ಆ್ಯಪ್ನಗರ

ಹ.ಮು.ತಳವಾರರಿಗೆ ಸನ್ಮಾನ

ಹಿರೇಕೆರೂರು : ರಟ್ಟೀಹಳ್ಳಿ ಪಟ್ಟಣದಲ್ಲಿ ಫೆ.2ರಂದು ಜರುಗಲಿರುವ ರಟ್ಟೀಹಳ್ಳಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಗಿ ಆಯ್ಕೆಯಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹ.ಮು.ತಳವಾರ ಅವರನ್ನು ತಿಪ್ಪಾಯಿಕೊಪ್ಪ ಗ್ರಾಮದ ಅವರ ನಿವಾಸದಲ್ಲಿ ಕನ್ನಡಾಭಿಮಾನಿಗಳು ಸನ್ಮಾನಿಸಿದರು.

Vijaya Karnataka 25 Jan 2019, 5:00 am
ಹಿರೇಕೆರೂರು : ರಟ್ಟೀಹಳ್ಳಿ ಪಟ್ಟಣದಲ್ಲಿ ಫೆ.2ರಂದು ಜರುಗಲಿರುವ ರಟ್ಟೀಹಳ್ಳಿ ತಾಲೂಕು ಪ್ರಥಮ ಸಾಹಿತ್ಯ ಸಮ್ಮೇಳನಾಧ್ಯಕ್ಷ ರಾಗಿ ಆಯ್ಕೆಯಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ, ಹಿರಿಯ ಸಾಹಿತಿ ಹ.ಮು.ತಳವಾರ ಅವರನ್ನು ತಿಪ್ಪಾಯಿಕೊಪ್ಪ ಗ್ರಾಮದ ಅವರ ನಿವಾಸದಲ್ಲಿ ಕನ್ನಡಾಭಿಮಾನಿಗಳು ಸನ್ಮಾನಿಸಿದರು.
Vijaya Karnataka Web talavar honorable
ಹ.ಮು.ತಳವಾರರಿಗೆ ಸನ್ಮಾನ

ಹಿರೇಮೊರಬ ಗ್ರಾಪಂ ಮಾಜಿ ಅಧ್ಯಕ್ಷ ಹಾಲನಗೌಡ ಮುದಿಗೌಡ್ರ ಮಾತನಾಡಿ, ಹ.ಮು.ತಳವಾರ ಸರಕಾರಿ ಶಾಲಾ ಶಿಕ್ಷ ಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದಾರೆ. ಶಿಕ್ಷ ಕ ಸೇವೆಯ ಜತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಕೆಲಸ ಕಾರ್ಯ ಮಾಡುವ ಮೂಲಕ ಹಲವಾರು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಸೇವೆ ಪರಿಗಣಿಸಿ ಅವರಿಗೆ ರಾಷ್ಟ್ರಪ್ರಶಸ್ತಿ, ಕರ್ನಾಟಕ ನಾಟಕ ಅಕಾಡೆಮಿ, ಜಿಲ್ಲಾ ಮಕ್ಕಳ ಸಾಹಿತ್ಯ ಪ್ರಶಸ್ತಿ, ಆಶುಭಾಷಣ ರಾಜ್ಯ ಪ್ರಶಸ್ತಿ, ಹಾಗೂ ಅತ್ಯುತ್ತಮ ಶಿಕ್ಷ ಕ ಪ್ರಶಸ್ತಿ ಹೀಗೆ ಹಲವಾರು ಪ್ರಶಸ್ತಿ ಪಡೆದಿದ್ದಾರೆ. ತಾಲೂಕು ಸಾದರ ಸಮಾಜದ ಉಪಾಧ್ಯಕ್ಷ ಲಿಂಗನಗೌಡ ಹಳ್ಳಪ್ಪಗೌಡ್ರ, ಕೋಶಾಧ್ಯಕ್ಷ ಶಿವನಗೌಡ ರೋತಿ, ಹನುಮಂತಪ್ಪ ಗಿರಿಯಣ್ಣನವರ, ಶಶಿಕುಮಾರ ಬನ್ನೀಹಟ್ಟಿ, ಮಂಜುನಾಥ ತಳವಾರ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ