ಆ್ಯಪ್ನಗರ

ರೈತರಿಗೆ ಮಾಡಿದ ಅವಮಾನ : ಕಬ್ಬಾರ ಆರೋಪ

ರಾಣೇಬೆನ್ನೂರ : ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿ ಕೊನೆಕ್ಷ ಣದಲ್ಲಿ ಕೈಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಹಾಗೂ ಅರಣ್ಯ ಸಚಿವ ಆರ್‌.ಶಂಕರ್‌ ವರ್ತನೆ ಅನ್ನದಾತರಿಗೆ ಮಾಡಿದ ಅವಮಾನವಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ತಾಲೂಕ ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಆರೋಪಿಸಿದರು.

Vijaya Karnataka 24 Nov 2018, 5:00 am
ರಾಣೇಬೆನ್ನೂರ : ತಾಲೂಕಿನ ಬರಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದಾಗಿ ತಿಳಿಸಿ ಕೊನೆಕ್ಷ ಣದಲ್ಲಿ ಕೈಕೊಟ್ಟ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್‌ ಅಹ್ಮದ್‌ ಹಾಗೂ ಅರಣ್ಯ ಸಚಿವ ಆರ್‌.ಶಂಕರ್‌ ವರ್ತನೆ ಅನ್ನದಾತರಿಗೆ ಮಾಡಿದ ಅವಮಾನವಾಗಿದೆ ಎಂದು ಕರ್ನಾಟಕ ರಾಜ್ಯ ರೈತಸಂಘದ ತಾಲೂಕ ಘಟಕದ ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಆರೋಪಿಸಿದರು.
Vijaya Karnataka Web the shame of farmers
ರೈತರಿಗೆ ಮಾಡಿದ ಅವಮಾನ : ಕಬ್ಬಾರ ಆರೋಪ


ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾ ಉಸ್ತುವಾರಿ ಸಚಿವರ ಪ್ರವಾಸ ಪಟ್ಟಿಯಲ್ಲಿ ಜಿಲ್ಲೆಯ ಏಕೈಕ ಬರಪೀಡಿತ ತಾಲೂಕಾಗಿರುವ ರಾಣೇಬೆನ್ನೂರಿನ ಕಾಕೋಳ, ಕಜ್ಜರಿ ಮತ್ತು ಕಮದೋಡ ಗ್ರಾಮಗಳಿಗೆ ಭೇಟಿ ಕಾರ್ಯಕ್ರಮ ನಿಗದಿಪಡಿಸಲಾಗಿತ್ತು. ಆದರೆ ಸಚಿವ ಜಮೀರ್‌ ಅಹ್ಮದ್‌ ಹಾವೇರಿಯಲ್ಲಿ ತ್ರೈಮಾಸಿಕ ಸಭೆ ನಡೆಸಿ ಸಂಜೆ 7ರ ಸಮಯದಲ್ಲಿ ಕಾಕೋಳ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಪಕ್ಕದಲ್ಲಿನ ಹೊಲಗಳ ವೀಕ್ಷ ಣೆಗೆ ಮುಂದಾಗಿದ್ದರು. ಆಗ ರಾತ್ರಿಯಾಗಿದ್ದರಿಂದ ಕತ್ತಲಿನಲ್ಲಿ ಯಾವ ರೀತಿ ಸಮೀಕ್ಷೆ ಮಾಡುವಿರಿ ಎಂದು ಸ್ಥಳದಲ್ಲಿದ್ದ ರೈತರು ತರಾಟೆಗೆ ತೆಗೆದುಕೊಂಡಾಗ ರೈತರ ಪ್ರಶ್ನೆಗಳಿಗೆ ಉತ್ತರಿಸದೇ ಹಿರೇಕೆರೂರಿನ ಶಾಸಕ ಬಿ.ಸಿ.ಪಾಟೀಲರ ಮನೆಗೆ ತೆರಳಿದ್ದಾರೆ. ಇದಲ್ಲದೆ ಸಚಿವರ ಆಗಮನಕ್ಕಾಗಿ ನಗರದ ಪ್ರವಾಸಿ ಮಂದಿರದಲ್ಲಿ ಅನೇಕ ರೈತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಕಾಯುತ್ತಾ ನಿಂತಿದ್ದರು. ಆದರೆ ಅದಕ್ಕೂ ಕ್ಯಾರೆ ಎನ್ನದ ಸಚಿವರು ಹಿರೇಕೆರೂರಿಗೆ ತೆರಳಿರುವುದು ನಿಜಕ್ಕೂ ಖೇದಕರ ಸಂಗತಿಯಾಗಿದೆ. ಇನ್ನು ಸ್ಥಳೀಯ ಶಾಸಕ ಮತ್ತು ಅರಣ್ಯ ಸಚಿವ ಆರ್‌.ಶಂಕರ್‌ ತ್ರೈಮಾಸಿಕ ಸಭೆಗೆ ಹಾಜರಾಗಿಲ್ಲ ಮತ್ತು ರಾಣೇಬೆನ್ನೂರಿಗೆ ಆಗಮಿಸದಿರುವುದು ರೈತರ ಬಗ್ಗೆ ಸಮ್ಮಿಶ್ರ ಸರಕಾರ ಸಚಿವರುಗಳಿಗೆ ಇರುವ ಬದ್ಧತೆಯನ್ನು ಎತ್ತಿ ತೋರಿಸುತ್ತದೆ. ರಾಣೇಬೆನ್ನೂರ ತಾಲೂಕಿನ ರೈತರು ತಾವು ಬೆಳೆದ ಬೆಳೆಗಳಿಗೆ ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ದೊರಕದೆ ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸಿದಾಗಲೂ ಆಗಮಿಸದ ಸಚಿವರ ಬಗ್ಗೆ ಕ್ಷೇತ್ರದ ಜನತೆ ಭ್ರಮನಿರಸನಗೊಳ್ಳುವಂತಾಗಿದೆ. ಇತ್ತೀಚೆಗೆ ಮಳೆಯಿಂದ ಹಾನಿಗೀಡಾಗಿರುವ ಭತ್ತ. ಮೆಕ್ಕೆಜೋಳ, ಈರುಳ್ಳಿ, ಬಳ್ಳೊಳ್ಳಿ ಬೆಳೆದ ರೈತರೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯವನ್ನು ಉಭಯ ಸಚಿವರುಗಳು ಮಾಡಬೇಕು ಇಲ್ಲವಾದರೆ ರೈತ ಸಂಘಟನೆ ವತಿಯಿಂದ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ