ಆ್ಯಪ್ನಗರ

ಸಾತ್ವಿಕ ಗುಣ ಬೆಳೆಯಲು ಬೇಸಿಗೆ ಶಿಬಿರ ಸಹಕಾರಿ

ಅಕ್ಕಿಆಲೂರು : ಮಕ್ಕಳ ಅಂತರಾಳದಲ್ಲಿ ಕೌಶಲ, ಶಿಸ್ತು, ಸ್ವಚ್ಛತೆ, ಸಂಯಮ, ಪರಿಸರ ನೈರ್ಮಲ್ಯ ಸೇರಿದಂತೆ ಇನ್ನಿತರ ಸಾತ್ವಿಕ ಗುಣ ಬೆಳೆಯಲು ಬೇಸಿಗೆ ಶಿಬಿರ ಸಹಕಾರಿ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಶ್ರೀನಿವಾಸ್‌ ಹೇಳಿದರು.

Vijaya Karnataka 28 May 2019, 5:00 am
ಅಕ್ಕಿಆಲೂರು : ಮಕ್ಕಳ ಅಂತರಾಳದಲ್ಲಿ ಕೌಶಲ, ಶಿಸ್ತು, ಸ್ವಚ್ಛತೆ, ಸಂಯಮ, ಪರಿಸರ ನೈರ್ಮಲ್ಯ ಸೇರಿದಂತೆ ಇನ್ನಿತರ ಸಾತ್ವಿಕ ಗುಣ ಬೆಳೆಯಲು ಬೇಸಿಗೆ ಶಿಬಿರ ಸಹಕಾರಿ ಎಂದು ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಶ್ರೀನಿವಾಸ್‌ ಹೇಳಿದರು.
Vijaya Karnataka Web HVR-27AKR2

ಅಕ್ಕಿಆಲೂರಿನಲ್ಲಿ ಬೇಸಿಗೆ ಶಿಬಿರ ಉದ್ಘಾಟಿಸಿ ಕ್ಷೇತ್ರ ಶಿಕ್ಷ ಣಾಧಿಕಾರಿ ಎಚ್‌.ಶ್ರೀನಿವಾಸ್‌ ಮಾತನಾಡಿದರು.


ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಹೆಣ್ಣುಮಕ್ಕಳ ಶಾಲೆ ಹಾಗೂ ಮಾದರಿ ಕೇಂದ್ರ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಭಾರತ ಸ್ಕೌಟ್ಸ್‌ ಗೈಡ್ಸ್‌ ತಾಲೂಕಾ ಸಂಸ್ಥೆ ಹಾಗೂ ಕ್ಷೇತ್ರ ಶಿಕ್ಷ ಣಾಧಿಕಾರಿಗಳ ಕಾರ್ಯಾಲಯದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬೇಸಿಗೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಮಕ್ಕಳಲ್ಲಿ ರಾಷ್ಟ್ರೀಯ ಮನೋಭಾವನೆ ಬೆಳೆಸುವ ಜೊತೆಗೆ ವ್ಯಕ್ತಿತ್ವ ವಿಕಸನಕ್ಕೆ ಭಾರತ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಹಕಾರಿಯಾಗಿದೆ. ಪ್ರಾಥಮಿಕ ಹಂತದಿಂದಲೇ ಮಕ್ಕಳಲ್ಲಿ ಮೌಲ್ಯ ಬಿತ್ತುವ ಅಗತ್ಯವಿದೆ ಎಂದು ಹೇಳಿದ ಅವರು, ನಮ್ಮ ಮಕ್ಕಳಿಂದು ಆಧುನಿಕ ಶಿಕ್ಷ ಣ ಪದ್ಧತಿಯಿಂದಾಗಿ ಬರೀ ಓದು-ಬರಹದಲ್ಲಿ ಕಳೆದು ಹೋಗುತ್ತಿದ್ದಾರೆ. ಪುಸ್ತಕದ ಆಚೆ-ಈಚೆ ಯೋಚಿಸಲೂ ಆಗದಂಥ ಸ್ಥಿತಿಯಲ್ಲಿ ನಮ್ಮ ಮಕ್ಕಳನ್ನು ಬೆಳೆಸುತ್ತಿದ್ದೇವೆ. ಸಾಮಾಜಿಕ ಆಗು-ಹೋಗುಗಳ ಬಗೆಗೆಯೂ ಮಕ್ಕಳಿಗೆ ತಿಳಿಹೇಳುವ ಪ್ರಯತ್ನ ನಡೆಯದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಸಂಸ್ಥೆಯ ತಾಲೂಕಾ ಕಾರ್ಯದರ್ಶಿ ಆರ್‌.ಪಿ.ಚಿಕ್ಕಳ್ಳಿ ಮಾತನಾಡಿ, ಮಕ್ಕಳು ಪುಸ್ತಕದ ಆಚೆ ಈಚೆಗೂ ಗಮನ ನೀಡುವಂತಾಗಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಸಾಮಾಜಿಕವಾಗಿಯೂ ತೊಡಗುವಂತಾಗಬೇಕಿದೆ ಎಂದು ಹೇಳಿದರು.

ಡಿಟಿಸಿ ಶೋಭಾ ಪಾಟೀಲ, ಮುಖ್ಯೋಪಾಧ್ಯಾಯರಾದ ಜಿ.ಟಿ.ಹಂಚಿನಮನಿ, ಎ.ಬಿ.ಶೇಖಬಾಯಿ, ಎನ್‌.ಎಸ್‌.ಮುಶೆಪ್ಪನವರ, ಬಿ.ವೈ.ಭಜಂತ್ರಿ ಇದ್ದರು. ತಾಲೂಕಿನ ವಿವಿಧ ಶಾಲೆಗಳಿಂದ 15 ಸ್ಕೌಟ್ಸ್‌, 25 ಗೈಡ್ಸ್‌ ಮಕ್ಕಳು, ಶಿಕ್ಷ ಕರು ಭಾಗವಹಿಸಿದ್ದರು. ರವಿ ಅಂತರವಳ್ಳಿ ನಿರೂಪಿಸಿದರು. ಬಿ.ಎಂ.ದಿಡಗೂರ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ