ಆ್ಯಪ್ನಗರ

ವಿಶ್ವಕರ್ಮ ಸಮಾಜದ ಪಾತ್ರ ಮಹತ್ತರ

ಗುತ್ತಲ: ಜಗತ್ತಿಗೆ ಶಿಲ್ಪಕಲೆ ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ, ಲಕ್ಷಾಂತರ ಶಿಲ್ಪಕಲಾ ಕೃತಿಗಳಿಗೆ ಜೀವ ತುಂಬುವ ಕೆಲಸ ಮಾಡುವಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ಮಹತ್ತರವಾಗಿದೆ ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.

Vijaya Karnataka 28 Jun 2019, 5:00 am
ಗುತ್ತಲ: ಜಗತ್ತಿಗೆ ಶಿಲ್ಪಕಲೆ ಪರಿಚಯಿಸಿದ ಕೀರ್ತಿ ವಿಶ್ವಕರ್ಮ ಸಮಾಜಕ್ಕೆ ಸಲ್ಲುತ್ತದೆ, ಲಕ್ಷಾಂತರ ಶಿಲ್ಪಕಲಾ ಕೃತಿಗಳಿಗೆ ಜೀವ ತುಂಬುವ ಕೆಲಸ ಮಾಡುವಲ್ಲಿ ವಿಶ್ವಕರ್ಮ ಸಮಾಜದ ಪಾತ್ರ ಮಹತ್ತರವಾಗಿದೆ ಎಂದು ಕಲ್ಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು.
Vijaya Karnataka Web the role of the vishwakarma society is great
ವಿಶ್ವಕರ್ಮ ಸಮಾಜದ ಪಾತ್ರ ಮಹತ್ತರ


ಪಟ್ಟಣದ ಈಶ್ವರ ದೇವಸ್ಥಾನದ ಬಳಿಯಿರುವ ಶ್ರೀ ಕಾಳಿಕಾದೇವಿಯ ನೂತನ ದೇವಸ್ಥಾನ ಉದ್ಘಾಟನಾ ಸಮಾರಂಭದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನರ ನೋವು, ದುಃಖ ನಿವಾರಣೆ ಮಾಡಿಕೊಳ್ಳಲು ಇರುವ ದೇವಸ್ಥಾನಗಳೇ ಧಾರ್ಮಿಕ ಶ್ರದ್ಧಾ ಕೇಂದ್ರಗಳಾಗುತ್ತಿವೆ. ಅಂತಹ ಶ್ರದ್ಧಾ ಕೇಂದ್ರವಾಗಿ ಕಾಳಿಕಾ ಮಾತೆಯ ದೇವಸ್ಥಾನ ಹೊರಹೊಮ್ಮಬೇಕು. ಈ ನಿಟ್ಟಿನಲ್ಲಿ ವಿಶ್ವಕರ್ಮ ಸಮಾಜ ಒಗ್ಗೂಡಿ ಕೆಲಸ ಮಾಡಬೇಕು ಅಂದಾಗ ಮಾತ್ರ ಸಮಾಜದಲ್ಲಿ ತಮ್ಮದೇಯಾದ ಸ್ಥಾನಮಾನ ಹೊಂದಬಹುದು ಎಂದರು.

ಸಾನಿಧ್ಯ ವಹಿಸಿದ ವರವಿಯ ವಿರುಪಾಕ್ಷ ಸ್ವಾಮೀಜಿ ಮಾತನಾಡಿ ಪ್ರಸ್ತುತವಾಗಿ ಧಾರ್ಮಿಕ ಪರಂಪರೆಯನ್ನು ಯುವ ಜನಾಂಗ ಮರೆಯುತ್ತಿದ್ದು, ತಾಯಂದಿರು ಬಾಲ್ಯದಲ್ಲಿಯೇ ಮಕ್ಕಳಿಗೆ ದೇವರು ಹಾಗೂ ಧರ್ಮದ ಬಗ್ಗೆ ಭಕ್ತಿಯನ್ನು ಹೊಂದುವಂತೆ ಕಲಿಸಬೇಕು ಎಂದರು.

ಮಂಗಳವಾರ ಪ್ರಾತಃಕಾಲ ಬ್ರಾಹ್ಮಿ ಮೂಹೂರ್ತದಲ್ಲಿ ಶ್ರೀ ಕಾಳಿಕಾದೇವಿಯ ಮೂರ್ತಿಗೆ ಮಹಾ ರುದ್ರಾಭಿಷೇಕ ನಂತರ ಹೋಮ ಹವನಗಳು ಜರುಗಿದವು ನಂತರ ಮಧ್ಯಾಹ್ನ ಹೇಮಗಿರಿ ಚನ್ನಬಸವೇಶ್ವರ ಮಠದ ಪ್ರಸಾದ ನಿಲಯದ ಆವರಣದಲ್ಲಿ ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು. ದೇವಸ್ಥಾನ ನಿರ್ಮಾಣಕ್ಕೆ ಸಹಾಯ, ಸಹಕಾರ ನೀಡಿದ ಅನೇಕ ಮುಖಂಡರಿಗೆ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಕೋಟೆಕಲ್‌ ಕ್ಯಾಂಪನ ಅಜಾತ ಸದ್ಗುರು ನಾಗಲಿಂಗ ಸ್ವಾಮೀಜಿ, ನವಲಿ ಹಿರೇಮಠದ ಅಭಿನವ ಶಿವಲಿಂಗ ರುದ್ರಮುನಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಬಂಜಾರ ಸಮಾಜದ ಅಧ್ಯಕ್ಷ ಈರಪ್ಪ ಲಮಾಣಿ, ತಾ.ಪಂ ಮಾಜಿ ಅಧ್ಯಕ್ಷ ಪರಮೇಶಪ್ಪ ಕುರುವತ್ತಿಗೌಡ್ರ, ಪಿಎಸ್‌ಐ ಸಿದ್ಧಾರೂಡ ಬಡಿಗೇರ, ಪ.ಪಂ ಸದಸ್ಯರಾದ ನಾಗರಾಜ ಎರಿಮನಿ, ರಮೇಶ ಮಠದ, ವಿಶ್ವನಾಥ, ಕಮ್ಮಾರ, ಮಹೇಶ ಅರ್ಕಸಾಲಿ ಸೇರಿದಂಂತೆ ಗುತ್ತಲ. ಗಳಗನಾಥ, ನೆಗಳೂರ, ಹಾವೇರಿ, ರಾಣೇಬೆನ್ನುರ, ಚೌಡಯ್ಯದಾನಪುರ ಸೇರಿದಂತೆ ಅನೇಕ ಕಡೆಗಳಿಂದ ಭಕ್ತರು ಆಗಮಿಸಿದ್ದರು. ಮಾರುತಿ ಕೋಡಬಾಳ ನಿರೂಪಿಸಿದರು, ಪಿ.ಎನ್‌ ನೆಗಳೂರಮಠ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ