ಆ್ಯಪ್ನಗರ

ಪೈಪ್‌ ಕಳ್ಳತನ ಕೇಸ್‌: ಬಸೇಗಣ್ಣಿ-ಓಲೇಕಾರ ವಾಕ್ಸಮರ

ಹಾವೇರಿ: ಪೈಪ್‌ ಕಳವಾಗಲು ಕಾರಣರಾದ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ ಎನ್ನುವುದು ದಬ್ಬಾಳಿಕೆ. ಬಸೇಗಣ್ಣಿ ಒತ್ತಡಕ್ಕೆ ಅಧಿಕಾರಿಗಳು ಕೇಸ್‌ ಹಾಕಿದ್ದಾರೆ. ಇವರು ಹಾಕುವುದೇನು? ಹಾಕಿಸುವುದೇನು? ಅಳಿಯ ಅಲ್ಲ-ಮಗಳ ಗಂಡ ಅಲ್ಲವೇ? ಎಂದು ಶಾಸಕ ನೆಹರು ಓಲೇಕಾರ ತಿರುಗೇಟು ನೀಡಿದ್ದಾರೆ.

Vijaya Karnataka 28 Jun 2019, 5:00 am
ಹಾವೇರಿ: ಪೈಪ್‌ ಕಳವಾಗಲು ಕಾರಣರಾದ ಅಧಿಕಾರಿಗಳನ್ನು ಸಸ್ಪೆಂಡ್‌ ಮಾಡಿ ಎನ್ನುವುದು ದಬ್ಬಾಳಿಕೆ. ಬಸೇಗಣ್ಣಿ ಒತ್ತಡಕ್ಕೆ ಅಧಿಕಾರಿಗಳು ಕೇಸ್‌ ಹಾಕಿದ್ದಾರೆ. ಇವರು ಹಾಕುವುದೇನು? ಹಾಕಿಸುವುದೇನು? ಅಳಿಯ ಅಲ್ಲ-ಮಗಳ ಗಂಡ ಅಲ್ಲವೇ? ಎಂದು ಶಾಸಕ ನೆಹರು ಓಲೇಕಾರ ತಿರುಗೇಟು ನೀಡಿದ್ದಾರೆ.
Vijaya Karnataka Web the pipe theft case the bassegane olake wax war
ಪೈಪ್‌ ಕಳ್ಳತನ ಕೇಸ್‌: ಬಸೇಗಣ್ಣಿ-ಓಲೇಕಾರ ವಾಕ್ಸಮರ


ಜಿ.ಪಂ. ಮಾಜಿ ಅಧ್ಯಕ್ಷ ಮತ್ತು ಸದಸ್ಯ ಕೊಟ್ರೇಶಪ್ಪ ಬಸೇಗಣ್ಣಿ, ಮಾಜಿ ಸಚಿವರಾದ ರುದ್ರಪ್ಪ ಲಮಾಣಿ, ಬಸವರಾಜ ಶಿವಣ್ಣನವರ ಸುದ್ದಿಗೋಷ್ಠಿಗೆ ಪ್ರತ್ಯುತ್ತರವಾಗಿ ದೂರವಾಣಿ ಮೂಲಕ ವಿಕಗೆ ಪ್ರತಿಕ್ರಿಯೆ ನೀಡಿದ್ದಾರೆ.

ತುಂಗಾ ಮೇಲ್ದಂಡೆ ಯೋಜನೆ ರೈತರಿಗೆ ನೀರಾವರಿ ಸೌಲಭ್ಯ ಒದಗಿಸುವುದಕ್ಕೆ ಮಾತ್ರ. ಈ ನೀರನ್ನು ಅಚ್ಚುಕಟ್ಟು ಪ್ರದೇಶದ ರೈತರು ಯಾವುದೇ ಕಾರಣಕ್ಕೂ ಪೈಪ್‌ಲೈನ್‌ ಮೂಲಕ ನೀರು ಪಡೆದುಕೊಳ್ಳಲು ಅವಕಾಶ ಇಲ್ಲ. ಇದಕ್ಕೆ ಅನುಮತಿ ನೀಡಿದಲ್ಲಿ ಮುಂದಿನ ರೈತರಿಗೆ ನೀರು ಸಿಗುವುದಿಲ್ಲ ಎನ್ನುವ ಉದ್ದೇಶವಿದೆ. ಈ ನಿಯಮ ನನಗೂ ತಿಳಿದಿದೆ. ಯಾರಿಂದಲೂ ನಾನು ಪಾಠ ಕಲಿಯಬೇಕಿಲ್ಲ ಎಂದಿದ್ದಾರೆ.

ಮಳೆಗಾಲದಲ್ಲಿ ಯುಟಿಪಿ ಯೋಜನೆ ಮೂಲಕ ಹರಿಯುವ ನೀರನ್ನು ರೈತರು ಯಾರೂ ಬಳಸಿಕೊಳ್ಳದ ಕಾರಣಕ್ಕೆ ನೀರು ವ್ಯರ್ಥವಾಗಿ ಹೊಳಿ-ಹಳ್ಳದ ಮೂಲಕ ನದಿ ಸೇರುತ್ತದೆ. ಇದರಿಂದ ರೈತರಿಗೆ ಉಪಯೋಗ ಇಲ್ಲ. ಈ ವ್ಯರ್ಥವಾಗಿ ಹರಿಯುವ ನೀರನ್ನೇ ಕೆರೆ ಕಟ್ಟೆಗಳನ್ನು ತುಂಬಿಸಲು ಕೋಟ್ಯಂತರ ಹಣದ ಅಗತ್ಯವಿಲ್ಲ.

ಕುಡಿಯಲು ನೀರು ಬೇಕಿರುವುದು ಜನರಿಗಿಂತ ದನಕರುಗಳಿಗೆ ಎನ್ನುವುದನ್ನು ಬಸೇಗಣ್ಣಿ ಸೇರಿದಂತೆ ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಕೆರೆ ಕಟ್ಟೆಗಳಲ್ಲಿ ನೀರಿದ್ದರೆ ಮಾತ್ರ ಜನರಿಗೆ ಮತ್ತು ದನಕರುಗಳಿಗೆ ನೀರು ದೊರೆಯಲು ಸಾಧ್ಯ. ಈ ಕಾರಣಕ್ಕೆ ಕನವಳ್ಳಿ ಕೆರೆ ತುಂಬಿಸಲು ಅಗತ್ಯವಿರುವ ಪೈಪ್‌ಗಳನ್ನು ಬಳಸಿಕೊಳ್ಳಲಾಗಿದೆಯೇ ವಿನಃ ದಬ್ಬಾಳಿಕೆ ಮೂಲಕ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇವರ ಆಡಳಿತಾವಧಿಯಲ್ಲಿ ಕಚೇರಿಗಳು ಅಕ್ಷರಶಃ ಕೊಂಡವಾಡ ಆಗಿದ್ದವು. ಅಧಿಕಾರಿಗಳು ಜನರ ಕೈಗೇ ಸಿಗದೇ ಇವರ ಕಾರ್ಯವೈಖರಿಗೆ ಬೇಸತ್ತು ರಜೆ ಹಾಕಿ ಮನೆಯಲ್ಲಿರುತ್ತಿದ್ದರು. ಈಗ ಅಧಿಕಾರಿಗಳನ್ನು ಹೆದರಿಸಿಲ್ಲ. ಅವರಿಗೆ ಜನರ ಕೆಲಸ ಮಾಡಿಕೊಡುವಂತೆ ತಿಳಿ ಹೇಳಿರುವ ಕಾರಣಕ್ಕೆ ಎಲ್ಲ ಕೆಲಸಗಳೂ ನಡೆಯುತ್ತಿವೆ. ನನ್ನನ್ನು ಹೆದರಿಸುವ ಶಾಸಕ ಎನ್ನುವ ಬಸೇಗಣ್ಣಿ ನಿಜವಾದ ದುಂಡಾವರ್ತನೆ ಮಾಡಿದ್ದಾರೆ ಎನ್ನುವುದಕ್ಕೆ ಚುನಾವಣೆ ಸಂದರ್ಭ ಕಾರ್ಯಕರ್ತರ ಮೇಲಿನ ಹಲ್ಲೆಯೇ ಸಾಕ್ಷಿ ಎಂದರು.

ಮಾಜಿ ಸಚಿವ ಲಮಾಣಿ, ಬಸೇಗಣ್ಣಿ ಅವರು ಕೀಲಿ ಕೊಟ್ಟರೆ ಕುಣಿಯುವ ಗೊಂಬೆ ಇದ್ದಂಗ. ಎಂ.ಪಿ. ಎಲೆಕ್ಷನ್‌ ಫಲಿತಾಂಶ ಅವರಿಗೆ ಕರೆಂಟ್‌ ಶಾಕ್‌ ಕೊಟ್ಟ ಕಾಗೆಯಂತೆ ವರ್ತಿಸುವಂತೆ ಮಾಡಿದೆ ಎಂದು ಲೇವಡಿ ಮಾಡಿದರು. ಕೈಯ್ಯಲ್ಲಿ ಅಗದವರು ಮೈ ಪರಚಿಕೊಂಡಂತೆ ನನ್ನ ಅಧಿಕಾರವನ್ನು ಸಹಿಸದೇ ಅಧಿಕಾರಿಗಳನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ. ನಾನು ಬಸೇಗಣ್ಣಿ ಅವರನ್ನು ಹೊಡೆಯರಿ ಎಂದು ಯಾರಿಗೂ ಹೇಳಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ