ಆ್ಯಪ್ನಗರ

ರಿಯಾಯಿತಿ ಬಿತ್ತನೆ ಬೀಜ ಲಾಭ ಪಡೆಯಿರಿ

ಸವಣೂರು: ಮುಂಗಾರು ಬಿತ್ತನೆಗಾಗಿ ಸರಕಾರ ರಿಯಾಯಿತಿ ದರದಲ್ಲಿಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ನಿಂಗಪ್ಪ ಎರೇಶೀಮಿ ಹೇಳಿದರು.

Vijaya Karnataka 26 May 2020, 5:00 am
ಸವಣೂರು: ಮುಂಗಾರು ಬಿತ್ತನೆಗಾಗಿ ಸರಕಾರ ರಿಯಾಯಿತಿ ದರದಲ್ಲಿಬಿತ್ತನೆ ಬೀಜಗಳನ್ನು ನೀಡುತ್ತಿದ್ದು, ಪ್ರತಿಯೊಬ್ಬ ರೈತರು ಪಡೆದುಕೊಳ್ಳಬೇಕು ಎಂದು ಗ್ರಾ.ಪಂ. ಉಪಾಧ್ಯಕ್ಷ ನಿಂಗಪ್ಪ ಎರೇಶೀಮಿ ಹೇಳಿದರು.
Vijaya Karnataka Web take advantage of discount sowing seed
ರಿಯಾಯಿತಿ ಬಿತ್ತನೆ ಬೀಜ ಲಾಭ ಪಡೆಯಿರಿ


ಸವಣೂರು ತಾಲೂಕಿನ ಹುರಳಿಕುಪ್ಪಿ ಗ್ರಾಮದ ರೈತ ಸಂಪರ್ಕ ಕೇಂದ್ರದಲ್ಲಿರೈತರಿಗೆ ಬಿತ್ತನೆ ಬೀಜಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ಮುಂಗಾರು ಪೂರ್ವದಲ್ಲಿಯೆ ಮಳೆ ಉತ್ತಮವಾಗಿ ಆಗುತ್ತಿದ್ದು ರೈತರು ಈಗಾಗಲೇ ಬಿತ್ತನೆಗೆ ಎಲ್ಲಸಿದ್ಧತೆ ಮಾಡಿಕೊಂಡಿದ್ದಾರೆ. ಇಲಾಖೆ ಅಧಿಕಾರಿಗಳು ಸಮರ್ಪಕವಾಗಿ ಎಲ್ಲರೈತರಿಗೆ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಕ್ರಿಮಿನಾಶಕಗಳು ಸಿಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.

ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ಬೊಜರಾಜ ಲಮಾಣಿ ಮಾತನಾಡಿ, ರೈತರು ಸಾಂಕ್ರಾಮಿಕ ರೋಗದ ಹತೋಟಿಗೆ ಅಂತರವನ್ನು ಕಾಯ್ದುಕೊಂಡು ಆರೋಗ್ಯ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

ಕೃಷಿ ಇಲಾಖೆ ಅಧಿಕಾರಿ ಹೆಚ್‌.ಎಸ್‌.ಪೂಜಾರ ಮಾತನಾಡಿ, ಕೃಷಿಗೆ ಸಂಬಂಧಿಸಿದ ಎಲ್ಲಪರಿಕರಗಳನ್ನು ಸಮರ್ಪಕವಾಗಿ ಶೇಖರಣೆ ಮಾಡಲಾಗಿದೆ ಎಂದರು. ಕಾರ್ಯಕ್ರಮದಲ್ಲಿನಾಗಪ್ಪ ತಿಪ್ಪಕ್ಕನವರ, ಶಿವಾನಂದ ಎಲಿಗಾರ, ಮಂಜುನಾಥ ಅಡಿವೆಪ್ಪನವರ, ಎಸ್‌.ಎನ್‌.ತಿಪ್ಪಕ್ಕನವರ, ಸುಭಾಸ ಮಜ್ಜಗಿ, ರವಿ ಮೂಲಿಮನಿ, ರವಿ ಹರಿಜನ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ