ಆ್ಯಪ್ನಗರ

ಮೊಳಕೆಯೊಡೆದ ಪೈರು ಜಿಂಕೆ ಪಾಲು

ಅಕ್ಕಿಆಲೂರು: ಹಾನಗಲ್‌ ತಾಲೂಕಿನ ಹರವಿ ಸೇರಿದಂತೆ ಆ ಭಾಗದ ಗ್ರಾಮಗಳ ಕೃಷಿ ಭೂಮಿಯಲ್ಲಿಬಿತ್ತನೆಗೊಂಡು ಮೊಳಕೆಯೊಡೆದಿರುವ ಪೈರು ಜಿಂಕೆ ಮತ್ತು ಕೃಷ್ಣಮೃಗಗಳ ಪಾಲಾಗುತ್ತಿವೆ. ಬೆಳೆಯುತ್ತಿರುವ ಪೈರು ಕಣ್ಣೆದುರಿಗೆ ಹಾಳಾಗುತ್ತಿರುವುದು ರೈತರ ಕಣ್ಣಲ್ಲಿನೀರು ತರಿಸುತ್ತಿದೆ.

Vijaya Karnataka 20 Jun 2020, 5:00 am
ಅಕ್ಕಿಆಲೂರು: ಹಾನಗಲ್‌ ತಾಲೂಕಿನ ಹರವಿ ಸೇರಿದಂತೆ ಆ ಭಾಗದ ಗ್ರಾಮಗಳ ಕೃಷಿ ಭೂಮಿಯಲ್ಲಿಬಿತ್ತನೆಗೊಂಡು ಮೊಳಕೆಯೊಡೆದಿರುವ ಪೈರು ಜಿಂಕೆ ಮತ್ತು ಕೃಷ್ಣಮೃಗಗಳ ಪಾಲಾಗುತ್ತಿವೆ. ಬೆಳೆಯುತ್ತಿರುವ ಪೈರು ಕಣ್ಣೆದುರಿಗೆ ಹಾಳಾಗುತ್ತಿರುವುದು ರೈತರ ಕಣ್ಣಲ್ಲಿನೀರು ತರಿಸುತ್ತಿದೆ.
Vijaya Karnataka Web 19AKR1_23
ಹರವಿಯಲ್ಲಿಕೃಷಿ ಭೂಮಿಯಲ್ಲಿದಾಳಿ ನಿರತ ಜಿಂಕೆ ಹಿಂಡು.


ಹರವಿ ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿಕಳೆದ ಹಲವು ದಿನಗಳಲ್ಲಿಕೃಷಿ ಭೂಮಿಗಳಿಗೆ ಲಗ್ಗೆ ಇಡುತ್ತಿರುವ ಜಿಂಕೆ ಮತ್ತು ಕೃಷ್ಣಮೃಗಗಳ ಹಿಂಡು ಅಪಾರ ಪ್ರಮಾಣದಲ್ಲಿಪೈರು ನಾಶಪಡಿಸುತ್ತಿರುವುದು ರೈತನ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಹರವಿ, ಹರನಗಿರಿ, ವರ್ದಿ, ನರೇಗಲ್‌ ಸೇರಿದಂತೆ ಸುತ್ತಲಿನ ಗ್ರಾಮಗಳಲ್ಲಿಜಿಂಕೆ ಹಾವಳಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ವಿಪರೀತವಾಗಿದೆ. ಈ ಪ್ರದೇಶದ ಬಹುತೇಕ ಕೃಷಿ ಜಮೀನುಗಳಲ್ಲಿಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಮೊಳಕೆಯೊಡೆದಿರುವ ಬೆಳೆಗಳು ನಳನಳಿಸುತ್ತಿವೆ. ಇಂಥÜ ಸಂದರ್ಭದಲ್ಲಿಜಿಂಕೆಗಳು ಹಿಂಡು, ಹಿಂಡಾಗಿ ಕೃಷಿ ಭೂಮಿಯಲ್ಲಿದಾಳಿ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಈ ಭಾಗದಲ್ಲಿಜಿಂಕೆ, ಕೃಷ್ಣಮೃಗಗಳ ಹಾವಳಿ ಮೊದಲಿನಿಂದಲೂ ಹೆಚ್ಚಿದೆ. ಬಿತ್ತನೆ ಪೂರ್ಣಗೊಂಡ ಬಳಿಕ ಕೃಷಿ ಜಮೀನುಗಳನ್ನು ಹಗಲಿರುಳು ಕಾಯಬೇಕಾದ ಅನಿವಾರ್ಯ ಸ್ಥಿತಿ ಇಲ್ಲಿನ ರೈತರದ್ದಾಗಿದೆ. ಒಂದೊಂದು ಹಿಂಡಿನಲ್ಲಿ30-40 ರಷ್ಟಿರುವ ಜಿಂಕೆಗಳು ಕೇವಲ ಅರ್ಧ ಗಂಟೆ ಅವಧಿಯೊಳಗೆ 2-3 ಎಕರೆ ಪ್ರದೇಶದಲ್ಲಿನ ಬೆಳೆಗಳನ್ನು ನಾಶಪಡಿಸುತ್ತಿವೆ. ಮನುಷ್ಯನ ವಾಸನೆ ಮೂಗಿಗೆ ಬಡಿಯುತ್ತಿದ್ದಂತೆಯೇ ಅಲ್ಲಿಂದ ಕಾಲಿಗೆ ಬುದ್ಧಿ ಹೇಳುತ್ತವೆ.

ಇದೇ ಪ್ರದೇಶದಲ್ಲಿರುವ ವರದಾ ನದಿಯ ದಡದಲ್ಲಿನ ಗಿಡ-ಮರಗಳ ಪೊದೆಗಳಲ್ಲಿಜಿಂಕೆ ಹಾಗೂ ಕೃಷ್ಣಮೃಗಗಳು ವಾಸವಾಗಿವೆ. ಇವು ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿಆಹಾರ ಅರಸಿ ಬೇರೆಡೆ ತೆರಳುತ್ತವೆ. ಮಳೆಗಾಲದಲ್ಲಿಮತ್ತೆ ತಮ್ಮ ಮೂಲ ಸ್ಥಾನಕ್ಕೆ ಬಂದು ಆಹಾರಕ್ಕಾಗಿ ರೈತರ ಕೃಷಿ ಭೂಮಿಗಳನ್ನೇ ಆಶ್ರಯಿಸುತ್ತವೆ.

ಇನ್ನು ಕೆಲವು ರೈತರು ಜಿಂಕೆ ಮತ್ತು ಕೃಷ್ಣಮೃಗಗಳ ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿತಮ್ಮ ಕೃಷಿ ಭೂಮಿಯ ಅಲ್ಲಲ್ಲಿಬೆದರು ಗೊಂಬೆಗಳನ್ನು ನಿಲ್ಲಿಸುತ್ತಾರೆ. ಮನುಷ್ಯ ನಿಂತಂತೆ ಬೆದರು ಗೊಂಬೆ ಭಾಸವಾದರೆ ಸ್ವಲ್ಪಮಟ್ಟಿನ ಹಾವಳಿ ನಿಯಂತ್ರಣ ಸಾಧ್ಯ ಎನ್ನುವುದು ರೈತರ ಲೆಕ್ಕಾಚಾರ. ಆದರೆ ಮನುಷ್ಯನ ವಾಸನೆ ಬಾರದೆ, ಬೆದರು ಗೊಂಬೆಗಳ ಮೇಲೆ ಪಕ್ಷಿಗಳು ಕೂತಿರುವುದನ್ನು ಕಂಡು ಜಿಂಕೆ ಮತ್ತು ಕೃಷ್ಣಮೃಗಗಳು ನಿರ್ಭಯವಾಗಿ ಕೃಷಿ ಭೂಮಿಯಲ್ಲಿದಾಳಿ ನಡೆಸಿ ಬೆಳೆ ತಿಂದು ತೇಗುತ್ತಿವೆ.

ಈ ಪ್ರದೇಶದಲ್ಲಿಸಾಮಾನ್ಯವಾಗಿ ಜೂನ್‌, ಜುಲೈನಲ್ಲಿಜಿಂಕೆ ಮತ್ತು ಕೃಷ್ಣ ಮೃಗಗಳ ಹಾವಳಿ ಸಾಮಾನ್ಯ ಸಂಗತಿ. ಇವು ದಾಳಿ ನಡೆಸುತ್ತಿರುವ ಪರಿಣಾಮ ಅಪಾರ ಪ್ರಮಾಣದಲ್ಲಿಬೆಳೆ ನಾಶ ಸಂಭವಿಸಿ ರೈತರು ತೀವ್ರ ತೊಂದರೆ ಅನುಭವಿಸುವಂತಾಗುತ್ತದೆ. ರೈತರಿಗೆ ತೊಂದರೆ ಉಂಟು ಮಾಡುತ್ತಿರುವ ಜಿಂಕೆ ಮತ್ತು ಕೃಷ್ಣ ಮೃಗಗಳನ್ನು ಹಿಡಿದು ರಾಣೇಬೆನ್ನೂರಿನಲ್ಲಿರುವ ಕೃಷ್ಣ ಮೃಗ ಧಾಮಕ್ಕೆ ಸಾಗಿಸಬೇಕು. ಆ ಮೂಲಕ ರೈತರ ಬೆಳೆಯನ್ನು ರಕ್ಷಿಸಬೇಕು. ಈ ನಿಟ್ಟಿನಲ್ಲಿಅರಣ್ಯ ಇಲಾಖೆಯ ಅಧಿಕಾರಿಗಳು ಪ್ರಾಮಾಣಿಕ ಕಾಳಜಿ ತೋರಬೇಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ