ಆ್ಯಪ್ನಗರ

ಬಸವಾದಿ ಶರಣರ ವಿಚಾರಧಾರೆ ಬಹುಮುಖ್ಯ

ಬ್ಯಾಡಗಿ: ಸಾಮಾಜಿಕ ನ್ಯಾಯದ ಪರವಾದಂತಹ ಬಸವಾದಿ ಶರಣರ ವಿಚಾರಧಾರೆಗಳನ್ನು ಎಲ್ಲಿಯವರೆಗೂ ಸಂವಿಧಾನದಲ್ಲಿ ಅಳವಡಿಕೆ ಮಾಡುವುದಿಲ್ಲವೋ ಅಲ್ಲಿಯವರೆಗೂ ದೇಶದಲ್ಲಿ ಆರ್ಥಿಕ ಮತ್ತು ಧಾರ್ಮಿಕ ಅಸಮಾನತೆಗಳು ಜೀವಂತವಾಗಿ ಇರಲಿವೆ ಎಂದು ಕಸಾಪಾ ತಾಲೂಕಾಧ್ಯಕ್ಷ ಬಿ.ಎಂ.ಜಗಾಪುರ ಅಭಿಪ್ರಾಯ ವ್ಯಕ್ತಪಡಿಸಿದರು

Vijaya Karnataka 31 Jan 2020, 5:00 am
ಬ್ಯಾಡಗಿ: ಸಾಮಾಜಿಕ ನ್ಯಾಯದ ಪರವಾದಂತಹ ಬಸವಾದಿ ಶರಣರ ವಿಚಾರಧಾರೆಗಳನ್ನು ಎಲ್ಲಿಯವರೆಗೂ ಸಂವಿಧಾನದಲ್ಲಿ ಅಳವಡಿಕೆ ಮಾಡುವುದಿಲ್ಲವೋ ಅಲ್ಲಿಯವರೆಗೂ ದೇಶದಲ್ಲಿ ಆರ್ಥಿಕ ಮತ್ತು ಧಾರ್ಮಿಕ ಅಸಮಾನತೆಗಳು ಜೀವಂತವಾಗಿ ಇರಲಿವೆ ಎಂದು ಕಸಾಪಾ ತಾಲೂಕಾಧ್ಯಕ್ಷ ಬಿ.ಎಂ.ಜಗಾಪುರ ಅಭಿಪ್ರಾಯ ವ್ಯಕ್ತಪಡಿಸಿದರು
Vijaya Karnataka Web the issue of basavani surrender is important
ಬಸವಾದಿ ಶರಣರ ವಿಚಾರಧಾರೆ ಬಹುಮುಖ್ಯ


ಕನ್ನಡ ಸಾಹಿತ್ಯ ಪರಿಷತ್‌ ವತಿಯಿಂದ ಆಯೋಜಿಸಲಾಗಿದ್ದ ದತ್ತಿನಿಧಿ ಉಪನ್ಯಾಸ ಕಾರ‍್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾಯಕವೇ ಕೈಲಾಸ ಎಂದು ಬಸವಣ್ಣನವರು ಹೇಳುವ ಮೂಲಕ ದುಡಿಯದವರು ತಿನ್ನಲಿಕ್ಕೂ ಅರ್ಹರಲ್ಲಎಂಬದನ್ನು ತಮ್ಮ ವಚನದ ಸಾಲುಗಳಲ್ಲಿಸ್ಪಷ್ಟಪಡಿಸಿದ್ದಾರೆ ಇದರಿಂದ ಅವರೊಬ್ಬ ಆರ್ಥಿಕ ತಜ್ಞನಾಗಿದ್ದಾರೆ. ಜಾತಿವಿನಿಡಿದು ಸೂತಕವನರಸುವೆ ಜ್ಯೋತಿ ಯನಿಡಿದು ಕತ್ತಲೆಯನರೆಸು ಜಾತಿಯಲ್ಲಿಅಧಿಕನೆಂಬವನು ಶತಕೋಟಿಗಳಿದ್ದಲ್ಲಿಫಲವೇನು ಎಂದು ಹೇಳುವ ಮೂಲಕ ಜಾತಿ-ಮತ-ಪಂತಗಳಿಲ್ಲದ ಸಮ ಸಮಾಜವನ್ನು ಕಾಣುವಂತಹ ಪ್ರಯತ್ನ ಮಾಡಿದ್ದಾರೆ ಎಂದರು.

ಉಪಾಧ್ಯಕ್ಷ ಸುರೇಶ ಆಸಾದಿ ಮಾತನಾಡಿ, ಅಸ್ಪಶ್ಯತೆ, ಸತಿಪದ್ಧತಿ, ಬಾಲ್ಯ ವಿವಾಹ, ದೇವದಾಸಿ ಸೇರಿದಂತೆ ಇನ್ನಿತರ ಮೌಡ್ಯಾಚರಣೆಗಳು, ಅದರಲ್ಲೂಪೌರೋಹಿತ್ಯ ಶಾಹಿಗಳು ಆಚರಣೆ ನೆಪದಲ್ಲಿಸಮಾಜದ ಜನರ ಮೇಲೆ ಒತ್ತಡ ಹೇರುತ್ತಿದ್ದ ಸಂಧಿಗ್ಧ ಸಂಕ್ರಮಣದ ಸಮಯದಲ್ಲಿಪ್ರಚಲಿತಕ್ಕೆ ಬಂದಂತಹ ಬಸವಾದಿ ಶರಣರ ವಚನಗಳು ಹೋರಾಟದ ಪ್ರತಿರೂಪವಾಗಿದ್ದನ್ನು ಸ್ಮರಿಸಿಕೊಳ್ಳಬೇಕಾಗುತ್ತದೆ ಎಂದರು.

ವಿರೇಶ ಶಿರೂರ ಮಾತನಾಡಿ, ಸಾಂಸ್ಕೃತಿಕ ಚಳಿವಳಿಯ ನಾಯಕನಾಗಿ ಹೊರಹೊಮ್ಮಿದ ಬಸವೇಶ್ವರರು, ಅಂಬಿಗರ ಚೌಡಯ್ಯ, ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ ಸೇರಿದಂತೆ ಶರಣ ಸಂಸ್ಕೃತಿಯನ್ನು ಒಪ್ಪಿಕೊಂಡಂತಹ ಎಲ್ಲಧರ್ಮ ಮತ್ತು ಜಾತಿಯ ಸಮಾನ ಮನಸ್ಕರನ್ನು ಒಂದುಗೂಡಿಸುವ ಮೂಲಕ ಪೌರೋ ಹಿತ್ಯಶಾ ಹಿಯ ವಿರುದ್ಧ ಸಾಂಸ್ಕೃತಿಕ ಚಳುವಳಿಯನ್ನು ಆರಂಭಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ ಎಂದರು. ವೇದಿಕೆಯಲ್ಲಿಎಸ್‌.ಎನ್‌. ಯಮನಕ್ಕವರ, ವಿರೇಂದ್ರ ಶೆಟ್ಟರ್‌, ಅವಿನಾಶ ಮೋಹಿತೆ ಸೇರಿದಂತೆ ಇನ್ನಿತರರು ಉಸಸ್ಥಿತರಿದ್ದರು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ