ಆ್ಯಪ್ನಗರ

ಬಂದ ದಾರಿಗೆ ಕಾಡಾನೆಗಳು ವಾಪಸ್‌

ಹಾನಗಲ್ಲ: ನಾಲ್ಕು ದಿನಗಳಿಂದ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿಬೀಡು ಬಿಟ್ಟಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸುವಲ್ಲಿಅರಣ್ಯ ಇಲಾಖೆ ಯಶಸ್ವಿಯಾಗಿದೆ.

Vijaya Karnataka 24 Oct 2019, 5:00 am
ಹಾನಗಲ್ಲ: ನಾಲ್ಕು ದಿನಗಳಿಂದ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿಬೀಡು ಬಿಟ್ಟಿದ್ದ ಕಾಡಾನೆಗಳನ್ನು ಹಿಮ್ಮೆಟ್ಟಿಸುವಲ್ಲಿಅರಣ್ಯ ಇಲಾಖೆ ಯಶಸ್ವಿಯಾಗಿದೆ.
Vijaya Karnataka Web the forests are back on the way
ಬಂದ ದಾರಿಗೆ ಕಾಡಾನೆಗಳು ವಾಪಸ್‌


ಅರಣ್ಯ ಇಲಾಖೆಯ ನಿರೀಕ್ಷೆಯಂತೆ ಕಾಮನಹಳ್ಳಿ ಗ್ರಾಮ ಭಾಗದ ಕಬ್ಬಿನ ತೋಟಕ್ಕೆ ಮಂಗಳವಾರ ರಾತ್ರಿ ಆನೆಗಳು ಬಂದಿದ್ದವು. ಗಸ್ತು ಕಾಯುತ್ತಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಸಿಡಿಮದ್ದು ಸೇರಿದಂತೆ ವಿವಿಧ ರೀತಿಯ ಶಬ್ದ ಮಾಡಿಕೊಂಡು ಆನೆಗಳನ್ನು ಮಂತಗಿ ಅರಣ್ಯ ವಲಯಕ್ಕೆ ಅಟ್ಟುವಲ್ಲಿಸಫಲರಾಗಿದ್ದರು.

ಬುಧವಾರ ಬೆಳಿಗ್ಗೆಯಿಂದ ಮತ್ತೆ ಆನೆಗಳನ್ನು ಹಿಮ್ಮೆಟ್ಟಿಸುವ ಕಾರ್ಯಾಚರಣೆಗೆ ಇಳಿದಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಶ್ರಮದಿಂದ ಸದ್ಯ ಆನೆಗಳು ಮುಂಡಗೋಡ ತಾಲೂಕಿನ ಕಾತೂರ ಅರಣ್ಯ ವಲಯ ತಲುಪಿವೆ.

ಈ ಬಗ್ಗೆ ಮಾಹಿತಿ ನೀಡಿರುವ ವಲಯ ಅರಣ್ಯಾಧಿಕಾರಿ ಪರಮೇಶ್ವರಪ್ಪ ಪೇಲನವರ, ಮರಿ ಆನೆ ಜೊತೆಯಲ್ಲಿಒಂದು ಗಂಡು ಮತ್ತೊಂದು ಹೆಣ್ಣು ಆನೆ ಇದೆ. ಕಾಮನಹಳ್ಳಿ ಭಾಗದಿಂದ ಆನೆಗಳನ್ನು ಮಂಗಳವಾರ ರಾತ್ರಿ ಹಿಮ್ಮೆಟ್ಟಿಸಲಾಗಿತ್ತು. ಮಂತಗಿ ಅರಣ್ಯ ವಲಯದಲ್ಲಿರಾತ್ರಿ ಕಳೆಯಲು ಅವಕಾಶ ನೀಡಲಾಗಿತ್ತು. ಅಲ್ಲಿಂದ ಮತ್ತೆ ಅವುಗಳನ್ನು ಹಿಮ್ಮೆಟ್ಟಿಸಿ ಬಂದ ದಾರಿಗೆ ಸಾಗ ಹಾಕಲಾಗಿದೆ ಎಂದರು.

ರಾತ್ರಿ ಹೊತ್ತಿನಲ್ಲಿಮತ್ತೆ ಆನೆಗಳು ಇತ್ತ ಮರಳಬಹುದು ಎಂಬ ಯೋಚನೆಯಲ್ಲಿರುವ ಅರಣ್ಯ ಇಲಾಖೆ ಸಿಬ್ಬಂದಿ, ಕಾತೂರ ಅರಣ್ಯ ವಲಯದ ಗಡಿಯಲ್ಲಿಕಾವಲು ವ್ಯವಸ್ಥೆ ಮಾಡಿದೆ. ಪಟಾಕಿ, ಹೊಗೆ ಮತ್ತಿತರ ಸಾಮಗ್ರಿಗಳ ಸಮೇತ ರಾತ್ರಿ ಗಸ್ತು ನಡೆಸಲು ಸಿಬ್ಬಂದಿ ಸಜ್ಜಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ