ಆ್ಯಪ್ನಗರ

ವೈಚಾರಿಕ ಸಂಘರ್ಷ ಆರಂಭಗೊಳ್ಳದಿದ್ದರೆ ರೈತನಿಗೆ ಭವಿಷ್ಯವಿಲ್ಲ

ಅಕ್ಕಿಆಲೂರು: ವೈಚಾರಿಕ ಸಂಘರ್ಷ ಆರಂಭಗೊಳ್ಳದಿದ್ದರೆ ರೈತನಿಗೆ ಭವಿಷ್ಯವಿಲ್ಲ. ರಾಜಕೀಯ ಪ್ರಜ್ಞೆ ರೈತರಲ್ಲಿ ಮೂಡದಿದ್ದರೆ ಈ ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಅಭಿಪ್ರಾಯಪಟ್ಟರು.

Vijaya Karnataka 15 Dec 2019, 5:00 am
ಅಕ್ಕಿಆಲೂರು: ವೈಚಾರಿಕ ಸಂಘರ್ಷ ಆರಂಭಗೊಳ್ಳದಿದ್ದರೆ ರೈತನಿಗೆ ಭವಿಷ್ಯವಿಲ್ಲ. ರಾಜಕೀಯ ಪ್ರಜ್ಞೆ ರೈತರಲ್ಲಿ ಮೂಡದಿದ್ದರೆ ಈ ದೇಶದಲ್ಲಿ ರೈತರ ಆತ್ಮಹತ್ಯೆಗಳು ನಿಲ್ಲುವುದಿಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾ ಅಕ್ಕಿ ಅಭಿಪ್ರಾಯಪಟ್ಟರು.
Vijaya Karnataka Web the farmer has no future unless a rational conflict begins
ವೈಚಾರಿಕ ಸಂಘರ್ಷ ಆರಂಭಗೊಳ್ಳದಿದ್ದರೆ ರೈತನಿಗೆ ಭವಿಷ್ಯವಿಲ್ಲ

ಇಲ್ಲಿನಡೆದ ಕನ್ನಡ ನುಡಿ ಸಂಭ್ರಮದಲ್ಲಿ'ಕೃಷಿ ಸಮ್ಮೇಳನ' ಉದ್ಘಾಟಿಸಿ ಮಾತನಾಡಿದ ಅವರು, ರೈತನನ್ನು ಆರ್ಥಿಕವಾಗಿ ದಿವಾಳಿ ಎಬ್ಬಿಸುವ ನೀತಿಗಳು ದೇಶದಲ್ಲಿಹೆಚ್ಚುತ್ತಿವೆ. ಇದನ್ನು ಪ್ರಶ್ನಿಸಬೇಕಾದ ರೈತ ಇಂದಿಗೂ ಮುಗ್ಧತೆಯಲ್ಲಿಕಾಲಕಳೆಯುತ್ತಿದ್ದಾನೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ ಮಾತನಾಡಿ, ದೇಶದಲ್ಲಿರಾಜನೀತಿ ಮೂಲಕ ಕೃಷಿಯ ಬಗೆಗೆ ಅಸಹಾಯಕತೆ, ಅಶಕ್ತತೆ ಮೂಡಿಸುವ ಯತ್ನ ನಡೆದಿರುವ ಪರಿಣಾಮ ಕೃಷಿ ಸಂಸ್ಕೃತಿ ನಾಶ ಹೊಂದುತ್ತಿದೆ. ಸರಕಾರದ ಮೋಸದಿಂದ ರೈತ ಸಾಲಗಾರನಾಗಿದ್ದಾನೆ. ರೈತನ ಬಳಿ ಸಾಲ ಕಟ್ಟಲು ನಯಾ ಪೈಸೆಯೂ ಇಲ್ಲ. ಹೀಗಿರುವಾಗ ಆತನ ರಕ್ತಹೀರುವುದು ಮಾನವೀಯತೆಯೇ? ಎಂದು ಹರಿಹಾಯ್ದರು.

ತಾಲೂಕಾಧ್ಯಕ್ಷ ಮರಿಗೌಡ ಪಾಟೀಲ, ಚಂದ್ರಕಾಂತ ಸಂಗೂರು, ಡಾ.ಪಿ.ಅಶೋಕ, ಡಾ.ರಾಜಕುಮಾರ ಜಿ.ಆರ್‌., ಡಾ.ಸಂತೋಷ ಎಚ್‌.ಎಂ., ಮಹೇಶ ವಿರಪಣ್ಣನವರ, ರುದ್ರಪ್ಪ ಹಣ್ಣಿ, ಶಂಭುಗೌಡ ಪಾಟೀಲ, ಶ್ರೀಕಾಂತ ದುಂಡಣ್ಣನವರ, ರಾಜೇಂದ್ರ ಚವಟಿ, ಮಂಜುನಾಥ ಉಜ್ಜಪ್ಪನವರ, ಚನ್ನಪ್ಪ ಪಾವಲಿ, ಶಹನವಾಜ ಹಸನಾಬಾದಿ, ಶಾಂತವ್ವ ಕರ್ಜಗಿ, ಸಿದ್ದಲಿಂಗೇಶ ಸಿಂಧೂರ, ಸದಾಶಿವ ಕಂಬಾಳಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ