ಆ್ಯಪ್ನಗರ

ನಿಲ್ಲದ ನದಿಗಳ ಆರ್ಭಟ

ರಟ್ಟೀಹಳ್ಳಿ: ರಟ್ಟೀಹಳ್ಳಿ ಸೇರಿದಂತೆ ಕುಮದ್ವತಿ ನದಿ ಪಾತ್ರದ ಊರುಗಳ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ಕುಮದ್ವತಿ ನದಿ ನೀರು ನುಗ್ಗಿ ಹಲವು ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ.

Vijaya Karnataka 11 Aug 2019, 5:00 am
ರಟ್ಟೀಹಳ್ಳಿ: ರಟ್ಟೀಹಳ್ಳಿ ಸೇರಿದಂತೆ ಕುಮದ್ವತಿ ನದಿ ಪಾತ್ರದ ಊರುಗಳ ಜಮೀನುಗಳಿಗೆ ಅಪಾರ ಪ್ರಮಾಣದಲ್ಲಿ ಕುಮದ್ವತಿ ನದಿ ನೀರು ನುಗ್ಗಿ ಹಲವು ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು ಅಪಾರ ಹಾನಿಯಾಗಿದೆ.
Vijaya Karnataka Web HVR-10 RATTIHALLI  2,,


ಹಳ್ಳಿಗಳಾದ ತಿಪ್ಪಾಯಿಕೊಪ್ಪ, ಮಾಸೂರು, ಖಂಡೆಬಾಗೂರು, ರಾಮತೀರ್ಥ, ಹಿರೇಮೊರಬ, ಚಿಕ್ಕಮೊರಬ, ಎಲಿವಾಳ, ಮಾಳಗಿ,ರಟ್ಟೀಹಳ್ಳಿ, ತೋಟಗಂಟಿ, ಸಣ್ಣಗುಬ್ಬಿ, ಹಿರೇಮಾದಾಪುರ, ಯಡಗೋಡ, ಬಡಸಂಗಾಪುರ, ಕುಡುಪಲಿ ಸೇರಿದಂತೆ ಕುಮದ್ವತಿ ನದಿ ಪಕ್ಕ ಇರುವ ಜಮೀನುಗಳಿಗೆ ಶನಿವಾರ ಬೆಳಿಗ್ಗೆ ನೀರು ನುಗ್ಗಿದೆ. ನದಿ ಪಾತ್ರದ ಜಮೀನುಗಳಲ್ಲಿ ಬೆಳೆಯಲಾಗಿದ್ದ ಗೋವಿನಜೋಳ, ಹತ್ತಿ, ಮೆಣಸಿನಗಿಡ, ಬಾಳೆತೋಟ, ಟಮೋಟೋ, ಬದನೆಕಾಯಿ, ಬೀಜೋತ್ಪಾದನ ಬೆಳೆಗಳು ಸೇರಿದಂತೆ ಹಲವು ಬೆಳೆಗಳು ಕುಮದ್ವತಿ ನೀರಿನಿಂದ ಹಾನಿಗೀಡಾಗಿವೆ. ಸರಕಾರ ಸೂಕ್ತ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕೆಂದು ಉತ್ತರ ಕರ್ನಾಟಕ ಪ್ರದೇಶ ರೈತ ಹಾಗೂ ರೈತ ಕಾರ್ಮಿಕ ಸಂಘದ ರಾಜ್ಯಾಧ್ಯಕ್ಷ ಬಸವರಾಜ ಬೇವಿನಹಳ್ಳಿ ಸರಕಾರಕ್ಕೆ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ