ಆ್ಯಪ್ನಗರ

ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿ ಬೋಧನೆ

ಹಿರೇಕೆರೂರ :ಪಟ್ಟಣದ ಸಿಇಎಸ್‌ ಸಂಸ್ಥೆಯ ಬಿ.ಆರ್‌.ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿಯನ್ನು ಪ್ರಾಚಾರ್ಯ ಪ್ರೊ.ಎಸ್‌.ಬಿ.ಚನ್ನಗೌಡರ್‌ ವಿದ್ಯಾರ್ಥಿಗಳಿಗೆ ಬೋಧಿಸಿದರು.

Vijaya Karnataka 11 Apr 2018, 5:00 am
ಹಿರೇಕೆರೂರ :ಪಟ್ಟಣದ ಸಿಇಎಸ್‌ ಸಂಸ್ಥೆಯ ಬಿ.ಆರ್‌.ತಂಬಾಕದ ಪ್ರಥಮ ದರ್ಜೆ ಮಹಾವಿದ್ಯಾಲಯದ ಆವರಣದಲ್ಲಿ ಮಂಗಳವಾರ ರಾಷ್ಟ್ರೀಯ ಸೇವಾ ಘಟಕದ ಆಶ್ರಯದಲ್ಲಿ ಏರ್ಪಡಿಸಿದ್ದ ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿಯನ್ನು ಪ್ರಾಚಾರ್ಯ ಪ್ರೊ.ಎಸ್‌.ಬಿ.ಚನ್ನಗೌಡರ್‌ ವಿದ್ಯಾರ್ಥಿಗಳಿಗೆ ಬೋಧಿಸಿದರು.
Vijaya Karnataka Web teaching mandatory voting procedure
ಕಡ್ಡಾಯ ಮತದಾನ ಪ್ರತಿಜ್ಞಾ ವಿಧಿ ಬೋಧನೆ


ಬಳಿಕ ಮಾತನಾಡಿ, ತಾಲೂಕಿನಾದ್ಯಂತ ಮತದಾನ ಹಕ್ಕು ಪಡೆದ ಪ್ರತಿ ಮತದಾರರು ಕಡ್ಡಾಯ ಮತದಾನ ಮಾಡುವ ಮೂಲಕ ತಾಲೂಕಿನಲ್ಲಿ ನೂರರಷ್ಟು ಮತದಾನವಾಗುವ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸಬೇಕು ಎಂದು ಹೇಳಿದರು. ಎಲ್ಲ ಯುವಕರು ಕೇವಲ ಮತದಾನ ಮಾಡುವುದರ ಜತೆಗೆ ಇತರರಿಗೂ ಮತದಾನ ಮಾಡಲು ಪ್ರೇರಣೆ ನೀಡಬೇಕು. ಅತೀ ಹೆಚ್ಚು ಮತದಾನವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ಮಾಡಿದರು. ನಾವು ಅತೀ ಹೆಚ್ಚು ಮತದಾನ ಮಾಡುವುದರಿಂದ ಸದೃಢ ಸರಕಾರ ನಿರ್ಮಾಣವಾಗುವುದರ ಜತೆ ಉತ್ತಮ ಆಡಳಿತ ನಿರ್ವಹಣೆ ನಿರೀಕ್ಷಿಸಬಹುದು ಎಂದು ಹೇಳಿದರು.

ಎನ್‌ಎಸ್‌ಎಸ್‌ ಸಂಯೋಜನಾಧಿಕಾರಿ ಎಚ್‌.ಪಿ.ನಾಗರಾಜ, ಉಪನ್ಯಾಸಕ ಸಿ.ಆರ್‌.ದೂದೀಹಳ್ಳಿ, ಪ್ರದೀಪ ಕೊರಡೆಕರ, ಪ್ರವೀಣ ಕುರವತ್ತೇರ, ಎಸ್‌.ಎಸ್‌.ಹುಲ್ಲಿನಕೊಪ್ಪ, ಪ್ರಶಾಂತ ಮರಿಗೊಳಪ್ಪನರ, ಪಿ.ಎಚ್‌.ಗೋಪಾಕಳ್ಳಿ, ರೇಖಾ ಮರಕಳ್ಳಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ