ಆ್ಯಪ್ನಗರ

ಶಿಕ್ಷಕರ ಸಮಾಲೋಚನಾ ಸಭೆ

ಕುಮಾರಪಟ್ಟಣ : ಐರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೆಡ್ಲೇರಿ ವಲಯದ ಪ್ರಾಥಮಿಕ ಶಾಲಾ ಶಿಕ್ಷ ಕರ ಮೂರು ದಿನಗಳ ಸಮಾಲೋಚನಾ ಸಭೆಯನ್ನು ರಾಣೆಬೆನ್ನೂರು ಕ್ಷೇತ್ರ ಸಮನ್ವಯಾಧಿಕಾರಿ ಸೀಮಿಕೇರಿ ಉದ್ಘಾಟಿಸಿದರು.

Vijaya Karnataka 17 Jul 2019, 5:00 am
ಕುಮಾರಪಟ್ಟಣ : ಐರಣಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಮೆಡ್ಲೇರಿ ವಲಯದ ಪ್ರಾಥಮಿಕ ಶಾಲಾ ಶಿಕ್ಷ ಕರ ಮೂರು ದಿನಗಳ ಸಮಾಲೋಚನಾ ಸಭೆಯನ್ನು ರಾಣೆಬೆನ್ನೂರು ಕ್ಷೇತ್ರ ಸಮನ್ವಯಾಧಿಕಾರಿ ಸೀಮಿಕೇರಿ ಉದ್ಘಾಟಿಸಿದರು.
Vijaya Karnataka Web teacher consultation meeting
ಶಿಕ್ಷಕರ ಸಮಾಲೋಚನಾ ಸಭೆ


ಬಳಿಕ ಅವರು ಮಾತನಾಡಿ, ಶಿಕ್ಷ ಕರು ನಿತ್ಯ ಅಧ್ಯಯನದಲ್ಲಿ ತೊಡಗಿಸಿಕೊಂಡು ಗುರಿ ತಲುಪಬೇಕು. ಟಿಪ್ಪಣಿ, ಅಗತ್ಯ ಬೋಧನಾ ಸಲಕರಣಿಗಳೊಂದಿಗೆ ತರಗತಿ ಕೋಣೆಗೆ ಹಸನ್ಮುಖಿಯಾಗಿ ಮಕ್ಕಳ ಎದುರಿಗೆ ಕಾಣಿಸಿಕೊಂಡು ಅವರನ್ನು ತಮ್ಮತ್ತ ಸೂಜಿಗಲ್ಲಿನಂತೆ ಸೆಳೆಯಬೇಕು ಎಂದು ಹೇಳಿದರು.

ಸಮಾಲೋಚನಾ ಕೇಂದ್ರಕ್ಕೆ ದಿಢೀರ್‌ ಭೇಟಿ ನೀಡಿದ ಕ್ಷೇತ್ರ ಶಿಕ್ಷ ಣಾಧಿಕಾರಿ ಎನ್‌.ಶ್ರೀಧರ್‌ ಮಾತನಾಡಿ, ಕತ್ತಲೆಯನ್ನು ತೊಲಗಿಸುವ ದೀಪಕ್ಕಿರುವ ಶಕ್ತಿ ಶಿಕ್ಷ ಕರಿಗೆ ಇದೆ. ಅವರಿವರನ್ನು ದೂರದೆ ವಿಷಯ ಪ್ರಬುದ್ಧತೆ ಹೊಂದಿ ಸರಳ ಮಾದರಿಯಲ್ಲಿ ಆಕರ್ಷಕ ಬೋಧನಾ ಶೈಲಿಯನ್ನು ಅಳವಡಿಸಿಕೊಂಡು ಮಕ್ಕಳಿಗೆ ಮನ ಮುಟ್ಟುವಂತೆ ಬೋಧಿಸಬೇಕು ಎಂದು ಸಲಹೆ ನೀಡಿದರು.

ಈ ವೇಳೆ ಸಂಪನ್ಮೂಲ ಶಿಕ್ಷ ಕರ ಮಾರ್ಗದರ್ಶನದಲ್ಲಿ ನಲಿಕಲಿ ಸೇರಿದಂತೆ ಪ್ರಾಥಮಿಕ ಮತ್ತು ಉನ್ನತೀಕರಿಸಿದ ಶಾಲಾ ಶಿಕ್ಷ ಕರಿಗೆ ವಾರ್ಷಿಕ ಕ್ರಿಯಾ ಯೋಜನೆ, ಮಾದರಿ ಪಾಠ ಟಿಪ್ಪಣಿ, ಮೌಲ್ಯ ಮಾಪನ ವಿಧಾನಗಳನ್ನು ಬೋಧನಾ ಪ್ರಕ್ರಿಯೆಯಲ್ಲಿ ಅನುಷ್ಠಾನಗೊಳಿಸುವ ಕುರಿತು ಮಾಹಿತಿ ಒದಗಿಸಲಾಯಿತು.

ಹಿರೇಬಿದರಿ ಸಿಆರ್‌ಪಿ ಇಸ್ಮಾಯಿಲ್‌ ಐರಣಿ, ಮಂಜುಳಾ ತಡಕನಹಳ್ಳಿ, ಎನ್‌.ಎನ್‌.ಅಣ್ಣೇರ, ಡಿ.ಈರಣ್ಣ, ಮುಖ್ಯ ಶಿಕ್ಷ ಕರು ಹಾಗೂ ಶಿಕ್ಷ ಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ