ಆ್ಯಪ್ನಗರ

ಆತ್ಮಜ್ಞಾನವಿಲ್ಲದ ಜೀವನ ಮಸಣಕ್ಕೆ ಸಮಾನ

ಹಂಸಭಾವಿ: ಆತ್ಮಜ್ಞಾನವಿಲ್ಲದ ಜೀವನ ಮಸಣಕ್ಕೆ ಸಮಾನವೆಂದು ಸ್ಥಳಿಯ ಶಿವಯೋಗೀಶ್ವರದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಅವರು ಶಿವಯೋಗೀಶ್ವರ ಆಶÜ್ರಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್‌ ಹಂಸಭಾವಿ ಘಟಕ ಮತ್ತು ಕದಳಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಸಿಕ ಶಿವಾನುಭವ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.

Vijaya Karnataka 11 Jul 2019, 5:00 am
ಹಂಸಭಾವಿ: ಆತ್ಮಜ್ಞಾನವಿಲ್ಲದ ಜೀವನ ಮಸಣಕ್ಕೆ ಸಮಾನವೆಂದು ಸ್ಥಳಿಯ ಶಿವಯೋಗೀಶ್ವರದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮೀಜಿ ಹೇಳಿದರು. ಅವರು ಶಿವಯೋಗೀಶ್ವರ ಆಶಮದಲ್ಲಿ ಅಖಿಲ ಭಾರತ ಸಾಹಿತ್ಯ ಪರಿಷತ್‌ ಹಂಸಭಾವಿ ಘಟಕ ಮತ್ತು ಕದಳಿ ವೇದಿಕೆಯ ಸಂಯುಕ್ತ ಆಶ್ರಯದಲ್ಲಿ ನಡೆದ ಮಾಸಿಕ ಶಿವಾನುಭವ ಚಿಂತನಾಗೋಷ್ಠಿಯಲ್ಲಿ ಮಾತನಾಡಿದರು.
Vijaya Karnataka Web the equivalent of a lifeless mind
ಆತ್ಮಜ್ಞಾನವಿಲ್ಲದ ಜೀವನ ಮಸಣಕ್ಕೆ ಸಮಾನ


ದೇವರ ಅನುಗ್ರಹವಿಲ್ಲದೆ ಗಳಿಸಿದ ಸಿರಿ, ಸಂಪತ್ತು, ಅಧಿಕಾರ ಇವು ಬಹಳ ದಿನ ಉಳಿಯುವುದಿಲ್ಲ. ದೇವರ ಕೃಪೆಯಿಂದ ಪ್ರಾಪ್ತವಾದದ್ದು ಸದಾ ನಮ್ಮೊಂದಿಗೆ ಇರುತ್ತದೆ. ಸದಾ ನಮ್ಮೊಂದಿಗೆ ಇರದ, ಬರದ ವಸ್ತುವಿಗಾಗಿ ಪರಿತಪಿಸದೇ ಆತ್ಮಜ್ಞಾನ ಪಡೆದು ಸಾರ್ಥಕ ಜೀವನ ನಡೆಸಬೇಕೆಂದು ಹೇಳಿದರು.

ತಾಲೂಕಾ ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಜಿ.ಆರ್‌.ಕೆಂಚಕ್ಕನವರ, ಕದಳಿ ವೇದಿಕೆಯ ಉಪಾಧÜ್ಯಕ್ಷೆ ನಿರ್ಮಲಾ ಅಕ್ಕಿ ವಚನ ವಿಶ್ಲೇಷಣೆ ಮಾಡಿದರು. ಶರಣ ಸಾಹಿತ್ಯ ಪರಿಷತ್‌ ಹಂಸಭಾವಿ ಘಟಕದ ಅಧ್ಯಕ್ಷೆ ಶಾಂಭವೀತಾಯಿ ಕೆರೂಡಿ ಅಧ್ಯಕ್ಷ ತೆ ವಹಿಸಿದ್ದರು.

ಶಾರದಮ್ಮ,ಶಾಂತಾ ಕೊಳ್ಳಿ,ಗೀತಾ ದೆಸಾಯಿ,ವಚನ ಗಾಯನ ಮಾಡಿದರು. ದಾನೇಶ್ವರಿ ಭಜನಾ ಸಂಘದವರು ಪ್ರಾರ್ಥಿಸಿದರು. ಲತಾ ಅಕ್ಕಿ ಸ್ವಾಗತಿಸಿದರು, ಶೋಭಾ ಎಲಿ ವಂದಿಸಿದರು, ನಿರ್ಮಲಾ ಪಾಟೀಲ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ