 Mar 2020, 5:00 am
ಕುಮಾರಪಟ್ಟಣ : ಕಬ್ಬಿನ ಬೆಳೆಗೆ ತಾವಾಗಿಯೇ ಬೆಂಕಿ ಇಟ್ಟ ರಾಣೇಬೆನ್ನೂರು ತಾಲೂಕಿನ ಮುದೇನೂರ ಗ್ರಾಮದ ರೈತ ಹೊನ್ನಪ್ಪ ಪುಟ್ಟಕ್ಕನವರ ಹೊಲಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ ಶನಿವಾರ ಭೇಟಿ ನೀಡಿ ಚರ್ಚಿಸಿದರು.
Vijaya Karnataka Web sugarcane fire minister bcp visits
ಕಬ್ಬಿಗೆ ಬೆಂಕಿ: ಸಚಿವ ಬಿಸಿಪಿ ಭೇಟಿ


''ಕಬ್ಬಿನ ಬೆಳೆಗೆ ತಾವಾಗಿಯೇ ಬೆಂಕಿ ಇಟ್ಟಿರುವ ಕಾರಣ ಪರಿಹಾರ ಕ್ರಮ ಕಷ್ಟ. ಈ ಕುರಿತು ಸಂಬಂಧಿಸಿದ ಕಂಪನಿಯವರ ಜೊತೆ ಮಾತನಾಡುತ್ತೇನೆ, ಆಕಸ್ಮಿಕ ಬೆಂಕಿ ತಗುಲಿದರೆ ತಕ್ಷಣ ಪರಿಹಾರ ಘೋಷಣೆ ಮಾಡಬಹುದು. ಆದರೆ ಇದು ಪೂರ್ವ ನಿಯೋಜಿತವಾಗಿದ್ದು, ಇನ್ನು ಮುಂದೆ ಇಂತಹ ಘಟನೆಗಳಿಗೆ ಅವಕಾಶ ಕಲ್ಪಿಸಬಾರದು'' ಎಂದು ತಿಳಿಸಿದರು.

ಕೃಷಿ ಸಚಿವನಾಗಿ ಅಧಿಕಾರ ಸ್ವೀಕರಿಸಿದ ಮೇಲೆ ವಿಶೇಷ ಪ್ಯಾಕೇಜ್‌ ಮೂಲಕ ಹೆಚ್ಚಿನ ಅನುದಾನ ತಂದಿದ್ದೇನೆ, ಸಮಸ್ತ ರೈತರು ಕೃಷಿ ಇಲಾಖೆಯಿಂದ ದೊರೆಯುವ ಸ್ಪಿಂಕ್ಲರ್‌ ಸೆಟ್‌ ಸೇರಿದಂತೆ ಹತ್ತು ಹಲವು ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು ಸಲಹೆ ನೀಡಿದರು.

ಅನ್ನದಾತರು ಕಚೇರಿಗಳಿಗೆ ಯೋಜನೆ ಸದುಪಯೋಗ ಪಡೆಯಲು ಪದೆ ಪದೇ ಅಲೆದಾಡಿಸದೇ ತಕ್ಷಣ ಕೆಲಸ ಮಾಡಿಕೊಡಬೇಕು. ಅಂದಿನ ಕೆಲಸಗಳನ್ನು ಅವತ್ತೇ ಮಾಡಿ ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕ ಅರುಣಕುಮಾರ ಗುತ್ತೂರ, ರೈತ ಮುಖಂಡ ರವೀಂದ್ರಗೌಡ ಪಾಟೀಲ, ರೈತ ಹೊನ್ನಪ್ಪ ಪುಟ್ಟಕ್ಕನವರ, ದಿಳ್ಳೆಪ್ಪ ಸತ್ಯಪ್ಪನವರ, ರುದ್ರಮುನಿ ರಾಮಕ್ಕನವರ, ಹನುಮಂತಪ್ಪ ಕೊಳ್ಳೇರ, ಈರಪ್ಪ ಪಕ್ಕೀರಣ್ಣನವರ, ಬಿ.ಐ.ಗಂಗನಗೌಡ್ರ, ಪ್ರಭು ಬಾವಿಕಟ್ಟಿ, ಬಸವರಾಜ ಬಾರ್ಕಿ, ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ