ಆ್ಯಪ್ನಗರ

ಆತ್ಮವಿಶ್ವಾಸ ಹೆಚ್ಚಿಸಿದ ಪರೀಕ್ಷೆ

ಹಾವೇರಿ : ಒಂದು ಕಡೆ ಆತಂಕ, ಇನ್ನೊಂದು ಕಡೆ ಶಿಕ್ಷಕರ ಪ್ರೋತ್ಸಾಹದ ನಡುವೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಗುರುವಾರ ಪರೀಕ್ಷೆ ಬರೆದರು.

Vijaya Karnataka 26 Jun 2020, 5:00 am
ಹಾವೇರಿ : ಒಂದು ಕಡೆ ಆತಂಕ, ಇನ್ನೊಂದು ಕಡೆ ಶಿಕ್ಷಕರ ಪ್ರೋತ್ಸಾಹದ ನಡುವೆ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಗುರುವಾರ ಪರೀಕ್ಷೆ ಬರೆದರು.
Vijaya Karnataka Web test of confidence increased
ಆತ್ಮವಿಶ್ವಾಸ ಹೆಚ್ಚಿಸಿದ ಪರೀಕ್ಷೆ


ಜಿಲ್ಲಾದ್ಯಂತ 75 ಪರೀಕ್ಷಾ ಕೇಂದ್ರಗಳಲ್ಲಿಸುಗಮವಾಗಿ ಪರೀಕ್ಷೆ ನಡೆದವು. ವಿದ್ಯಾರ್ಥಿಗಳು ಬೆಳಗ್ಗೆ 8-30ಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಸ್ಯಾನಿಟೈಸರ್‌, ಮಾಸ್ಕ್‌ ಪಡೆದು ಥರ್ಮಲ್‌ ಸ್ಕ್ಯಾ‌ನಿಂಗ್‌ ಮೂಲಕ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಪರೀಕ್ಷಾ ಕೊಠಡಿಗೆ ತೆರಳಿದರು.

ಉತ್ಸಾಹ ಹುಮ್ಮಸ್ಸು: ಸಾರ್ವಜನಿಕ ಶಿಕ್ಷಣ ಇಲಾಖೆ ಪರೀಕ್ಷಾ ಕೇಂದ್ರಗಳನ್ನು ವಿಭಿನ್ನವಾಗಿ ಅಲಂಕರಿಸಿ ವಿದ್ಯಾರ್ಥಿಗಳಲ್ಲಿಇದ್ದಂತ ಆತಂಕ ದೂರ ಮಾಡಿದೆ. ವಿದ್ಯಾರ್ಥಿಗಳನ್ನು ಆಯಾ ಶಾಲೆಯ ಶಿಕ್ಷಕರು ಸಾಮಾಜಿಕ ಅಂತರ ಕಾಪಾಡಿಕೊಂಡು ಪರೀಕ್ಷಾ ಕೇಂದ್ರಕ್ಕೆ ಕರೆತಂದು ಕಟ್ಟುನಿಟ್ಟಾಗಿ ಪರೀಕ್ಷೆ ಬರೆಯಿಸುವಲ್ಲಿಯಶಸ್ಸಿಯಾದರು.

ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕೆ ಸಾರಿಗೆ ವ್ಯವಸ್ಥೆ ಮಾಡಲಾಗಿತ್ತು. ಕೆಲವರು ಖಾಸಗಿ ವಾಹನದಲ್ಲಿ, ಖಾಸಗಿ ಶಾಲೆ ವಿದ್ಯಾರ್ಥಿಗಳು ಅದೇ ಶಾಲೆಯ ವಾಹನದಲ್ಲಿಬಂದು ಪರೀಕ್ಷೆ ಬರೆದರು.

ಜ್ವರ ತಪಾಸಣೆ: ಕೋವಿಡ್‌ ಮಾರ್ಗಸೂಚಿಯಂತೆ ಎಲ್ಲವಿದ್ಯಾರ್ಥಿಗಳಿಗೂ ಪರೀಕ್ಷಾ ಕೇಂದ್ರದಲ್ಲಿಜ್ವರ ತಪಾಸಣೆ ನಡೆಸಿ ಸ್ಯಾನಿಟೈಸರ್‌ ನೀಡಿ, ಮಾಸ್ಕ್‌ ಧರಿಸಿ ಕೊಠಡಿಯೊಳಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಕೇಂದ್ರದ ಸುತ್ತಲೂ 200 ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿತ್ತು. ಪರೀಕ್ಷೆ ಪಾರದರ್ಶಕ, ನಕಲು ಮುಕ್ತ ನಡೆಸಲು ಸೂಕ್ತ ಬದೋಬಸ್‌್ತ ಮಾಡಲಾಗಿತ್ತು.

ಪರೀಕ್ಷೆ ಕೇಂದ್ರದ ಬಳಿ ಪೊಲೀಸ್‌, ನೋಡಲ್‌ ಅಧಿಕಾರಿಗಳು, ವೈದ್ಯರು, ನರ್ಸ್‌, ಆಶಾ ಕಾರ್ಯಕರ್ತೆಯರು, ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಿಬ್ಬಂದಿ ಕಾರ್ಯನಿರ್ವಹಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ