ಆ್ಯಪ್ನಗರ

ಎಪಿಎಂಸಿ ಕಾಯಿದೆ ತಿದ್ದುಪಡಿ ಮಾರಕ

ರಾಣೇಬೆನ್ನೂರ: ಯಾವುದೇ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ಮಾಡದೇ ರಾಜ್ಯ ಸರಕಾರ ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡಿರುವುದು ರೈತರು, ವರ್ತಕರು ಮತ್ತು ಎಪಿಎಂಸಿ ಆದಾಯಕ್ಕೆ ಮಾರಕವಾಗಿದೆ ಎಂದು ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಡಿ.ಆರ್‌.ಪಾಟೀಲ ಹೇಳಿದರು.

Vijaya Karnataka 16 May 2020, 5:00 am
ರಾಣೇಬೆನ್ನೂರ: ಯಾವುದೇ ಸಾಧಕ ಬಾಧಕಗಳ ಬಗ್ಗೆ ಸಮಾಲೋಚನೆ ಮಾಡದೇ ರಾಜ್ಯ ಸರಕಾರ ಎಪಿಎಂಸಿ ಕಾಯಿದೆ ತಿದ್ದುಪಡಿ ಮಾಡಿರುವುದು ರೈತರು, ವರ್ತಕರು ಮತ್ತು ಎಪಿಎಂಸಿ ಆದಾಯಕ್ಕೆ ಮಾರಕವಾಗಿದೆ ಎಂದು ರಾಜ್ಯ ಕೃಷಿ ಉತ್ಪನ್ನ ಮಾರಾಟ ಮಂಡಳಿ ಮಾಜಿ ಅಧ್ಯಕ್ಷ ಡಿ.ಆರ್‌.ಪಾಟೀಲ ಹೇಳಿದರು.
Vijaya Karnataka Web the amendment to the apmc act is fatal
ಎಪಿಎಂಸಿ ಕಾಯಿದೆ ತಿದ್ದುಪಡಿ ಮಾರಕ


ನಗರದಲ್ಲಿಗುರುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಾಯಿದೆ ತಿದ್ದುಪಡಿ ವಿರುದ್ಧ ಎಲ್ಲರೂ ಒಗ್ಗಟ್ಟಿನಿಂದ ಪಕ್ಷಾತೀತವಾಗಿ ಹೋರಾಟ ಮಾಡುತ್ತೇವೆ. ರಾಜ್ಯ ಸರಕಾರ ಬಹುರಾಷ್ಟ್ರೀಯ ಕಂಪನಿಗಳಿಗೆ ಅನುಕೂಲವಾಗುವ ಕಾಯಿದೆ ಜಾರಿಗೆ ತರುತ್ತಿದೆ. ಇದರಿಂದ ಮುಂದಿನ ದಿನಗಳಲ್ಲಿಸರಕಾರವೇ ಅವರ ಕಪಿಮುಷ್ಠಿಗೆ ಸಿಕ್ಕಿಹಾಕಿಕೊಳ್ಳುತ್ತದೆ. ಆದ್ದರಿಂದ ಈ ಕಾಯಿದೆ ತಿದ್ದುಪಡಿ ತರುವುದಕ್ಕೆ ಮುಂಚೆ ರಾಜ್ಯದ ಸಚಿವರು, ಜನಪತ್ರಿನಿಧಿಗಳ, ವರ್ತಕರ ಜೊತೆ ಚರ್ಚೆಸಿ ತೀರ್ಮಾನ ತೆಗೆದುಕೊಳ್ಳಬೇಕು. ಆಧಿವೇಶನದಲ್ಲಿಚರ್ಚಿಸಿ ಆದೇಶ ಜಾರಿಗೆಗೊಳಿಸಬೇಕು. ಕೂಡಲೇ ಎಚ್ಚೆತ್ತು ತಿದ್ದುಪಡಿ ವಾಪಸ್‌ ಪಡೆಯಬೇಕು ಎಂದರು.

ಸ್ಥಳೀಯ ಎಪಿಎಂಸಿ ಅಧ್ಯಕ್ಷ ಚಂದ್ರಶೇಖರ ಕಳಸದ, ಉಪಾಧ್ಯಕ್ಷೆ ಕಮಲೆಮ್ಮ ಪಾರ್ವತೇರ, ವಿ.ಪಿ.ಲಿಂಗನಗೌಡ್ರ, ಪ್ರೇಮಾ ಪಾಟೀಲ, ಕೆ.ಎಸ್‌.ನಾಯ್ಕರ, ಸಿದ್ದಪ್ಪ ಕರೇಗೌಡ, ರಮೇಶ ಚಾವಡಿ, ಸದಾಶಿವ ಉಪ್ಪಿನ, ಜಟ್ಟೆಪ್ಪ ಕರೇಗೌಡ್ರ, ಗದಿಗೆಪ್ಪ ಹೊಟ್ಟಿಗೌಡ್ರ ಮತ್ತಿತರು ಸುದ್ದಿಗೋಷ್ಠಿಯಲ್ಲಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ