ಆ್ಯಪ್ನಗರ

ಪಾಕ್‌ ಸೇನೆ ಬೆಂಬಲಿಸಿದ ಯುವಕನ ಸೆರೆ

15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ತನ್ನ ಅಕೌಂಟ್‌ ಮೂಲಕ ಪಾಕ್‌ ಯೋಧನ ಪೋಟೊಗೆ ಎಡಿಟ್‌ ಮಾಡಿ, ಪಾಕಿಸ್ತಾನ ಧ್ವಜ ಮತ್ತು 'ಸಪೋರ್ಟ್‌ ದಿ ಪಾಕಿಸ್ತಾನ ಆರ್ಮಿ' ಎಂದು ಬರೆದುಕೊಂಡಿದ್ದ.

Vijaya Karnataka 17 Mar 2019, 7:29 am
ಹಾನಗಲ್ಲ: ಪಾಕ್‌ ಸೇನೆಯನ್ನು ಬೆಂಬಲಿಸಿ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಹಾಕಿದ್ದ ತಾಲೂಕಿನ ಶಿವಪೂರ ಗ್ರಾಮದ ಆಟೊ ಚಾಲಕ ಮೊಹಮದ್‌ ಸಾಧಿಕ್‌ ಮೊಹಮದ್‌ ಹನೀಫ್‌ ವಡಗೇರಿ (26) ಎಂಬುವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
Vijaya Karnataka Web pak


15 ದಿನಗಳ ಹಿಂದೆ ಫೇಸ್‌ಬುಕ್‌ನಲ್ಲಿ ತನ್ನ ಅಕೌಂಟ್‌ ಮೂಲಕ ಪಾಕ್‌ ಯೋಧನ ಪೋಟೊಗೆ ಎಡಿಟ್‌ ಮಾಡಿ, ಪಾಕಿಸ್ತಾನ ಧ್ವಜ ಮತ್ತು 'ಸಪೋರ್ಟ್‌ ದಿ ಪಾಕಿಸ್ತಾನ ಆರ್ಮಿ' ಎಂದು ಬರೆದುಕೊಂಡಿದ್ದ. ಪೊಲೀಸ್‌ ಇಲಾಖೆಯ ಗುಪ್ತಚರ ವಿಭಾಗವು ಈ ಪೋಸ್ಟ್‌ ಜಾಡು ಹಿಡಿದು ಶುಕ್ರವಾರ ರಾತ್ರಿ ಸಾಧಿಕ್‌ ವಡಗೇರಿಯನ್ನು ಬಂಧಿಸಿ, ಶನಿವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಐಪಿಸಿ ಕಲಂ 142(ಎ) ಮತ್ತು 153 ಅಡಿ ಸುಮೊಟೊ ಪ್ರಕರಣ ದಾಖಲಿಸಲಾಗಿದೆ ಎಂದು ಹಾನಗಲ್ಲ ಪಿಎಸ್‌ಐ ವಿರೇಶ ತಿಳಿಸಿದ್ದಾರೆ.

ಏತನ್ಮಧ್ಯೆ, ವಡಗೇರಿ ಅವರನ್ನು ಗಡಿಪಾರು ಮಾಡಲು ಒತ್ತಾಯಿಸಿ ಸ್ಥಳೀಯ ವಕೀಲರ ಸಂಘದಿಂದ ತಹಸೀಲ್ದಾರಗೆ ಶನಿವಾರ ಮನವಿ ಪತ್ರ ಸಲ್ಲಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ